ಶಿವಮೊಗ್ಗ: ''ರಾಜ್ಯದಲ್ಲಿ ನಡೆದಿದ್ದ 13 ಸಾವಿರ ಶಿಕ್ಷಕರ ನೇಮಕಾತಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿಯೇ ಹೋರಾಟ ಮಾಡಲಾಗುವುದು'' ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಶಿವಮೊಗ್ಗದಲ್ಲಿ ಶುಕ್ರವಾರ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ''ಸುಪ್ರೀಂ ಕೋರ್ಟ್ನಿಂದ ನಿನ್ನೆಯೇ ಒಂದು ಆದೇಶ ಬಂದಿದೆ. ಈ ಬಗ್ಗೆ ನಿನ್ನೆಯೇ ನಮ್ಮ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಆದೇಶದ ಕುರಿತು ಸಮಗ್ರವಾಗಿ ಚರ್ಚೆ ನಡೆಸಿ, ನಾವು ಮುಂದುವರೆಯಬೇಕಾದರೆ, ಅಡ್ವೊಕೇಟ್ ಜನರಲ್ ಅವರ ಸಲಹೆ ಬೇಕಾಗುತ್ತದೆ. ನಮ್ಮ ಇಲಾಖೆಯಿಂದ ಅಡ್ವೋಕೇಟ್ ಜನರಲ್ ಅವರಿಗೆ ಪತ್ರ ಬರೆಯಲಾಗಿದೆ. ಈ ಪತ್ರಕ್ಕೆ ಅವರು ಉತ್ತರ ಕೊಡುತ್ತಾರೆ. ಈಗಾಗಲೇ ನಮ್ಮ ಇಲಾಖೆಯಿಂದ ಕೋರ್ಟ್ಗೆ ಹಿರಿಯ ವಕೀಲರನ್ನು ನೇಮಿಸಿ ಕೇಸ್ ಮುಂದುವರೆಸುವ ಕೆಲಸವನ್ನು ಮಾಡುತ್ತೇವೆ'' ಎಂದರು.
''ಕೋರ್ಟ್ ಬಗ್ಗೆ ನಾವು ಮಾತನಾಡುವಂತಿಲ್ಲ. ಅದು ನ್ಯಾಯಾಲಯದ ನಿಂದನೆ ಮಾಡಿದಂತೆ ಆಗುತ್ತದೆ. ಇದರಿಂದ ನಾವು ಕೋರ್ಟ್ನಲ್ಲಿ ಹೋರಾಟ ನಡೆಸಬೇಕು. ನಾವು ನ್ಯಾಯಕ್ಕಾಗಿ ಕೋರ್ಟ್ನಲ್ಲಿಯೇ ಹೋರಾಟ ನಡೆಸಬೇಕು'' ಎಂದು ಹೇಳಿದರು.
ಇದನ್ನೂ ಓದಿ: ನೈಸ್ ಯೋಜನೆಯನ್ನು ಸರ್ಕಾರ ವಶಕ್ಕೆ ಪಡೆಯಬೇಕು: ಹೆಚ್.ಡಿ.ದೇವೇಗೌಡ