ಶಿವಮೊಗ್ಗ: ಫಸಲಿಗೆ ಬಂದಿದ್ದ ಅಡಕೆ, ತೆಂಗು ಹಾಗೂ ರಬ್ಬರ್ ತೋಟವನ್ನು ನಾಶ ಮಾಡಿರುವ ಘಟನೆ ಜಿಲ್ಲೆಯ ಬಿದರೂರು ಗ್ರಾಮದಲ್ಲಿ ನಡೆದಿದೆ. ಸಾಗರ ತಾಲೂಕು ಬಿದರೂರು ಗ್ರಾಮದ ಇಲಿಯಾಸ್ ಎಂಬುವವರಿಗೆ ಸೇರಿದ 10 ಎಕರೆಯಲ್ಲಿ ತೆಂಗು, ಅಡಕೆ ಹಾಗೂ ರಬ್ಬರ್ ಬೆಳೆ ನಾಶ ಮಾಡಲಾಗಿದೆ.
ರಾತ್ರಿ ಕೆಲ ಕಿಡಿಗೇಡಿಗಳು ಇವರ ತೋಟಕ್ಕೆ ನುಗ್ಗಿ ಫಸಲಿಗೆ ಬಂದಿದ್ದ ತೆಂಗು, ಅಡಕೆ ಹಾಗೂ ರಬ್ಬರ್ ಬೆಳೆ ನಾಶ ಮಾಡಿದ್ದಾರೆ. ಇದಲ್ಲದೇ, ಪಂಪ್ ಹೌಸ್ಗೆ ಹಾನಿ ಮಾಡಿದ್ದಾರೆ. ತೋಟದ ಒಳಗೆ ಇರುವ ಬಾವಿಗೆ ಕಲ್ಲು ಹಾಕಿ ಮುಚ್ಚುವ ಯತ್ನ ಮಾಡಲಾಗಿದೆ. ಇದರಿಂದ ಸುಮಾರು 10 ಲಕ್ಷಕ್ಕೂ ಅಧಿಕ ಹಣ ನಷ್ಟವಾಗಿದೆ ಎಂದು ಮಾಲೀಕ ಇಲಿಯಾಸ್ ಮಾಹಿತಿ ನೀಡಿದ್ದಾರೆ.
ಸದ್ಯ ಘಟನೆ ಸಂಬಂಧ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.