ETV Bharat / state

ಸಿಎಂ ತವರು ಜಿಲ್ಲೆಯಲ್ಲಿ ಕೋವಿಡ್​ನಿಂದ ಮೃತಪಟ್ಟವರ ಅಂತ್ಯಕ್ರಿಯೆ ಹೇಗೆ ನಡೆಯುತ್ತಿದೆ?

ಜಿಲ್ಲೆಯಲ್ಲಿ ಕೋವಿಡ್​ನಿಂದ ಮೃತಪಟ್ಟವರ ಶವಗಳನ್ನು ದಹಿಸಲು ಪ್ರಮುಖವಾಗಿ ನಗರದ ರೋಟರಿ ಚಿತಾಗಾರವನ್ನೇ ಬಳಕೆ ಮಾಡಲಾಗುತ್ತಿದೆ. ಇಲ್ಲಿ ಅನಿಲ ಚಿತಾಗಾರವಿದೆ ಹಾಗೂ ಸೌದೆಯಲ್ಲಿ ಸುಡುವ ವ್ಯವಸ್ಥೆಯೂ ಸಹ ಇದೆ. ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ಶವಗಳನ್ನು ಸುಡುತ್ತಿದ್ದಾರೆ.. ‍

no problem for funeral process in shimogga
ಕೋವಿಡ್​ನಿಂದ ಮೃತಪಟ್ಟವರ ಅಂತ್ಯಕ್ರಿಯೆ ಹೇಗೆ ನಡೆಯುತ್ತಿದೆ?
author img

By

Published : May 8, 2021, 8:13 PM IST

ಶಿವಮೊಗ್ಗ : ಹೆಚ್ಚಾದ ಸೋಂಕಿತರ ಸಂಖ್ಯೆ ಜತೆಗೆ ಆಸ್ಪತ್ರೆಗಳಲ್ಲಿ ಬೆಡ್​,ಆಕ್ಸಿಜನ್​, ವೆಂಟಿಲೇಟರ್, ಸಿಬ್ಬಂದಿ ಕೊರತೆ​ ಹೀಗೆ ಹಲವು ಸಮಸ್ಯೆಗಳು ಸಹ ಹೆಚ್ಚಾಗಿದೆ.

ಇದರೆಲ್ಲದರ ನಡುವೆ ಇದೀಗ ಕೋವಿಡ್​ನಿಂದ ಮೃತ ಪಟ್ಟವರ ಅಂತ್ಯಸಂಸ್ಕಾರಕ್ಕೂ ಹಲವು ಸವಾಲುಗಳು ಎದುರಾಗಿವೆ. ಚಿತಾಗಾರ, ಸ್ಮಶಾನ ಸಮಸ್ಯೆ ಜತೆಗೆ ಕಟ್ಟಿಗೆ ಕೊರತೆ ಎದುರಾಗಿದೆ.

ಕೋವಿಡ್​ನಿಂದ ಮೃತಪಟ್ಟವರ ಅಂತ್ಯಕ್ರಿಯೆ ಹೇಗೆ ನಡೆಯುತ್ತಿದೆ?

ಸಿಎಂ ತವರು ಜಿಲ್ಲೆ ಶಿವಮೊಗ್ಗದಲ್ಲಿ ಕೋವಿಡ್​​​ಗೆ ತುತ್ತಾಗಿ ಮೃತಪಟ್ಟವರ ಶವ ಸುಡಲು ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ‍ಜಿಲ್ಲೆಯಲ್ಲಿ ಮೊದಲು ಎಲ್ಲ ಕೋವಿಡ್ ಸೋಂಕಿತರನ್ನು ಮೆಗ್ಗಾನ್ ಬೋಧನಾಸ್ಪತ್ರೆಯಲ್ಲಿ ದಾಖಲು ಮಾಡಬೇಕಿತ್ತು.

ಹಾಗಾಗಿ, ಕಳೆದ ವರ್ಷ ಕೋವಿಡ್​​ನಿಂದ ಮೃತರಾದವರ ಅಂತ್ಯಸಂಸ್ಕಾರವನ್ನು ಶಿವಮೊಗ್ಗ ನಗರದಲ್ಲಿಯೇ ಮಾಡಬೇಕಿತ್ತು. ಶಿವಮೊಗ್ಗದ ವಿದ್ಯಾನಗರದ ರೋಟರಿ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಸಲಾಗುತ್ತಿತ್ತು.

ಈಗಲೂ ಸಹ ಶಿವಮೊಗ್ಗ ನಗರದವರು‌ ಕೋವಿಡ್​ನಿಂದ ಮೃತರಾದರೆ, ರೋಟರಿ ಚಿತಾಗಾರದಲ್ಲಿಯೇ ಅಂತ್ಯಸಂಸ್ಕಾರ ನಡೆಸಲಾಗುತ್ತಿದೆ. ಪ್ರಸಕ್ತ ವರ್ಷ ಕೋವಿಡ್ ಎರಡನೇ ಅಲೆಯಲ್ಲಿ, ಸೊರಬ ತಾಲೂಕು ಹೊರತು ಪಡಿಸಿ ಉಳಿದೆಲ್ಲಾ ತಾಲೂಕುಗಳಲ್ಲೂ ಸಹ ಕೋವಿಡ್ ಆಸ್ಪತ್ರೆಗಳನ್ನು ತೆರೆಯಲಾಗಿದೆ.

ಅಲ್ಲದೇ ಕೋವಿಡ್​ನಿಂದ ಮೃತರಾದರೆ ಮನೆಯವರೇ ನಿಯಮಗಳೊಂದಿಗೆ ಶವ ಸಂಸ್ಕಾರ ಮಾಡಬಹುದಾಗಿದೆ. ಹಾಗಾಗಿ ಕುಟುಂಬಸ್ಥರು ತಮಗೆ ಸಂಬಂಧಿಸಿದವರ ಮೃತದೇಹವನ್ನು ತೆಗೆದುಕೊಂಡು ಹೋಗಿ ಅವರೇ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಅಂತ್ಯಸಂಸ್ಕಾರ ನಡೆಸುತ್ತಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್​ನಿಂದ ಮೃತಪಟ್ಟವರ ಶವಗಳನ್ನು ದಹಿಸಲು ಪ್ರಮುಖವಾಗಿ ನಗರದ ರೋಟರಿ ಚಿತಾಗಾರವನ್ನೇ ಬಳಕೆ ಮಾಡಲಾಗುತ್ತಿದೆ. ಇಲ್ಲಿ ಅನಿಲ ಚಿತಾಗಾರವಿದೆ ಹಾಗೂ ಸೌದೆಯಲ್ಲಿ ಸುಡುವ ವ್ಯವಸ್ಥೆಯೂ ಸಹ ಇದೆ. ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ಶವಗಳನ್ನು ಸುಡುತ್ತಿದ್ದಾರೆ. ‍

ಅನಿಲ ಚಿತಾಗಾರವನ್ನು ಸದ್ಯ ಮಹಾನಗರ ಪಾಲಿಕೆ ನಿರ್ವಹಣೆ ಮಾಡುತ್ತಿದೆ. ಇಲ್ಲಿ ಒಂದು ಶವ ದಹಿಸಲು ಪಾಲಿಕೆಯು 1,500 ರೂ. ನಿಗದಿ ಮಾಡಿದೆ. ಅದೇ ರೀತಿ ಸೌದೆಗಾಗಿ ರೋಟರಿ‌ಯವರು ಶವದ ಗಾತ್ರಕ್ಕೆ ತಕ್ಕಂತೆ ಎರಡೂವರೆ ಟನ್ ತನಕ ಕಟ್ಟಿಗೆ ನೀಡುತ್ತಾರೆ. ಇದಕ್ಕೆ 2,100 ರೂ. ಚಾರ್ಜ್ ಮಾಡುತ್ತಾರೆ.

ಇದನ್ನೂ ಓದಿ: ಕೋವಿಡ್​​​: ಮಂಗಳೂರಿನಲ್ಲಿ ವಿಳಂಬವಾಗದಂತೆ ಮೃತ ದೇಹಗಳ ಹಸ್ತಾಂತರ!

ಈಗಾಗಲೇ ಶವಗಳನ್ನು‌ ದಹನ ಮಾಡಲು ಪ್ರತ್ಯೇಕ ಎರಡು ಕಬ್ಬಿಣದ ಒಲೆಯನ್ನು ಬಿಡಲಾಗಿದೆ. ಗ್ಯಾಸ್​ನಲ್ಲಿ ಸುಡಲು ಕನಿಷ್ಠ ಒಂದು ಗಂಟೆ ಬೇಕು. ಸೌದೆಯಲ್ಲಿ ದಹನವಾಗಲು ಕನಿಷ್ಠ ಎರಡು ಗಂಟೆ ಬೇಕಾಗುತ್ತದೆ. ಗ್ಯಾಸ್ ಹಾಗೂ ಸೌದೆಗೆ ಯಾವುದೇ ತೊಂದರೆ ಇಲ್ಲದ ಕಾರಣ, ಕೋವಿಡ್​​ನಿಂದ ಮೃತಪಟ್ಟವರ ದೇಹವನ್ನು ಸುಡಲು ಸದ್ಯ ಯಾವುದೇ ತೂಂದರೆ ಎದುರಾಗಿಲ್ಲ.

ಕೋವಿಡ್​ನಿಂದ ಮೃತಪಡುತ್ತಿರುವವರ ಸಂಖ್ಯೆ ವೇಗವಾಗಿ ಏರುತ್ತಿದ್ದು, ಭಯದ ವಾತಾವರಣ ಸೃಷ್ಟಿಯಾಗಿದೆ. ಸರ್ಕಾರದ ಜತೆ ಕೈಜೋಡಿಸಿ ಸಾರ್ವಜನಿಕರು ಕೋವಿಡ್​ ನಿಯಮಗಳನ್ನು ಪಾಲಿಸುವ ಮೂಲಕ ಸೋಂಕು ಪ್ರಕರಣಗಳನ್ನು ಹತೋಟಿಗೆ ತರಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.