ETV Bharat / state

ನರೇಗಾ ಯೋಜನೆ ಬಗ್ಗೆ ನಿರ್ಲಕ್ಷ ತೋರಿದ ಅಧಿಕಾರಿಗಳಿಗೆ ಸಚಿವ ಕೆ ಎಸ್ ಈಶ್ವರಪ್ಪ ತರಾಟೆ.. - ಸಚಿವ ಕೆ.ಎಸ್.ಈಶ್ವರಪ್ಪ

ನರೇಗಾದಲ್ಲಿ ಮುಖ್ಯವಾಗಿ ಕೆರೆ ಹೂಳೆತ್ತುವುದು, ವೈಯಕ್ತಿಕ‌ ಕೆಲಸ, ಕೊಟ್ಟಿಗೆ ನಿರ್ಮಾಣ ಸೇರಿ ಇತರೆ ಕಾಮಗಾರಿಗಳ ಮಾಹಿತಿ ಪಡೆದರು.‌

Shimoga
ಪರಿಶೀಲನಾ ಸಭೆ
author img

By

Published : Jun 10, 2020, 3:55 PM IST

ಶಿವಮೊಗ್ಗ : ಜಿಲ್ಲೆಯ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹಾಗೂ ಆರ್ಟ್ ಆಫ್ ಲೀವಿಂಗ್​ನ ಅಂತರ್ಜಲ ಯೋಜನೆಯ ಕುರಿತು ಪಿಡಿಒಗಳ ಪ್ರಗತಿ ಪರಿಶೀಲನಾ ಸಭೆಯನ್ನು ಸಚಿವ ಕೆ ಎಸ್ ಈಶ್ವರಪ್ಪ ನಡೆಸಿದರು.‌

ಜಿಲ್ಲೆಯ ಕುವೆಂಪು ರಂಗಮಂದಿರದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ತಾಲೂಕುವಾರು ಪ್ರಗತಿ ಪರಿಶೀಲನೆ ನಡೆಸಿದರು. ಈ ವೇಳೆ ನರೇಗಾದ ಪ್ರಗತಿಯ ಕುರಿತು ಮಾಹಿತಿ ಪಡೆದುಕೊಂಡರು.

ಪಿಡಿಒಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ಕೆ ಎಸ್ ಈಶ್ವರಪ್ಪ..

ನರೇಗಾದಲ್ಲಿ ಮುಖ್ಯವಾಗಿ ಕೆರೆ ಹೂಳೆತ್ತುವುದು, ವೈಯಕ್ತಿಕ‌ ಕೆಲಸ, ಕೊಟ್ಟಿಗೆ ನಿರ್ಮಾಣ ಸೇರಿ ಇತರೆ ಕಾಮಗಾರಿಗಳ ಮಾಹಿತಿ ಪಡೆದರು.‌ ಈ ವೇಳೆ ಕಾಮಗಾರಿಯಲ್ಲಿ ಪ್ರಗತಿ‌ ತೋರದ ಪಿಡಿಒಗಳು ಹಾಗೂ ತಾಲೂಕು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ, ಯಾಕೆ ಇಷ್ಟೊಂದು‌ ನಿರ್ಲಕ್ಷ್ಯ ತೋರುತ್ತಿದ್ದೀರಿ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

ಈ ಸಭೆಯಲ್ಲಿ ಜಿಪಂ ಅಧ್ಯಕ್ಷೆ ಜ್ಯೋತಿ ಎಸ್ ಕುಮಾರ್, ಜಿಪಂ ಸಿಇಒ ವೈಶಾಲಿ ಸೇರಿ ಇತರೆ ಅಧಿಕಾರಿಗಳು ಹಾಜರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.