ETV Bharat / state

ಶಿವಮೊಗ್ಗ: ಕಾರುಗಳ ನಡುವೆ ಭೀಕರ ಅಪಘಾತ, ಓರ್ವ ಸ್ಥಳದಲ್ಲೇ ಸಾವು

ಶಿವಮೊಗ್ಗ ಕರ್ಮಷಿಯಲ್ ಟ್ಯಾಕ್ಸ್ ಅಧಿಕಾರಿಗಳ ಕಾರು ಹಾಗೂ ಇನ್ನೊಂದು ಕಾರಿನ ನಡುವೆ ಅಪಘಾತ ಸಂಭವಿಸಿದೆ.

one-died-in-two-cars-collide-at-shivamogga
ಕಾರುಗಳ ನಡುವೆ ಭೀಕರ ಅಪಘಾತ
author img

By

Published : Aug 25, 2021, 9:27 AM IST

ಶಿವಮೊಗ್ಗ: ಕರ್ಮಷಿಯಲ್ ಟ್ಯಾಕ್ಸ್ ಅಧಿಕಾರಿಗಳ ಟಾಟಾ ಸುಮೋ ಹಾಗೂ ಓಮ್ನಿ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಓಮ್ನಿ ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಘಟನೆ ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮದ ಬಳಿ ನಡೆದಿದೆ.

ಶಿವಮೊಗ್ಗ ಕರ್ಮಷಿಯಲ್ ಟ್ಯಾಕ್ಸ್ ಅಧಿಕಾರಿಗಳು ತರೀಕೆರೆ ಕಡೆಯಿಂದ ಶಿವಮೊಗ್ಗಕ್ಕೆ ಪ್ರಯಾಣಿಸುತ್ತಿದ್ದರು. ಈ ಮಾರ್ಗವಾಗಿ ಭದ್ರಾವತಿ ತೆರಳುತ್ತಿದ್ದ ಓಮ್ನಿ ಕಾರು ಡಿಕ್ಕಿಯಾಗಿದೆ. ಟಾಟಾ ಸುಮೋದಲ್ಲಿ ಅಧಿಕಾರಿಗಳಾದ ನಾಗಲಕ್ಷ್ಮೀ, ತೆರಿಗೆ ಇನ್ಸ್​​ಪೆಕ್ಟರ್ ಮಹೇಶ್ ಹಾಗೂ ಚಾಲಕ ಸುಬ್ರಮಣ್ಯ ಪ್ರಯಾಣಿಸುತ್ತಿದ್ದರು.

ಚಾಲಕ ಸುಬ್ರಮಣ್ಯ ಕಾಲಿಗೆ ಗಾಯವಾಗಿದೆ. ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಗಲಕ್ಷ್ಮೀ ಹಾಗೂ ಮಹೇಶ್ ಅವರ ತಲೆಗೆ ಹಾಗೂ ಕಾಲಿಗೆ ಗಾಯಗಳಾಗಿದ್ದು, ಭದ್ರಾವತಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಶಿವಮೊಗ್ಗಕ್ಕೆ ರವಾನಿಸಲಾಗಿದೆ. ಓಮ್ನಿಯಲ್ಲಿ ಗಾಯಗೊಂಡವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ರಾಗಿಣಿ - ಸಂಜನಾ ಡ್ರಗ್ಸ್ ಸೇವಿಸಿದ್ದು ಧೃಡಪಟ್ಟಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.