ETV Bharat / state

ಪ್ರವಚನವೇ ಸಿದ್ದೇಶ್ವರ ಸ್ವಾಮಿಗಳ ಕಾಯಕ ಆಗಿತ್ತು: ಮುರುಘರಾಜೇಂದ್ರ ಸ್ವಾಮೀಜಿ

ಸಿದ್ದೇಶ್ವರ ಸ್ವಾಮಿ ಅವರ ಅಗಲಿಕೆ ನಮಗೆ ಆಘಾತ ತಂದಿದೆ. ಪ್ರವಚನ ನೀಡುವುದೇ ಅವರ ಪ್ರಮುಖ ಕಾಯಕವಾಗಿತ್ತು. ಅವರು ದೇಶ ಅಲ್ಲದೇ ವಿದೇಶದಲ್ಲೂ ಪ್ರವಚನ ನೀಡಿದ್ದರು ಎಂದು ಡಾ. ಮುರುಘರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.

author img

By

Published : Jan 3, 2023, 4:31 PM IST

ಮುರುಘರಾಜೇಂದ್ರ ಸ್ವಾಮೀಜಿ
ಮುರುಘರಾಜೇಂದ್ರ ಸ್ವಾಮೀಜಿ
ಡಾ. ಮುರುಘರಾಜೇಂದ್ರ ಸ್ವಾಮೀಜಿ

ಶಿವಮೊಗ್ಗ: ಸಿದ್ದೇಶ್ವರ ಸ್ವಾಮಿಗಳು ಎಂದರೆ ಪ್ರವಚನ, ಪ್ರವಚನ ಎಂದರೆ ಸಿದ್ದೇಶ್ವರ ಸ್ವಾಮಿಗಳು ಎನ್ನುವಂತೆ ಇದ್ದ ಅವರ ಅಗಲಿಕೆ ಆಘಾತ ತಂದಿದೆ. ಶ್ರೀಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಶಿವಮೊಗ್ಗದ ಬೆಕ್ಕಿನ ಕಲ್ಮಠದ ಪೀಠಾಧಿಪತಿಗಳಾದ ಡಾ. ಮುರುಘರಾಜೇಂದ್ರ ಸ್ವಾಮಿಗಳು ಸಂತಾಪ ಸೂಚಿಸಿದ್ದಾರೆ.

ಸಿದ್ದೇಶ್ವರ ಶ್ರೀಗಳು ಪ್ರವಚನಕ್ಕೆ ಪ್ರಸಿದ್ಧಿಯಾಗಿದ್ದರು: ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದೇಶ್ವರ ಸ್ವಾಮಿಗಳ ಪ್ರವಚನ ಉತ್ತರ ಕರ್ನಾಟಕದಲ್ಲಿ ಬಹಳ ಪ್ರಸಿದ್ಧಿ ಪಡೆದಿತ್ತು. ಅವರ ಪ್ರವಚನ ಕೇಳಲು ಹಳ್ಳಿ ಹಳ್ಳಿಗಳಿಂದಲೂ ಸಹ ಜನ ಗಾಡಿ, ಟ್ರ್ಯಾಕ್ಟರ್​ಗಳಲ್ಲಿ ಬಂದು ಕೇಳುತ್ತಿದ್ದರು. ಸಭೆ ಸಮಾರಂಭಗಳಲ್ಲಿ ಶಿಸ್ತು ಹೇಗಿರಬೇಕು ಎಂದು ಅವರನ್ನು ನೋಡಿ ಕಲಿಯಬೇಕಿತ್ತು ಎಂದರು.

ಇದನ್ನೂ ಓದಿ: 'ದೇಹವನ್ನು ಅಗ್ನಿಗೆ ಅರ್ಪಿಸಿ, ಸ್ಮಾರಕ ಕಟ್ಟಬೇಡಿ': ಸಿದ್ದೇಶ್ವರ ಶ್ರೀಗಳು ಬರೆದಿದ್ದ ಅಭಿವಂದನ ಪತ್ರ

ಸಿದ್ದೇಶ್ವರ ಶ್ರೀಗಳ ಪ್ರವಚನ ಬೆಳಗ್ಗೆ 6 ಗಂಟೆಗೆ ಪ್ರಾರಂಭವಾಗಿ 7 ಗಂಟೆಗೆ ಮುಕ್ತಾಯವಾಗುತ್ತಿತ್ತು. ಇದರಿಂದ ಜನ ಪ್ರವಚನ ಕೇಳಲು 5 ಗಂಟೆಗೆ ಬಂದು ಕುಳಿತುಕೊಳ್ಳುತ್ತಿದ್ದರು.‌ ಪ್ರವಚನ ಸಮಯದಲ್ಲಿ ಎಷ್ಟು ಶಾಂತಿ ಇರುತ್ತಿತ್ತು ಎನ್ನುವುದನ್ನು ನಾವು ಮರೆಯಲು ಆಗಲ್ಲ ಎಂದು ಹೇಳಿದರು.

ಹೊರದೇಶದಲ್ಲೂ ಪ್ರವಚನ: ಪ್ರವಚನ ಸಂಜೆ ಸರಿ ಆಗಲ್ಲ ಎಂದು ಬೆಳಗ್ಗೆ ಪ್ರವಚನ ನಡೆಸುತ್ತಿದ್ದರು. ಅವರು ನಮ್ಮ ರಾಜ್ಯವಲ್ಲದೇ ದೇಶದ ಹಲವು ಕಡೆ ಪ್ರವಚನ ನೀಡಿದ್ದಾರೆ. ಅವರು ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದರು. ಇದರಿಂದ ಅವರು ವಿದೇಶಗಳಲ್ಲೂ ಸಹ ಪ್ರವಚನ ನೀಡಿದ್ದರು. ಶಿವಮೊಗ್ಗದಲ್ಲಿ ಮೊದಲು ಎನ್​​ಇಎಸ್ ಮೈದಾನದಲ್ಲಿ ಪ್ರವಚನ ನೀಡಿದ್ದರು ಎಂದು ಮುರುಘರಾಜೇಂದ್ರ ಸ್ವಾಮಿಗಳು ಹೇಳಿದ್ದಾರೆ.

ನಮ್ಮ ಬೆಕ್ಕಿನ ಕಲ್ಮಠದ ಕಾರ್ಯಕ್ರಮದಲ್ಲೂ ಅವರು ಭಾಗಿಯಾಗಿದ್ದರು‌. ಕಳೆದ ವರ್ಷ ಹಳೇ ಜೈಲು ಆವರಣದಲ್ಲಿ ಜೆಎಸ್​ಎಸ್​ನ ಕಾರ್ಯಕ್ರಮದಲ್ಲಿ 11 ದಿನ ಪ್ರವಚನ ನೀಡಿದ್ದರು‌. ಅವರ ಹಾಗೂ ನಮ್ಮ ಒಡನಾಟ ಚೆನ್ನಾಗಿತ್ತು ಎಂದು ತಮ್ಮ ಹಾಗೂ ಸಿದ್ದೇಶ್ವರ ಸ್ವಾಮಿಗಳ ಒಡನಾಟವನ್ನು ನೆನಪಿಸಿಕೊಂಡರು. ಅವರು ಒಬ್ಬ ತತ್ವಜ್ಞಾನಿಯಂತೆ ಎಲ್ಲ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು ಎಂದರು.

ಇದನ್ನೂ ಓದಿ: ಪ್ರವಚನ ನಿಲ್ಲಿಸಿದ ಜ್ಞಾನಯೋಗಿ.. ಭಕ್ತರ ಕಣ್ಣೀರಲ್ಲಿ ತೋಯ್ದ ಶ್ರೀಗಳ ನೆನಪು

ವೈಕುಂಠ ಏಕಾದಶಿ ದಿನದಂದು ಇಹಲೋಕ ತ್ಯಜಿಸಿರುವ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನ ಪಡೆಯಲು, ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ವಿಜಯಪುರ ನಗರದ ಸೈನಿಕ್​ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ದರ್ಶನಕ್ಕೆ ಬರುವ ಸಾವಿರಾರು ಭಕ್ತರಿಗೆ ಪೆಟ್ರೋಲ್​ ಮತ್ತು ಡಿಸೇಲ್​ ಬಂಕ್​ಗಳಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

ಸಂಜೆ 4.00 ಗಂಟೆಯಿಂದ ಪುನಃ ತೆರೆದ ವಾಹನದಲ್ಲಿ ಪಾರ್ಥಿವ ಶರೀರವನ್ನು ಸೈನಿಕ ಶಾಲೆಯಿಂದ ಜ್ಞಾನಯೋಗಾಶ್ರಮಕ್ಕೆ ತರಲಾಗುವುದು. ಭಕ್ತಾದಿಗಳು ರಸ್ತೆಯ ಇಕ್ಕೆಲೆಗಳಲ್ಲಿ ನಿಂತುಕೊಂಡು ಅಂತಿಮ ನಮನ ಸಲ್ಲಿಸಬಹುದು. ಅಂತಿಮ ಕ್ರಿಯೆಯನ್ನು ಸಂಜೆ 5.00 ಗಂಟೆಗೆ ಆಶ್ರಮದ ಆವರಣದಲ್ಲಿ ವಿಧಿವಿಧಾನಗಳಂತೆ ನೆರವೇರಿಸಲಾಗುತ್ತದೆ. ಆವರಣದಲ್ಲಿ ಸ್ಥಳಾವಕಾಶದ ಅಭಾವವಿದ್ದು ಭಕ್ತಾದಿಗಳು ಸೈನಿಕ ಶಾಲೆಯಲ್ಲಿಯೇ ಅಂತಿಮ ದರ್ಶನ ಪಡೆಯಬೇಕು. ಯಾವುದೇ ಆತಂತಕ್ಕೆ ಒಳಗಾಗದೇ ಶಾಂತ ರೀತಿಯಿಂದ ವರ್ತಿಸಿ, ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಕೋರಿದ್ದಾರೆ.

ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ: 'ಶ್ರೀಗಳ ಅಂತಿಮ ಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಸರ್ಕಾರ ನಿರ್ದೇಶಿಸಿದೆ. ಅಂತಿಮ ದರ್ಶನಕ್ಕೆ ಭಕ್ತರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜಿಲ್ಲೆಯ ಎಲ್ಲ ಶಾಲಾ-ಕಾಲೇಜು ಮತ್ತು ಸರ್ಕಾರಿ ಕಚೇರಿಗಳಿಗೆ ಸರ್ಕಾರ ರಜೆ ಘೋಷಿಸಿದೆ. ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿದೆ' ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.