ಶಿವಮೊಗ್ಗ : ಮನೆಯಲ್ಲಿ ಚಾರ್ಜ್ಗೆ ಇಟ್ಟಿದ್ದ ಮೊಬೈಲ್ ಸ್ಫೋಟಗೊಂಡು ಬಾಲಕ ಗಾಯಗೊಂಡಿರುವ ಘಟನೆ ಶಿವಮೊಗ್ಗ ತಾಲೂಕು ಸೂಗೂರು ಗ್ರಾಮದಲ್ಲಿ ನಡೆದಿದೆ.
ಸುಗೂರು ಗ್ರಾಮದ ರಾಕೇಶ್ (7) ಬಾಲಕ ಘಟನೆಯಿಂದ ಗಾಯಗೊಂಡಿದ್ದಾನೆ. ಮೊಬೈಲ್ ಸ್ಫೋಟಗೊಂಡಿದ್ದರಿಂದ ಪಕ್ಕದಲ್ಲೇ ಕುಳಿತಿದ್ದ ಬಾಲಕನ ಮೇಲೆ ಫೋನ್ ಸಿಡಿದಿದೆ. ಇದರಿಂದ ಆತನ ಮುಖ, ಕೈಗೆ ಗಾಯಗಳಾಗಿವೆ.
ಬಾಲಕನನ್ನು ತಕ್ಷಣ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ, ಸದ್ಯ ಹೆಚ್ಚಿನ ಯಾವುದೇ ಅಪಾಯವೂ ಆಗಿಲ್ಲ.