ಶಿವಮೊಗ್ಗ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವ ದೂರ ದೃಷ್ಟಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಿಎಂ ಸ್ವನಿಧಿ ಯೋಜನೆ ಜಾರಿ ಮಾಡಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಶಿವಮೊಗ್ಗ ಪ್ರೆಸ್ ಟ್ರಸ್ಟ್ ಭವನದಲ್ಲಿ ಇಂದು ನಡೆದ ಪಿಎಂ ಸ್ವನಿಧಿ ಯೋಜನೆಯಡಿ ಪತ್ರಿಕಾ ವಿತರಕರಿಗೆ ಹಾಗೂ ಹಾಲು ವಿತರಕರಿಗೆ ಸಹಾಯಧನ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 10 ಸಾವಿರ ರೂ. ಸಾಲ ಪಡೆದವರ ಸಂಖ್ಯೆ 9,238. ಸರಿಯಾದ ಸಮಯಕ್ಕೆ ಹಣ ವಾಪಸ್ ಮಾಡಿ, ಪುನಃ 20 ಸಾವಿರ ರೂ ಪಡೆದವರು 2,964 ಜನ. ಇದನ್ನು ಕಟ್ಟಿ 50 ಸಾವಿರ ರೂ ಪಡೆದವರು 614 ಜನ. ಮೊದಲು 10 ಸಾವಿರ ರೂ ಹಣ ಪಡೆದವರಿಗೂ ಈಗ 50 ಸಾವಿರ ರೂ ಹಣ ಪಡೆದವರಿಗೂ ಹೆಚ್ಚು ವ್ಯತ್ಯಾಸವಿದೆ. ಇದರಲ್ಲಿ ಸರಿಯಾದ ಸಮಯಕ್ಕೆ ಹಣ ವಾಪಸ್ ಮಾಡದೇ ಇರಬಹುದು. ಪಡೆದವರಿಗೂ ಹೆಚ್ಚು ವ್ಯತ್ಯಾಸವಿದೆ ಎಂದರು.
ಇದರಲ್ಲಿ ಸರಿಯಾದ ಸಮಯಕ್ಕೆ ಹಣ ವಾಪಸ್ ಮಾಡದೇ ಇರಬಹುದು. ಇಲ್ಲವಾದಲ್ಲಿ ಅವರಿಗೆ ಹಣದ ಅವಶ್ಯಕತೆ ಇಲ್ಲದೇ ಇರಬಹುದು. ಆದರೆ ವ್ಯಾಪಾರಿಗೆ ಒಂದು ಮೂಲಧನವಾಗಿಯೇ ಇರಬಹುದು. ಓರ್ವ ಹಣ್ಣು, ತರಕಾರಿಯನ್ನು ಖರೀದಿ ಮಾಡಿ ಅಥವಾ ಸಾಲ ಮಾಡಿ ತಂದು ವ್ಯಾಪಾರ ಮಾಡಿದ್ರೆ, ಅವರಿಗೆ ಕೊನೆಯಲ್ಲಿ ಏನೂ ಉಳಿಯುವುದಿಲ್ಲ. ವ್ಯಾಪಾರಿಗಳು ಮೀಟರ್ ಬಡ್ಡಿಗೆ ಹಣ ತಂದು ವ್ಯಾಪಾರ ಮಾಡುತ್ತಾರೆ. ಇದರಿಂದ ಆತ ವ್ಯಾಪಾರ ಮಾಡಲು ಆಗದೆ ಸುಮ್ಮನೆ ಮನೆಯಲ್ಲಿ ಇರಬಹುದು. ಇದರಿಂದ ಪ್ರಧಾನ ಮಂತ್ರಿಗಳು ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈಗ ಪ್ರಪಂಚ ಆರ್ಥಿಕವಾಗಿ ಸಂಕಷ್ಟದಲ್ಲಿರುವಾಗ ನಮ್ಮ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸದೃಢತೆ ಇಟ್ಟುಕೊಂಡಿದ್ದಾರೆ.
ಶ್ರೀಲಂಕಾದಲ್ಲಿನ ಆರ್ಥಿಕ ಹಿಂಜರಿತದಿಂದ ಚೀನಾದಿಂದ ಸಾಲ ಪಡೆದು ಅವರಲ್ಲಿ ಏನೂ ಅಡ ಇಡಲು ಆಗದೇ, ಕೊನೆಗೆ ಶ್ರೀಲಂಕಾ ತನ್ನಲ್ಲಿನ ಮಂಗಗಳನ್ನು ಚೀನಾಕ್ಕೆ ರವಾನೆ ಮಾಡುತ್ತಿದೆ. ಪ್ರಪಂಚ ಕೋವಿಡ್ ನಂತರ ಸಂಕಷ್ಟದಲ್ಲಿದೆ. ಆದರೂ ಪಿಎಂ ಅವರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಕೊಳ್ಳುವ ಶಕ್ತಿಯನ್ನು ಪಿಎಂ ಸ್ವನಿಧಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ಪಿಎಂ ಸ್ವನಿಧಿಯನ್ನು ಪಡೆದವರು ಸ್ವಾಹ ಮಾಡದ ಹಾಗೆ ಪಡೆದ ಸಾಲವನ್ನು ವಾಪಸ್ ನೀಡಬೇಕೆಂದು ತಮಾಷೆಯಾಗಿ ಮಾತನಾಡಿದರು. ಈ ವೇಳೆ ಸಾಂಕೇತಿಕವಾಗಿ ಪತ್ರಿಕಾ ವಿತರಕರಿಗೆ ಮೊದಲ ಹಂತದ ಹಣದ ಚೆಕ್ ವಿತರಿಸಿದರು. ಶಾಸಕರಾದ ಚನ್ನಬಸಪ್ಪ, ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮೀ, ಆಯುಕ್ತರಾದ ಮಾಯಾಣ್ಣ ಗೌಡ, ಬ್ಯಾಂಕ್ನ ಅಧಿಕಾರಿಗಳು ಹಾಗೂ ಫಲಾನುಭವಿಗಳು ಹಾಜರಿದ್ದರು.
ಇದನ್ನೂ ಓದಿ: ಪಾವತಿ ಮೂಲಸೌಕರ್ಯ ಅಭಿವೃದ್ಧಿ ನಿಧಿಯಡಿ ಪಿಎಂ ವಿಶ್ವಕರ್ಮ ಯೋಜನೆ ಸೇರ್ಪಡೆ: ಆರ್ಬಿಐ