ETV Bharat / state

ಶಿವಮೊಗ್ಗ : ಶವ ಹುಡುಕಾಟದ ವೇಳೆ ಮತ್ತೊಬ್ಬನನ್ನು ರಕ್ಷಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ

ಊಟಕ್ಕೆಂದು ತೆರಳಿದ ಅಗ್ನಿ ಶಾಮಕದಳದ ಸಿಬ್ಬಂದಿ ತಕ್ಷಣ ಮುಳುಗುತ್ತಿದ್ದ ಮಂಜುನನ್ನು ಕಂಡು ರಕ್ಷಿಸಿದ್ದಾರೆ. ನಂತರ ಅವನಿಗೆ ಬುದ್ಧಿವಾದ ಹೇಳಿ ಕಳುಹಿಸಿ ಕೊಟ್ಟಿದ್ದಾರೆ. ಹರೀಶ್ ಶವದ ಹುಡುಕಾಟವನ್ನು ಶಿವಮೊಗ್ಗದ ಅಗ್ನಿ ಶಾಮಕದಳ ಸಿಬ್ಬಂದಿ ಮಾಡುತ್ತಿದ್ದರೆ, ಅತ್ತ ಹರಿಹರದ ಮುಳುಗು ಈಜುಪಟುಗಳು ಸಹ ಶೋಧ ಮುಂದುವರೆಸಿದ್ದಾರೆ..

protection-of-a-young-man-who-falling-in-river-at-shivamogga
ಶವ ಹುಡುಕಾಟದ ವೇಳೆ ಮತ್ತೋರ್ವನನ್ನು ರಕ್ಷಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ
author img

By

Published : Oct 4, 2021, 7:02 PM IST

ಶಿವಮೊಗ್ಗ : ಪಿತೃ ಪಕ್ಷದ ಪೊಜೆಗೆಂದು ಕೂಡ್ಲಿಯ ಸಂಗಮಕ್ಕೆ ಬಂದಿದ್ದ ಹರೀಶ್ ಎಂಬಾತ ನದಿಯಲ್ಲಿ ಮುಳುಗಿ ಕಾಣೆಯಾಗಿದ್ದ. ಇಂದು ಆತನ ಹುಡುಕಾಟ ಮುಂದುವರೆಸಿದಾಗ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಮತ್ತೊಬ್ಬ ಯುವಕನನ್ನು ರಕ್ಷಿಸಿರುವ ಘಟನೆ ನಡೆದಿದೆ.

ಶವ ಹುಡುಕಾಟದ ವೇಳೆ ಮತ್ತೊಬ್ಬನನ್ನು ರಕ್ಷಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ..

ಕಡೂರು ಮೂಲದ ಹರೀಶ್ ಎಂಬಾತ ಶಿವಮೊಗ್ಗ ತಾಲೂಕು ಕೂಡ್ಲಿಯಲ್ಲಿ ಸ್ನಾನ ಮಾಡುವಾಗ ಮುಳುಗಿ ಕಾಣೆಯಾಗಿದ್ದ. ಹೀಗಾಗಿ, ಅಗ್ನಿ ಶಾಮಕದಳದವರು ಶೋಧ ಮುಂದುವರೆಸಿದ್ದಾರೆ. ಈ ವೇಳೆ, ಚಿಕ್ಕಕೊಡ್ಲಿಯ ಮಂಜು ನೀರಿಗಿಳಿದಿದ್ದರಿಂದ ಸೆಳೆತಕ್ಕೆ ಕೊಚ್ಚಿ ಹೋಗಿದ್ದ.

ಊಟಕ್ಕೆಂದು ತೆರಳಿದ ಅಗ್ನಿ ಶಾಮಕದಳದ ಸಿಬ್ಬಂದಿ ತಕ್ಷಣ ಮುಳುಗುತ್ತಿದ್ದ ಮಂಜುನನ್ನು ಕಂಡು ರಕ್ಷಿಸಿದ್ದಾರೆ. ನಂತರ ಅವನಿಗೆ ಬುದ್ಧಿವಾದ ಹೇಳಿ ಕಳುಹಿಸಿ ಕೊಟ್ಟಿದ್ದಾರೆ. ಹರೀಶ್ ಶವದ ಹುಡುಕಾಟವನ್ನು ಶಿವಮೊಗ್ಗದ ಅಗ್ನಿ ಶಾಮಕದಳ ಸಿಬ್ಬಂದಿ ಮಾಡುತ್ತಿದ್ದರೆ, ಅತ್ತ ಹರಿಹರದ ಮುಳುಗು ಈಜುಪಟುಗಳು ಸಹ ಶೋಧ ಮುಂದುವರೆಸಿದ್ದಾರೆ.

ಓದಿ: 104 ಸಹಾಯವಾಣಿ ಸಿಬ್ಬಂದಿಯ ಅಸಹಾಯಕತೆ.. ಎಲ್ಲರ ಆರೋಗ್ಯಕ್ಕಾಗಿ ದುಡಿಯುವವರಿಗೇ ವೇತನ ಸೇರಿ ಸಾಕಷ್ಟು ಸಮಸ್ಯೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.