ETV Bharat / state

ಭದ್ರಾವತಿಯ ಅಭಿಮಾನಿಯ ಕುಂಚದಲ್ಲಿ ಅರಳಿದ 'ಅಪ್ಪು' - ಪುನೀತ್ ರಾಜ್​​ಕುಮಾರ್ ಭಾವಚಿತ್ರ ಬಿಡಿಸಿದ ಕಲಾವಿದ ವಿಷ್ಣು

ಭದ್ರಾವತಿಯ ಅಪ್ಪು ಅಭಿಮಾನಿಯೊಬ್ಬರು ಕುಂಚದಲ್ಲಿ ನಟ ಪುನೀತ್ ರಾಜ್​​ಕುಮಾರ್(actor puneeth rajkumar) ರವರ ನಗುಮೊಗವನ್ನು ಚಿತ್ರಿಸುವ ಮೂಲಕ ಅಭಿಮಾನ ಹೊರ ಹಾಕಿದ್ದಾರೆ‌..

power star puneeth rajkumar art by fan
ಅಭಿಮಾನಿಯ ಕುಂಚದಲ್ಲಿ ಅರಳಿದ ಪವರ್​ ಸ್ಟಾರ್​
author img

By

Published : Nov 14, 2021, 7:59 PM IST

ಶಿವಮೊಗ್ಗ : ನಟ ಪವರ್ ಸ್ಟಾರ್(power star) ಮೇಲಿನ ಅಭಿಮಾನದ ಹೊಳೆ ದಿನದಿಂದ ದಿನಕ್ಕೆ ಉಕ್ಕಿ ಹರಿಯುತ್ತಲೇ ಇದೆ. ನೇತ್ರದಾನ, ರಕ್ತದಾನ, ಅನ್ನಸಂತರ್ಪಣೆ ಇನ್ನಿತರ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಅಭಿಮಾನಿಗಳು ಅವರ ಮೇಲಿನ ಅಭಿಮಾನ ತೋರುತ್ತಿದ್ದಾರೆ. ಅದೇ ರೀತಿ ಭದ್ರಾವತಿಯ ಅಭಿಮಾನಿಯೊಬ್ಬ ವಿಭಿನ್ನವಾಗಿ ಪುನೀತ್ ರಾಜ್​​ಕುಮಾರ್(Puneeth rajkumar) ಮೇಲಿನ ಅಭಿಮಾನವನ್ನು ಹೊರ ಹಾಕಿದ್ದಾರೆ.

ಅಭಿಮಾನಿಯ ಕುಂಚದಲ್ಲಿ ಅರಳಿದ ಪವರ್​ ಸ್ಟಾರ್..​

ಭದ್ರಾವತಿಯ ಕಲಾವಿದ ವಿಷ್ಣುಕುಮಾರ್ ತಮ್ಮ ಕುಂಚದಲ್ಲಿ ನಟ ಪುನೀತ್ ರಾಜ್​​ಕುಮಾರ್ ಅವರನ್ನು ಚಿತ್ರಿಸುವ ಮೂಲಕ ಅಪ್ಪು ಮೇಲಿನ ಅಭಿಮಾನ ಮೆರೆದಿದ್ದಾರೆ. ವಿಷ್ಣುಕುಮಾರ್ ಬಾಲ್ಯದಿಂದಲೂ ಚಿತ್ರಕಲೆಯ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ.

ಅಲ್ಲದೆ ಅಪ್ಪು ಅಭಿಮಾನಿ. ವಿಷ್ಣು ಕುಮಾರ್(Vishnu kumar) ನಟ ಪುನೀತ್ ರಾಜ್ ಕುಮಾರ್ ನೆನಪನ್ನು ಅಚ್ಚ ಹಸಿರಾಗಿಸಬೇಕೆಂದು ತಾವೇ ತಮ್ಮ ಕುಂಚದಲ್ಲಿ ಸತತ ಎರಡು ಗಂಟೆಗಳ ಕಾಲ ಪುನೀತ್ ಅವರ ಚಿತ್ರವನ್ನು ಚಿತ್ರಿಸಿ ಬಣ್ಣ ತುಂಬಿದ್ದಾರೆ.

power star puneeth rajkumar art by fan
ಪುನೀತ್​ ರಾಜ್​ಕುಮಾರ್​ ಅಭಿಮಾನಿಯ ಅಬಿಮಾನ

ವಿಷ್ಣು ಕುಮಾರ್ ರಚಿಸಿದ ಚಿತ್ರಕ್ಕೆ ಎಲ್ಲಾ ಕಡೆ ಪ್ರಶಂಸೆ ವ್ಯಕ್ತವಾಗಿದೆ. ಈ ಭದ್ರಾವತಿಯ ಅಪ್ಪು ಅಭಿಮಾನಿಯ ಅಭಿಮಾನಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಅಪ್ಪು ಅಗಲಿಕೆಯ ನೋವಿನಲ್ಲೇ ಭಜರಂಗಿ-2 ಚಿತ್ರತಂಡದ ಬೆಂಬಲಕ್ಕೆ ನಿಂತ ಶಿವಣ್ಣ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.