ETV Bharat / state

ಅಡಕೆ ಹಳದಿ ಎಲೆ ರೋಗ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಿ: ತೋಟಗಾರಿಕಾ ಇಲಾಖೆ ಸೂಚನೆ - Nut yellowing disease in shimoga

ಜಿಲ್ಲೆಯ ಅಡಕೆ ಬೆಳಗಾರರಿಗೆ ಅಡಕೆ ಹಳದಿ ಎಲೆ ರೋಗದ ಕುರಿತು ಮುಂಜಾಗ್ರತಾ ಕ್ರಮಗಳನ್ನು ವಹಿಸುವ ಕುರಿತು ತೋಟಗಾರಿಕೆ ಇಲಾಖೆ ಸೂಚನೆ ನೀಡಿದೆ.

ಅಡಿಕೆ ಬೆಳೆಗೆ ಹಳದಿ ಎಲೆ ರೋಗ
author img

By

Published : Nov 20, 2019, 6:41 PM IST

ಶಿವಮೊಗ್ಗ: ತೋಟಗಾರಿಕೆ ಇಲಾಖೆಯು ಜಿಲ್ಲೆಯ ಅಡಕೆ ಬೆಳಗಾರರಿಗೆ ಅಡಕೆ ಹಳದಿ ಎಲೆ ರೋಗದ ಕುರಿತು ಮುಂಜಾಗ್ರತಾ ಕ್ರಮಗಳನ್ನು ವಹಿಸುವ ಕುರಿತು ತಿಳಿಸಿದೆ.

ಈ ರೋಗವು ಪೈಟೋಪ್ಲಾಸ್ಮಾ ಎನ್ನುವ ಸೂಕ್ಷಾಣು ಜೀವಿಯಿಂದ ಹರಡುತ್ತಿದ್ದು, ಮೊದಲು ಹೊರಸುತ್ತಿನ ಎಲೆಯ ತುದಿ ಭಾಗ ಹಳದಿಯಾಗುತ್ತದೆ. ನಂತರ ಇದು ಎಲೆಯ ಮಧ್ಯಭಾಗಕ್ಕೂ ಹರಡುತ್ತದೆ. ರೋಗ ತೀವ್ರವಾದಂತೆ ಎಲ್ಲ ಎಲೆಗಳು ಹಳದಿಯಾಗಿ, ಒಣಗಿ ಕೆಳಗೆ ಬೀಳುತ್ತವೆ. ಬೇರುಗಳ ತುದಿಯು ಗಡುಸಾಗಿ ಕಪ್ಪು ಬಣ್ಣಕ್ಕೆ ತಿರುಗವ ಸಾಧ್ಯತೆ ಇರುತ್ತದೆ. ಅಡಕೆಯು ಕಂದು ಬಣ್ಣದಾಗಿದ್ದು, ತಿನ್ನಲು ಯೋಗ್ಯವಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.

ಸೂಕ್ತ ಮುಂಜಾಗೃತ ಕ್ರಮಗಳು: ಪ್ರಚಲಿತದಲ್ಲಿರುವ ಯಾವುದೇ ಔಷಧಗಳಿಂದ ಈ ರೋಗದ ನಿವಾರಣೆ ಸಾಧ್ಯವಿಲ್ಲ. ಬಸಿಗಾಲುವೆಗಳನ್ನು ನಿರ್ಮಿಸುವುದು. ಅಲಸಂದಿ ಅಥವಾ ಇನ್ನಿತರ ಹಸಿರೆಲೆ ಬೆಳೆಗಳನ್ನು ಗಿಡಗಳ ನಡುವಿನ ಸ್ಥಳದಲ್ಲಿ ಬೆಳೆಯುವುದು. ಹಸಿರೆಲೆ ಮತ್ತು ತಿಪ್ಪೆಗೊಬ್ಬರಗಳನ್ನು ಯಥೇಚ್ಚವಾಗಿ ಒದಗಿಸುವುದು. ಬೇಸಿಗೆಯಲ್ಲಿ ಉತ್ತಮ ನೀರಿನ ನಿರ್ವಹಣೆ ಮಾಡುವುದು. ಅಡಕೆಗೆ ಶಿಫಾರಸು ಮಾಡಲಾದ ರಸಗೊಬ್ಬರಗಳನ್ನು ಹಾಗೂ ಲಘು ಪೋಷಕಾಂಶಗಳನ್ನು ತಪ್ಪದೇ ಕೊಡಬೇಕು. ಒಂದು ಕಿ. ಗ್ರಾಂ. ನಷ್ಟು ಫಾಸ್ಫೇಟ್ ಗೊಬ್ಬರ, 2 ಕಿ. ಗ್ರಾಂ. ಬೇವಿನ ಹಿಂಡಿಯನ್ನು ಎರಡು ಕಂತುಗಳಲ್ಲಿ ಗಿಡಕ್ಕೆ ಕೊಡಬೇಕು. ರೋಗ ಬಂದು ಒಣಗಿದ ಮರಗಳನ್ನು ಬೇರು ಸಮೇತ ಸುಟ್ಟುಹಾಕುವುದು ಮುಂತಾದ ಕ್ರಮಗಳನ್ನು ಕೈಗೊಳ್ಳುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Intro:ಶಿವಮೊಗ್ಗ,

ಅಡಿಕೆ ಹಳದಿ ಎಲೆ ರೋಗವನ್ನು ತಡೆಗಟ್ಟಲು ಸೂಕ್ತ ಮುಂಜಾಗೃತ ಕ್ರಮಗಳು
ತೋಟಗಾರಿಕೆ ಇಲಾಖೆಯು ಜಿಲ್ಲೆಯ ಅಡಿಕೆ ಬೆಳಗಾರರಿಗೆ ಅಡಿಕೆ ಹಳದಿ ಎಲೆರೋಗದ ಕುರಿತು ಮುಂಜಾಗ್ರತಾ ಕ್ರಮಗಳನ್ನು ವಹಿಸುವ ಕುರಿತು ತಿಳಿಸಿದೆ.
ಈ ರೋಗವು ಪೈಟೋಪ್ಲಾಸ್ಮಾ ಎನ್ನುವ ಸೂಕ್ಷಾಣು ಜೀವಿಯಿಂದ ಹರಡುತ್ತಿದ್ದು, ಮೊದಲು ಹೊರಸುತ್ತಿನ ಎಲೆಯ ತುದಿ ಭಾಗ ಹಳದಿಯಾಗುತ್ತದೆ ನಂತರ ಇದು ಎಲೆಯ ಮಧ್ಯಭಾಗಕ್ಕೂ ಹರಡುತ್ತದೆ. ರೋಗ ತೀವ್ರವಾದಂತೆ ಎಲ್ಲಾ ಎಲೆಗಳು ಹಳದಿಯಾಗಿ, ಒಣಗಿ ಕೆಳಗೆ ಬೀಳುತ್ತವೆ. ಬೇರುಗಳ ತುದಿಯು ಗಡುಸಾಗಿ ಕಪ್ಪು ಬಣ್ಣಕ್ಕೆ ತಿರುಗವ ಸಾಧ್ಯತೆ ಇರುತ್ತದೆ. ಅಡಿಕೆಯು ಕಂದು ಬಣ್ಣದಾಗಿದ್ದು ತಿನ್ನಲು ಯೋಗ್ಯವಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.
ಈ ರೋಗಕ್ಕೆ ಸೂಕ್ತ ಮುಂಜಾಗೃತ ಕ್ರಮಗಳು: ಪ್ರಚಲಿತದಲ್ಲಿರುವ ಯಾವುದೇ ಔಷಧಗಳಿಂದ ಈ ರೋಗದ ನಿವಾರಣೆ ಸಾಧ್ಯವಿಲ್ಲ. ಬಸಿಗಾಲುವೆಗಳನ್ನು ನಿರ್ಮಿಸುವುದು. ಅಲಸಂದಿ ಅಥವಾ ಇನ್ನಿತರ ಹಸಿರೆಲೆ ಬೆಳೆಗಳನ್ನು ಗಿಡಗಳ ನಡುವಿನ ಸ್ಥಳದಲ್ಲಿ ಬೆಳೆಯುವುದು. ಹಸಿರೆಲೆ ಮತ್ತು ತಿಪ್ಪೆಗೊಬ್ಬರಗಳನ್ನು ಯತೇಚ್ಚವಾಗಿ ಒದಗಿಸುವುದು. ಬೇಸಿಗೆಯಲ್ಲಿ ಉತ್ತಮ ನೀರಿನ ನಿರ್ವಹಣೆ ಮಾಡುವುದು. ಅಡಿಕೆಗೆ ಶಿಫಾರಸ್ಸು ಮಾಡಲಾದ ರಸಗೊಬ್ಬರಗಳನ್ನು ಹಾಗೂ ಲಘುಪೋಷಕಾಂಶಗಳನ್ನು ತಪ್ಪದೇ ಕೊಡಬೇಕು. ಒಂದು ಕಿ. ಗ್ರಾಂ. ನಷ್ಟು ಫಾಸ್ಫೇಟ್ ಗೊಬ್ಬರ, 2 ಕಿ. ಗ್ರಾಂ. ಬೇವಿನ ಹಿಂಡಿಯನ್ನು ಎರಡು ಕಂತುಗಳಲ್ಲಿ ಗಿಡಕ್ಕೆ ಕೊಡಬೇಕು. ರೋಗ ಬಂದು ಒಣಗಿದ ಮರಗಳನ್ನು ಬೇರು ಸಮೇತ ಸುಟ್ಟುಹಾಕುವುದು ಮುಂತಾದ ಕ್ರಮಗಳನ್ನು ಕೈಗೊಳ್ಳುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿಸಿದ್ದಾರೆ
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.