ಶಿವಮೊಗ್ಗ: ಮದುವೆಯಾಗಬೇಕು ಎಂದಾಗ ಹೆಣ್ಣು ನೋಡುವುದು ಸಹಜ. ಅದೇ ರೀತಿ ಚುನಾವಣೆ ಬಂದಾಗ ಟಿಕೆಟ್ಗೆ ಅಪೇಕ್ಷೆ ಪಡೋದು ಸಹಜ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಮಾಧ್ಯಮಗಳೊಂದಗೆ ಮಾತನಾಡಿದ ಅವರು, ಚುನಾವಣೆ ಬಂದಾಗ ತಮಗೂ ಟಿಕೆಟ್ ನೀಡಿ ಎಂದು ಎಲ್ಲರೂ ಲಾಬಿ ನಡೆಸುತ್ತಾರೆ. ಇದು ರಾಜಕೀಯ ಪಕ್ಷದಲ್ಲಿ ನಡೆಯುವ ಸಹಜ ಪ್ರಕ್ರಿಯೆ ಎಂದರು.
ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಚುನಾವಣೆಯ ಕುರಿತು ಸಭೆ ನಡೆಸಿಲ್ಲ. ಸಭೆ ನಡೆಸಿ ಯಾರಿಗೆ ಟಿಕೆಟ್ ನೀಡಬಹುದು ಎಂಬ ಚರ್ಚೆ ಬಂದಾಗ ನೋಡೋಣ. ರಾಜ್ಯಸಭೆ ಚುನಾವಣೆಗೆ ಪಕ್ಷದ ಕಾರ್ಯಕರ್ತರನ್ನು ಆಯ್ಕೆ ಮಾಡಿದ್ದು, ಎಲ್ಲಾ ಕಾರ್ಯಕರ್ತರಿಗೂ ಸಹ ಒಂದು ರೀತಿಯ ಹುಮ್ಮಸ್ಸು ಬಂದಿದೆ. ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಗುರುತಿಸಿ ಟಿಕೆಟ್ ನೀಡಿದ್ದು, ಇದು ಎಲ್ಲರಿಗೂ ಸಂತಸ ತಂದಿದೆ ಎಂದರು.