ಶಿವಮೊಗ್ಗ: ಮೇ 6 ರಿಂದ ಚಾಲನೆ ಪಡೆದುಕೊಳ್ಳಲಿರುವ ಅಂತರ್ಜಲ ಯೋಜನೆ ಕಾಮಗಾರಿಗಳ ಕುರಿತು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಜಿಲ್ಲಾ ಪಂಚಾಯತ್ ಹೊರಗುತ್ತಿಗೆ ಇಂಜಿನಿಯರ್, ಅರಣ್ಯ ಇಲಾಖೆ ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆಗಳ ಜೊತೆ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಪೂರ್ವಭಾವಿ ಸಭೆ ನಡೆಸಿದರು.
ಈ ಸಭೆಯಲ್ಲಿ ಮಾತನಾಡಿದ ಸಚಿವರು ಕಾಮಗಾರಿಯನ್ನು ಉತ್ತಮವಾಗಿ ನಡೆಸಿಕೊಟ್ಟ ಹೊರಗುತ್ತಿಗೆ ಇಂಜಿನಿಯರ್ಗಳಿಗೆ ತಲಾ 1 ಲಕ್ಷ ರೂ ಬಹುಮಾನವನ್ನು ವೈಯಕ್ತಿಕವಾಗಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಅಂತರ್ಜಲ ಚೇತನ ಯೋಜನೆಯನ್ನು ಜಿಲ್ಲೆಯಲ್ಲಿ ಮೇ 6 ರಿಂದ ಆರಂಭವಾಗಲಿದೆ ಒಂದು ತಿಂಗಳಿಗೆ 4000 ಕಾಮಗಾರಿಗಳು ಆರಂಭವಾಗಲಿದ್ದು, ವರ್ಷದಲ್ಲಿ 32700 ಕಾಮಗಾರಿಗಳು ಪೂರ್ಣಗೊಳ್ಳಲಿದೆ ಎಂದರು.
ಇದಕ್ಕಾಗಿ 252 ಕೋಟಿ ಹಣ ವಿನಿಯೋಗವಾಗಲಿದೆ. ಈ ಕಾಮಗಾರಿಯನ್ನು ಪೂರ್ಣ ಮಾಡಿಕೊಡುವ ಜಿಲ್ಲಾ ಪಂಚಾಯತ್ ಹೊರಗುತ್ತಿಗೆ ಎಂಜಿನಿಯರ್ ಗಳಿಗೆ ತಲಾ ಒಂದು ಲಕ್ಷ ರೂಪಾಯಿಗಳನ್ನು ಬಹುಮಾನ ನೀಡಲಿದ್ದೆನೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.