ಶಿವಮೊಗ್ಗ: ಮಗಳ ಮದುವೆಗೆ ಬಂದ ಪೋಷಕರು ಬೀಗರ ಮನೆಯಲ್ಲಿಯೇ ಹೋಂ ಕ್ವಾರಂಟೈನ್ ಆಗಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ.
ತೀರ್ಥಹಳ್ಳಿ ತಾಲೂಕಿನ ಶಿವರಾಜಪುರ ಗ್ರಾಮದ ಸಂತೋಷ್ ಹಾಗೂ ಐಶ್ವರ್ಯ ಪ್ರೀತಿಸಿ ಮದುವೆಯಾಗಿದ್ದಾರೆ. ಸಂತೋಷ್ ಹಾಸನದಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಈ ವೇಳೆ ಐಶ್ವರ್ಯ ಜೊತೆ ಲವ್ ಆಗಿದೆ. ಇಬರಿಬ್ಬರ ಪ್ರೀತಿಗೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದರು. ಅದರಂತೆ ಶಿವರಾಜಪುರ ಗ್ರಾಮದ ಸಾಲುಮರದ ಗಣಪತಿ ದೇವಾಲಯದಲ್ಲಿ ಮದುವೆ ನಿಗದಿಯೂ ಆಗಿತ್ತು.
ಆದರೆ ಹಾಸನದಿಂದ ವಿವಿಧ ಚೆಕ್ಪೋಸ್ಟ್ಗಳನ್ನ ದಾಟಿ ಬರುವಷ್ಟರಲ್ಲಿ ಮದುವೆ ಮೂಹೂರ್ತ ಮುಗಿದು ಹೋಗಿತ್ತು. ಹೀಗಾಗಿ ಮದುವೆ ಮಾಡಲು ಬಂದಿದ್ದ ಪುರೋಹಿತರು ವಾಪಸ್ ಹೋಗಿದ್ದಾರೆ.
ವಧು-ವರರಿಗೆ ಮನೆಯಲ್ಲಿಯೇ ಮದುವೆ ಮಾಡಿಸಲಾಗಿದೆ. ಈ ವಿಷಯ ತಿಳಿದು ಬಂದ ಪೊಲೀಸರು ಐಶ್ವರ್ಯ ಪೋಷಕರಿಗೆ ಲಾಕ್ಡೌನ್ ಮುಗಿಯುವ ತನಕ ಇಲ್ಲೇ ಇರಬೇಕು ಎಂದು ಹೇಳಿದ್ದಾರೆ. ಪರಿಣಾಮ ಬೀಗರು ಹೋಂ ಕ್ವಾರಂಟೈನ್ನಲ್ಲಿಯೇ ಉಳಿದಿದ್ದಾರೆ.