ETV Bharat / state

ಭದ್ರೆಗೆ ಬಾಗಿನ ಅರ್ಪಿಸಿದ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ - etv bharata kannada

ಭದ್ರಾ ಅಣೆಕಟ್ಟೆಗೆ ಸಚಿವ ಕೆ.ಸಿ ನಾರಾಯಣ ಗೌಡ ಅವರು ಬಾಗಿನ ಅರ್ಪಿಸಿದರು.

minister Narayana Gowda offers bagina to badra dam
ಭದ್ರೆಗೆ ಬಾಗಿನ ಅರ್ಪಣೆ
author img

By

Published : Jul 30, 2022, 1:16 PM IST

ಶಿವಮೊಗ್ಗ: ಅವಧಿಗೂ ಮುನ್ಮ ಭರ್ತಿಯಾದ ಭದ್ರಾ ಅಣೆಕಟ್ಟೆಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ ನಾರಾಯಣ ಗೌಡ ಅವರು ಬಾಗಿನ ಅರ್ಪಿಸಿದರು.

ಭದ್ರಾ ಅಣೆಕಟ್ಟೆಗೆ ಆಗಮಿಸಿದ ಸಚಿವ ನಾರಾಯಣ ಗೌಡ ಅವರು ಮೊದಲು ಶಿವನ ದೇವಾಲಯದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಭಾಗವಹಿಸಿದರು. ನಂತರ ಭದ್ರಾ ನದಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಭದ್ರಾ ಅಣೆಕಟ್ಟೆಗೆ ಬಾಗಿನ ಅರ್ಪಿಸಿದರು. ಈ ವೇಳೆ, ಸಂಸದ ರಾಘವೇಂದ್ರ, ಶಾಸಕರಾದ ರುದ್ರೇಗೌಡ, ಡಿ.ಎಸ್ ಅರುಣ್, ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಸೇರಿದಂತೆ ನೀರಾವರಿ ಇಲಾಖೆಯ ಇಂಜಿನಿಯರ್​ಗಳು ಹಾಜರಿದ್ದರು.

ಭದ್ರೆಗೆ ಬಾಗಿನ ಅರ್ಪಣೆ

ಸಚಿವ ನಾರಾಯಣಗೌಡ ಮಾತನಾಡಿ, ಅವಧಿಗೂ ಮುನ್ನವೇ ಭದ್ರೆ ತುಂಬಿರುವುದು ನಮಗೆಲ್ಲ ಸಂತೋಷ ತಂದಿದೆ. ಮಂಡ್ಯ ಹಾಗೂ ಶಿವಮೊಗ್ಗಕ್ಕೂ ಅವಿನಾಭಾವ ಸಂಬಂಧವಿದೆ.‌ ಮಂಡ್ಯದಲ್ಲಿ‌ ಕಾವೇರಿಗೆ ಬಾಗಿನ ಅರ್ಪಿಸಿ, ಈಗ ಭದ್ರಾ ನದಿಗೂ ಬಾಗಿ ಅರ್ಪಿಸುತ್ತಿರುವುದು ಸಂತಸ ತಂದಿದೆ. ಮಾಜಿ ಸಿಎಂ ಯಡಿಯೂರಪ್ಪ ಆಶೀರ್ವಾದದಿಂದ ನನಗೆ ಬಾಗಿನ ಅರ್ಪಿಸುವ ಪುಣ್ಯ ಬಂದಿದೆ ಎಂದರು.

ಹಿಂದೂ ಕಾರ್ಯಕರ್ತರ ಹತ್ಯೆಯಿಂದ ನಿಮ್ಮದೇ ಪಕ್ಷದ ಕಾರ್ಯಕರ್ತರು ನಿಮ್ಮ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ರೀತಿಯ ಘಟನೆಗಳಿಂದ ನೋವಾಗಿದೆ. ಕಾರ್ಯಕರ್ತರನ್ನು‌ ನಮ್ಮ ಪಕ್ಷದ ಹಿರಿಯರು ಸಮಾಧಾನಪಡಿಸಲಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಅವರು ಸೇರಿದಂತೆ ಹಿರಿಯರು ಎಲ್ಲವನ್ನೂ ಸರಿಪಡಿಸಲಿದ್ದಾರೆ ಎಂದರು.

ಇದನ್ನೂ ಓದಿ: ಚೆನ್ನೈಗೆ ತೆರಳಿದ ವಿಪಕ್ಷ ನಾಯಕ ಸಿದ್ದರಾಮಯ್ಯ: ರಾತ್ರಿ ಸ್ಟಾಲಿನ್ ಭೇಟಿ ಸಾಧ್ಯತೆ.. ಕಾರಣ?

ನಂತರ ಮಾತನಾಡಿದ ಸಂಸದ ಬಿ.ವೈ ರಾಘವೆಂದ್ರ ಅವರು, ಭದ್ರಾ ನದಿಯು 11 ಜಿಲ್ಲೆಗಳ ಜೀವನಾಡಿಯಾಗಿದೆ. ಭದ್ರಾ ಅಣೆಕಟ್ಟು ಭರ್ತಿಯಾದರೆ ಅರ್ಧ ರಾಜ್ಯ ಸಮೃದ್ಧಿಯಾಗಿರುತ್ತದೆ. ಮಳೆ‌-ಬೆಳೆ ಚೆನ್ನಾಗಿ ಆದಾಗ ರೈತ ವರ್ಗ ಖುಷಿಯಿಂದ ಇರುತ್ತಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.