ಶಿವಮೊಗ್ಗ : ಸೊರಬ ತಾಲೂಕು ಆಸ್ಪತ್ರೆಯಲ್ಲಿ ಶಾಸಕ ಕುಮಾರ ಬಂಗಾರಪ್ಪ ಇಂದು ಕೋವಿಡ್ ಲಸಿಕೆ ಪಡೆದುಕೊಂಡರು.
ಲಸಿಕೆ ಪಡೆದ ಬಳಿಕ ಸೆಲ್ಫಿ ಸ್ಟ್ಯಾಂಡ್ನಲ್ಲಿ ನಿಂತು ಫೊಟೋಗೆ ಪೋಸ್ ನೀಡಿದರು. ನಂತರ ಮಾತನಾಡಿದ ಅವರು, ಕೋವಿ ಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಎರಡೂ ಬೇರೆ ಬೇರೆಯಾದರೂ, ಎರಡು ಕೂಡ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೆಲಸ ಮಾಡುತ್ತವೆ. ಎಲ್ಲರೂ ಲಸಿಕೆ ಪಡೆದು ಸುರಕ್ಷಿತವಾಗಿರಿ, ಆರೋಗ್ಯವಾಗಿರಿ ಎಂದರು.