ETV Bharat / state

ಸಚಿವ ಈಶ್ವರಪ್ಪ ವಿಡಿಯೋ ಕಾನ್ಫರೆನ್ಸ್: ಗ್ರಾಮೀಣ ಪ್ರದೇಶದ ಜನರಿಗೆ ಶುದ್ದ ಕುಡಿಯುವ ನೀರು‌ ಪೂರೈಕೆ... - shivmogga video conference

ಶಿವಮೊಗ್ಗ ಜಿಲ್ಲಾ‌ ಪಂಚಾಯತ್​ನ ವಿಡಿಯೋ ಕಾನ್ಫರೆನ್ಸ್ ರೂಂನಲ್ಲಿ‌ ಕೇಂದ್ರದ ಜಲ ಜೀವನ್ ಮಿಷನ್ ಆಯುಕ್ತರೊಂದಿಗೆ ವಿಡಿಯೋ‌ ಕಾನ್ಫರೆನ್ಸ್​ನಲ್ಲಿ ಭಾಗಿಯಾಗಿ ಪ್ರತಿ ಮನೆಮನೆಗೆ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರನ್ನು ಪೂರೈಸುವ ಯೋಜನೆ ರೂಪಿಸಿದ್ದು, ವ್ಯವಸ್ಥಿತವಾಗಿ ಅನುಷ್ಠಾನ ಮಾಡಲಾಗುತ್ತಿದೆ ಎಂದರು.

minister KS Ishwarappa
ಸಚಿವ ಕೆ.ಎಸ್.ಈಶ್ವರಪ್ಪ
author img

By

Published : Nov 3, 2020, 4:22 PM IST

ಶಿವಮೊಗ್ಗ: ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯಡಿ ರಾಜ್ಯದ ಗ್ರಾಮೀಣ ಪ್ರದೇಶದ ಪ್ರತಿ ಮನೆಮನೆಗೆ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರನ್ನು ಪೂರೈಸುವ ಯೋಜನೆ ರೂಪಿಸಿದ್ದು, ವ್ಯವಸ್ಥಿತವಾಗಿ ಅನುಷ್ಠಾನ ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಇಂದು ಜಿಲ್ಲಾ‌ ಪಂಚಾಯತ್​ನ ವಿಡಿಯೋ ಕಾನ್ಫರೆನ್ಸ್ ರೂಂನಲ್ಲಿ‌ ಕೇಂದ್ರದ ಜಲ ಜೀವನ್ ಮಿಷನ್ ಆಯುಕ್ತರೊಂದಿಗೆ ವಿಡಿಯೋ‌ ಕಾನ್ಫರೆನ್ಸ್​ನಲ್ಲಿ ಭಾಗಿಯಾದ ನಂತರ ಮಾತನಾಡಿದ ಅವರು, ಈಗಾಗಲೇ ರಾಜ್ಯದ ಗ್ರಾಮೀಣ ಪ್ರದೇಶದ 2,47,200 ಲಕ್ಷ ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ ನಲ್ಲಿಗಳನ್ನು ಅಳವಡಿಸಿ, ನೀರನ್ನು ವಿತರಿಸಲಾಗುತ್ತಿದೆ. ಈ ವರ್ಷದಲ್ಲಿ ಮುಂದಿನ 100 ದಿನಗಳಲ್ಲಿ 2,35,700 ಲಕ್ಷ ಮನೆಗಳಿಗೆ ನೀರು ಒದಗಿಸುವ ಗುರಿ ಹೊಂದಲಾಗಿದೆ ಎಂದರು.

ಕೇಂದ್ರದ ಜಲ ಜೀವನ್ ಮಿಷನ್ ಆಯುಕ್ತರೊಂದಿಗೆ ವಿಡಿಯೋ‌ ಕಾನ್ಫರೆನ್ಸ್

ಈ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರದಿಂದ 4,093 ಕೋಟಿ ಹಾಗೂ ರಾಜ್ಯದಿಂದ 3,982 ಕೋಟಿ ರೂ.ಗಳನ್ನು 8,075 ಕೋಟಿ ರೂ.ಗಳನ್ನು ವ್ಯಯ ಮಾಡಲಾಗುವುದು ಎಂದರು. ಇವೆಲ್ಲವನ್ನು ನಿಗದಿತ ಸಮಯದ ಕಾಲಮಿತಿಯಲ್ಲಿ ಒದಗಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ರಾಜ್ಯದ 42.036 ಸರ್ಕಾರಿ ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಇದೆ. ಈ ವರ್ಷ 39.963 ಶಾಲೆಗಳಿಗೆ ನೀರು ಒದಗಿಸುವ ಕಾರ್ಯ ಪೂರ್ಣಗೊಂಡಿದೆ. ಪ್ರಧಾನಿಯವರ ಸೂಚನೆಯಂತೆ ಮುಂದಿನ 100 ದಿನಗಳಲ್ಲಿ 1,595 ಶಾಲೆಗಳಿಗೆ ನೀರು‌ ಪೂರೈಕೆ ಮಾಡಲಾಗುವುದು. ಅದೇ ರೀತಿ‌ ರಾಜ್ಯದಲ್ಲಿ‌ 65,911 ಅಂಗನವಾಡಿಗಳಿವೆ. ಇದರಲ್ಲಿ‌ 44,852 ಕಟ್ಟಡಗಳು ಸ್ವಂತ ಕಟ್ಟಡದಲ್ಲಿವೆ.‌ ಇದರಲ್ಲಿ 41,799 ಶಾಲೆಗಳಿಗೆ ನೀರಿನ ವ್ಯವಸ್ಥೆ ಇದೆ. ಉಳಿದ ಅಂಗನವಾಡಿಗಳಿಗೆ‌ ಮುಂದಿನ ಮೂರುವರೆ ತಿಂಗಳಲ್ಲಿ‌ ನೀರು‌ ಪೂರೈಕೆ ಮಾಡಲಾಗುವುದು ಎಂದರು.‌ ಅದೇ ರೀತಿ, ‌ಎಸ್​ಸಿ​/ಎಸ್​ಟಿ ಹಾಗೂ ಒಬಿಸಿ‌ ಹಾಸ್ಟೆಲ್​ಗಳಿಗೂ ಸಹ ನೀರು ಪೂರೈಕೆ ಮಾಡಲಾಗುವುದು‌ ಎಂದರು.

ಎಂಎನ್ಆರ್​ಜಿ ಯೋಜನೆಯಡಿ ಸೇವೆ ಸಲ್ಲಿಸಿದವರಿಗೆ ಪ್ರಶಂಸಾ ಪತ್ರ ವಿರತಣೆ:

ಶಿವಮೊಗ್ಗ ಜಿಲ್ಲಾ‌ ಪಂಚಾಯತ್ ವ್ಯಾಪ್ತಿಯಲ್ಲಿ ಎಂಎನ್ಆರ್​ಜಿ ಯೋಜನೆಯಡಿ‌‌ ಉತ್ತಮವಾಗಿ ಸೇವೆ ಸಲ್ಲಿಸಿದ ಇಓ,‌ ಪಿಡಿಓ‌ ಸೇರಿ ಇತರೆ ಅಧಿಕಾರಿಗಳಿಗೆ ಪ್ರಶಂಸಾ ಪತ್ರವನ್ನು ನೀಡಿ‌ ಗೌರವಿಸಲಾಯಿತು.‌

ಈ ವೇಳೆ ಗ್ರಾಮೀಣಾಭಿವೃದ್ಧಿ‌ ಖಾತೆ ಪ್ರಧಾನ ಕಾರ್ಯದರ್ಶಿ ಅತೀಕ್ ಅಹಮದ್, ಜಲ ನಿಗಮದ ಮುಖ್ಯ ಇಂಜಿನಿಯರ್ ಹೊಳೆ ಆಚೆ, ಸಂಸದ ಬಿ.ವೈ.ರಾಘವೇಂದ್ರ,‌ ಶಾಸಕ ಅಶೋಕ‌ನಾಯ್ಕ, ಜಿ.ಪಂ‌‌ ಸಿಇಒ‌ ವೈಶಾಲಿ‌ ಹಾಜರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.