ಶಿವಮೊಗ್ಗ: ರಾಜ್ಯ ಬಿಜೆಪಿ ಶಾಸಕರಲ್ಲಿ ಗೊಂದಲವಿರುವುದು ಸತ್ಯ, ಅದನ್ನು ನಾವೇ ಪರಿಹರಿಸಿಕೊಳ್ಳುತ್ತೆವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಕುಟುಂಬದಲ್ಲೂ ಸಣ್ಣ ಪುಟ್ಟ ಗೊಂದಲಗಳು ಇರುತ್ತವೆ. ನಾನು ನಮ್ಮಲ್ಲಿ ಗೊಂದಲ ಇಲ್ಲ ಅಂತ ಹೇಳುತ್ತಿಲ್ಲ. ಸರ್ಕಾರ ನಡೆಯುವ ಸಂದರ್ಭದಲ್ಲಿ ಗೊಂದಲ ಉಂಟಾಗುವುದು ಸಹಜ ಎಂದರು. ಅದನ್ನು ನಾವೆಲ್ಲಾ ಕುಳಿತು ಬಗೆಹರಿಸಿ ಕೊಳ್ಳುತ್ತೇವೆ. ಆ ಶಕ್ತಿ ನಮ್ಮ ಸಂಘಟನೆಗೆ ಇದೆ ಎಂದರು.