ETV Bharat / state

ಶಿವಮೊಗ್ಗ ಜಿಲ್ಲೆಯ 3 ಕ್ಷೇತ್ರದಲ್ಲಿ‌ ಬಿಜೆಪಿ‌ ಸೋಲಲು ಪಕ್ಷದ ಕಾರ್ಯಕರ್ತರ ಸಿಟ್ಟೇ ಕಾರಣ: ಕೆ ಎಸ್ ಈಶ್ವರಪ್ಪ - ಅಭಿನಂದನಾ ಕಾರ್ಯಕ್ರಮ

ಪಕ್ಷದ ಕಾರ್ಯಕರ್ತರ ಸಿಟ್ಟೇ ಶಿವಮೊಗ್ಗ ಜಿಲ್ಲೆಯ ಮೂರು ಕ್ಷೇತ್ರದಲ್ಲಿ‌ ಬಿಜೆಪಿ‌ ಸೋಲಲು ಕಾರಣ ಎಂದು ನಿನ್ನೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಕೆ.ಎಸ್. ಈಶ್ವರಪ್ಪ ಹೇಳಿದರು.

ks eshwarappa
ಬಿಜೆಪಿ ಕಾರ್ಯಕರ್ತರ ಅಭಿನಂದನಾ ಕಾರ್ಯಕ್ರಮ
author img

By

Published : May 20, 2023, 8:52 AM IST

ಕೆ ಎಸ್ ಈಶ್ವರಪ್ಪ

ಶಿವಮೊಗ್ಗ: ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ ಸೋಲಲು ನಮ್ಮ ಪಕ್ಷದ ಕಾರ್ಯಕರ್ತರ ಸಿಟ್ಟೇ ಕಾರಣ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅಸಮಾಧಾನ ಹೊರ ಹಾಕಿದರು.

ಶಿವಮೊಗ್ಗ ನಗರದ ಮೈಲಾರೇಶ್ವರ ದೇವಾಲಯದ ಆವರಣದಲ್ಲಿ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪನವರ ಗೆಲುವಿಗೆ ಕಾರಣರಾದ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ನಡೆದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, "ಇದು ಶಾಸಕರಾದ ಚನ್ನಬಸಪ್ಪನವರ ಅಭಿನಂದನಾ ಸಮಾರಂಭವಲ್ಲ, ಬದಲಾಗಿ ಶಾಸಕರನ್ನು ಆಯ್ಕೆ ಮಾಡಿದ ಕಾರ್ಯಕರ್ತರು ಹಾಗೂ ಮತದಾರರಿಗೆ ಅಭಿನಂದನಾ ಕಾರ್ಯಕ್ರಮ" ಎಂದರು.

ಒಂದು ಕಡೆ ನಮ್ಮ ಅಭ್ಯರ್ಥಿ ಗೆಲ್ಲಲು ಆಗಲ್ಲ, ಮುಸ್ಲಿಮರ ಮತ ಅಷ್ಟಿದೆ, ಒಬಿಸಿ ಮತ ಇಷ್ಟಿದೆ. ಜಾತಿ‌, ಜಾತಿ ಒಳಗೆ ಉಪಜಾತಿ ಇದೆ ಅಂತ ಹೇಳುತ್ತಿದ್ದರು. ಆದ್ರೆ, ಜಾತಿ ಮತ್ತು ಧರ್ಮವನ್ನು ಮೀರಿ ಹಿಂದುತ್ವದ ಪರ ಕೆಲಸ ಮಾಡಿದಂತಹ ಕಾರ್ಯಕರ್ತರ ಜಯವಿದು. ಮತದಾರರು ಸ್ವಲ್ಪ ಗೊಂದಲದಲ್ಲಿದ್ದರು. ಆದರೂ ಸಹ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಸಾಗರ, ಸೊರಬ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಸೋತಿದ್ದೇವೆ. ಜೊತೆಗೆ, ಭದ್ರಾವತಿಯಲ್ಲಿ ಮತ ನೀಡಿದವರಿಗೆ ಅಭಿನಂದನೆಗಳು ಎಂದು ಹೇಳಿದರು.

ಮೂರು ಕ್ಷೇತ್ರಗಳಲ್ಲಿ ಕಾರ್ಯಕರ್ತರು ಯಾರ ಮೇಲೆ ಸಿಟ್ಟು ತೋರಿಸಿದಿದ್ದೀರಿ ಎಂದು ಪ್ರಶ್ನೆ ಮಾಡಿದ ಅವರು, ಕಾರ್ಯಕರ್ತರು ವಿರೋಧ ಮಾಡಿದ್ರಲ್ಲಾ ಈಗ ನಿಮಗೆ ಸಮಾಧಾನವಾಗಿದೆಯೇ ಎಂದು ಕೇಳಿದ್ರು. ಇರುವ ಮೂರು ಸೀಟು ಕಳೆದುಕೊಂಡಿದ್ದೇವೆ. ಬಿಜೆಪಿ ತಂದ ಮತಾಂತರ, ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ಇದೇ ಮೂರು ಜನ ನಮ್ಮ ಶಾಸಕರು ಇದ್ದಿದ್ದರೆ ನಾವು ಪ್ರಬಲವಾಗಿ ವಿರೋಧಿಸಬಹುದಾಗಿತ್ತು ಈಶ್ವರಪ್ಪ ಹೇಳಿದ್ರು.

‌ಲಕ್ಷ ಲಕ್ಷ ಮಂದಿ ನಮ್ಮ ಯುವತಿಯರನ್ನು ಬಲತ್ಕಾರವಾಗಿ ಮತಾಂತರ ಮಾಡಿ, ಮಾರಾಟ ಮಾಡಿ, ಸಂತೃಪ್ತಿ ಪಡುವವರ ಪರವಾಗಿ ಇರುವಂತಹ ಕಾಂಗ್ರೆಸ್ ಸರ್ಕಾರಕ್ಕೆ ನಿಮ್ಮ ಸಿಟ್ಟು ಮತ್ತು ಬೆಂಬಲ ಸಿಕ್ಕಂತೆ ಆಯಿತು. ರಾಜ್ಯದಲ್ಲಿ ನಮ್ಮ ಸರ್ಕಾರ ಹೋಗಿದೆ. ಇಂದಲ್ಲಾ ನಾಳೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ನೀವು ಬಿಜೆಪಿ ಅಭ್ಯರ್ಥಿಗಳನ್ನು ರಾಜ್ಯಕ್ಕೆ ಮತ್ತು ಕೇಂದ್ರಕ್ಕೆ ಆಯ್ಕೆ ಮಾಡಿ ಕಳುಹಿಸುವುದು ಹಿಂದುತ್ವವನ್ನು ಜಗತ್ತಿಗೆ ತಿಳಿಸಲು. ಇದನ್ನು ಪಕ್ಷದಲ್ಲಿ ಇರುವ ದ್ರೋಹಿಗಳು ಅರ್ಥ ಮಾಡಿಕೊಳ್ಳಬೇಕು. ಗೋ ಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಿದರೆ ಉಗ್ರ ಹೋರಾಟ ಮಾಡಲಾಗುವುದು ಎಂಬ ಈಶ್ವರಪ್ಪ ಎಚ್ಚರಿಕೆ ನೀಡಿದರು.

ಇದನ್ನೂ ಓದಿ : ಸಚಿವ ಸ್ಥಾನಕ್ಕೆ ಯಾವುದೇ ಲಾಬಿ ಮಾಡುವುದಿಲ್ಲ: ಶಾಸಕ ಎಸ್.ಎಸ್ ಮಲ್ಲಿಕಾರ್ಜುನ

ಇದಕ್ಕೂ ಮುನ್ನ ಮಾತನಾಡಿದ ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ, "ನಮ್ಮ ಪಕ್ಷ ನೀನು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಬೇಕೆಂದು ತಿಳಿಸಿತು. ನಂತರ ನಮ್ಮ ಕಾರ್ಯಕರ್ತರು ಕೇವಲ‌ 20 ದಿನಗಳಲ್ಲಿ ಚುನಾವಣೆ ನಡೆಸಿಕೊಟ್ಟರು. ಅವರೆಲ್ಲಾ ಯಾವಾಗ ಮನೆಗೆ ಹೋಗ್ತಾ ಇದ್ರು, ಊಟ ಯಾವಾಗ ಮಾಡ್ತಾ ಇದ್ರು ಅನ್ನೋದು ಗೊತ್ತಿಲ್ಲ. ನಮ್ಮ ಮುಂದೆ ದೊಡ್ಡ ಸವಾಲು ಇದೆ. ನಾನು ಶಿವಮೊಗ್ಗದಲ್ಲಿ ಶಾಂತಿ‌ ನೆಲೆಸುವಂತೆ ಮಾಡಲು ಪ್ರಮಾಣಿಕ ಪ್ರಯತ್ನ ನಡೆಸುತ್ತೇನೆ" ಎಂದರು.

ಸಮಾರಂಭದಲ್ಲಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿ ಸನ್ಮಾನ ಮಾಡಲಾಯಿತು. ಈ ವೇಳೆ ಸಂಸದ ಬಿ.ವೈ. ರಾಘವೇಂದ್ರ, ನಗರಾಧ್ಯಕ್ಷ ಜಗದೀಶ್, ಆರ್​ಎಸ್​ಎಸ್ ನ ಪ್ರಮುಖರಾದ ಪಟ್ಟಾಭಿರವರು ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.