ETV Bharat / state

ಸಾಮಾನ್ಯ ಕಾರ್ಯಕರ್ತನಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿದ್ದು ವಿಶೇಷ: ಈಶ್ವರಪ್ಪ - ಈಟಿವಿ ಭಾರತ ಕನ್ನಡ

ಪ್ರಧಾನಿ ಮೋದಿ ಅವರು ಫೋನಿನ ಮೂಲಕ ಕರೆ ಮಾಡಿ ತಮ್ಮೊಂದಿಗೆ ಮಾತನಾಡಿರುವುದಾಗಿ ಕೆ ಎಸ್​ ಈಶ್ವರಪ್ಪ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಈಶ್ವರಪ್ಪಗೆ ಮೋದಿ ಕರೆ
ಈಶ್ವರಪ್ಪಗೆ ಮೋದಿ ಕರೆ
author img

By

Published : Apr 21, 2023, 1:06 PM IST

Updated : Apr 21, 2023, 2:00 PM IST

ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ

ಶಿವಮೊಗ್ಗ: ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಬಿಜೆಪಿಯ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಶಿವಮೊಗ್ಗದ ತಮ್ಮ ನಿವಾಸದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಫೋನಿನಲ್ಲಿ ಮಾತನಾಡುತ್ತಾರೆ ಎಂದಾಗ ನನಗೆ ಆಶ್ಚರ್ಯವಾಯಿತು ಎಂದರು.

ಪಕ್ಷದ ಹಿರಿಯರಾದ ಸಂತೋಷ್ ಜೀ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ನನಗೆ ಚುನಾವಣಾ ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳಬೇಕು‌ ಎಂದು ಹೇಳಿದಾಗ 10 ನಿಮಿಷ ಯೋಚನೆ ಮಾಡದೇ ಪತ್ರಕ್ಕೆ‌ ಸಹಿ‌ ಮಾಡಿ‌‌ ಕಳುಹಿಸಿಕೊಟ್ಟೆ. ಇದಾದ ನಂತರ ಪಕ್ಷದ ಕಾರ್ಯಕರ್ತರು ನನ್ನ ಬಳಿ ಬಂದು ಆಕ್ರೋಶ ವ್ಯಕ್ತಪಡಿಸಿದ್ದರು. ರಾಜ್ಯಾದ್ಯಂತ ನಮ್ಮ ಅನೇಕ ಹಿತೈಷಿಗಳು ಕರೆ ಮಾಡಿ ವೈಚಾರಿಕವಾಗಿ‌ ಸಂತೃಪ್ತಿ ಪಡಿಸಿದ್ದಕ್ಕೆ ಸಂತೋಷಪಟ್ಟಿದ್ದೇನೆ ಎಂದು ತಿಳಿಸಿದರು.

ಜಗದೀಶ ಶೆಟ್ಟರ್​ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ ಎಂದಾಗ ನನಗೆ ನೋವಾಯಿತು. ನಾನು ಅವರಿಗೆ ಖಾಸಗಿ ಪತ್ರವನ್ನು ಬರೆದೆ. ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿ ಪಕ್ಷದ ಹೈಕಮಾಂಡ್​ ನಡೆಗೆ ಸಮ್ಮತಿ ಸೂಚಿಸಿದ ಹಿನ್ನೆಲೆ ಪಕ್ಷದ ಮುಖಂಡರು ಮತ್ತು ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ನಾನೇನು ವಿಶೇಷ ಮಾಡಿಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತನ ಕೆಲಸವನ್ನೇ ಮಾಡಿದ್ದೇನೆ. ಭಾರತೀಯ ಜನತಾ ಪಾರ್ಟಿಯ ಸಂಸ್ಕಾರವನ್ನು ಮುಂದುವರಿಸಿದ್ದೇನೆ. ಇದನ್ನೇ ಎಲ್ಲರೂ ವಿಶೇಷ ಅಂತ ಭಾವಿಸಿರುವುದು ನನಗೆ ಸಂತೋಷ ತಂದಿದೆ ಎಂದರು.

ನಿವೃತ್ತಿ ಘೋಷಣೆ ಬಳಿಕ ಅನೇಕ ಹಿರಿಯರು, ಪರಿವಾರದವರು ನಮ್ಮ ಮನೆಗೆ ಬಂದು ಶುಭಹಾರೈಸಿದರು. ಆದರೆ ಇಂದು ನಮ್ಮ ನಾಯಕರಾದ ಮೋದಿ ಅವರು ನನ್ನ ನಡೆ ಬಗ್ಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದರು. ಜೊತೆಗೆ ರಾಜ್ಯಕ್ಕೆ ಬಂದಾಗ ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ಪ್ರಧಾನಿ ತಿಳಿಸಿದ್ದಾರೆ ಎಂದು ಈಶ್ವರಪ್ಪ ಹೇಳಿದರು. ನಾನು ಅವರು ಕರೆ ಮಾಡುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಇದು ನನಗೆ ಸಂತೋಷ ತಂದಿದೆ ಎಂದು ಈಶ್ವರಪ್ಪ ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಕೆ.ಎಸ್. ಈಶ್ವರಪ್ಪ..! ನಡ್ಡಾಗೆ ಪತ್ರ

ಇನ್ನು, ಏ.11 ರಂದು ಈಶ್ವರಪ್ಪ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದರು. ಅಲ್ಲದೇ ತಮ್ಮ ಹೆಸರನ್ನು ಯಾವುದೇ ಕ್ಷೇತ್ರಕ್ಕೆ ಘೋಷಣೆ ಮಾಡದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ಈಶ್ವರಪ್ಪ ಪತ್ರ ಬರೆದು ಮನವಿ ಮಾಡಿದ್ದರು. ಜೊತೆಗೆ ಬೂತ್​ ಮಟ್ಟದಿಂದ ಹಿಡಿದು ರಾಜ್ಯದ ಉಪಮುಖ್ಯಮಂತ್ರಿ ವರೆಗೂ ಸ್ಥಾನಮಾನ ನೀಡಿದ ಪಕ್ಷದ ಹಿರಿಯರಿಗೆ ಧನ್ಯವಾದ ಎಂದು ಪತ್ರದಲ್ಲಿ ತಿಳಿಸಿದ್ದರು.

ಇದನ್ನೂ ಓದಿ: ​ಈಶ್ವರಪ್ಪ ಪಕ್ಷ ನಿಷ್ಠೆಗೆ ಭಾರಿ ಮೆಚ್ಚುಗೆ: ಕರೆ ಮಾಡಿ ಅಭಯ ನೀಡಿದ ಮೋದಿ

ಇದನ್ನೂ ಓದಿ: ಶೆಟ್ಟರ್ ಕ್ಷಮೆ ಕೇಳಿ ತತ್ವ ಸಿದ್ಧಾಂತ ಉಳಿಸಿದ ಪಕ್ಷಕ್ಕೆ ವಾಪಸ್ ಬರಬೇಕು: ಈಶ್ವರಪ್ಪ

Last Updated : Apr 21, 2023, 2:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.