ಶಿವಮೊಗ್ಗ: ಜಿಲ್ಲಾ ಸಶಸ್ತ್ರ ಪಡೆ ಸಿಬ್ಬಂದಿ ಧರಿಸಿದ್ದ ಪಿಪಿಇ ಕಿಟ್ಗಳನ್ನು ನಗರದ ನೆಹರು ಕ್ರೀಡಾಂಗಣದ ಬಳಿ ಬೇಕಾಬಿಟ್ಟಿ ಬಿಸಾಡಲಾಗಿದ್ದು, ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೆಹರು ಕ್ರೀಡಾಂಗಣದಲ್ಲಿ ಕಳೆದ ನಾಲ್ಕು ದಿನಗಳಿಂದ ಜಿಲ್ಲಾ ಸಶಸ್ತ್ರ ಪಡೆ ಪೊಲೀಸರ ನೇಮಕಾತಿ ನಡೆಸುತ್ತಿದೆ. ನೇಮಕಾತಿ ಸಿಬ್ಬಂದಿ ಕೊರೊನಾದಿಂದಾಗಿ ಅಭ್ಯರ್ಥಿಗಳ ಆಯ್ಕೆಯ ಪರೀಕ್ಷೆ ನಡೆಸಲು ಪಿಪಿಇ ಕಿಟ್ ಬಳಕೆ ಮಾಡಿದ್ದರು.
ಕಿಟ್ಗಳ ಬಳಕೆಯ ನಂತರ ಸರಿಯಾಗಿ ವಿಲೇವಾರಿ ಮಾಡದೆ ಎಲ್ಲೆಂದರಲ್ಲಿ ಬಿಸಾಡಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಶಿಸ್ತಿನ ಪೊಲೀಸ್ ಇಲಾಖೆಯಲ್ಲಿ ಅಶಿಸ್ತು ಸಲ್ಲದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.