ಶಿವಮೊಗ್ಗ: ಸೇವಾ ಭದ್ರತೆ, ಜೀವವಿಮೆ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಕ್ಕಾಗಿ ಆಗ್ರಹಿಸಿ ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಮಿಷನ್ ನಡಿ ಕಾರ್ಯನಿರ್ವಹಿಸುವ ನೌಕರರು ಕಪ್ಪು ಪಟ್ಟಿ ಧರಿಸಿ ಜಿಲ್ಲಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.
ಇಂದು ಪ್ರತಿಭಟನೆಗೂ ಮುನ್ನ ಸಾವಿಗೀಡಾದ ಕೊರೊನಾ ವಾರಿಯರ್ಸ್ ಆತ್ಮಕ್ಕೆ ಶಾಂತಿಕೋರಿ ಮೌನಾಚರಣೆ ನಡೆಸಲಾಯಿತು. ಇಂದು ಕೈಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದ ನೌಕರರು, ನಾಳೆಯೂ ಪ್ರತಿಭಟನೆ ನಡೆಸಲಿದ್ದು, ನಾಡಿದ್ದು ಪ್ಲೇಕಾರ್ಡ್ ಹಿಡಿದು ಹೋರಾಟ ಮಾಡಲಿದ್ದಾರೆ.