ಶಿವಮೊಗ್ಗ: ಮಾಜಿ ಸಿಎಂ ಕುಮಾರಸ್ವಾಮಿಯವರು ಗ್ರಾಮ ಪಂಚಾಯಿತಿ ಸದಸ್ಯರಿಗಿಂತ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಚಿವ ಈಶ್ವರಪ್ಪ ಕಿಡಿಕಾರಿದ್ದಾರೆ.
ಹೆಚ್ಡಿಕೆಯಿಂದ ಕೀಳುಮಟ್ಟದ ರಾಜಕೀಯ
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಮೊನ್ನೆ ಸಿಎಂ ಯಡಿಯೂರಪ್ಪನವರು ದೆಹಲಿಗೆ ಹೋದಾಗ ತಮ್ಮ ಜೊತೆ ಆರು ಸೂಟ್ ಕೇಸ್ ತೆಗೆದುಕೊಂಡು ಹೋಗಿದ್ದನ್ನು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಇದು ನಿಜಕ್ಕೂ ಕೀಳುಮಟ್ಟದ ರಾಜಕೀಯ ಎಂದು ಹರಿಹಾಯ್ದಿದ್ದಾರೆ.
ಸೂಟ್ಕೇಸ್ನಲ್ಲಿ ಹಾರ - ತುರಾಯಿ
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ರಾಜ್ಯದ ಆರು ಸಂಸದರಿಗೆ ಸಚಿವ ಸ್ಥಾನ ನೀಡಿದೆ. ಇಂಥ ಸಂದರ್ಭದಲ್ಲಿ ಪ್ರಧಾನಿ ಮೋದಿಯವರಿಗೆ ಸನ್ಮಾನ ಮಾಡಲು ಹಾರ, ತುರಾಯಿಗಳನ್ನು ಸೂಟ್ಕೇಸ್ನಲ್ಲಿ ತೆಗೆದುಕೊಂಡು ಹೋಗಿದ್ದರು ಎಂದು ಸಮಜಾಯಿಷಿ ಕೊಟ್ಟರು
ನಿಮ್ಮ ತಂದೆ ಏನು ತಗೊಂಡ್ ಹೋಗಿದ್ರು?
ನಿಮ್ಮ ತಂದೆ ಪ್ರಧಾನಿ ಆದಾಗ ರಾಜ್ಯದ ಜನತೆ ತಮ್ಮ ಬ್ಯಾಗ್ನಲ್ಲಿ ಏನು ತೆಗೆದುಕೊಂಡು ಹೋಗಿದ್ರು ಅಂತಾ ಹೆಚ್ಡಿಕೆ ಅವರನ್ನು ಪ್ರಶ್ನಿಸಿದ್ರು. ರಾಜ್ಯದ ಕೇಂದ್ರ ಮಂತ್ರಿಗಳನ್ನು, ಪ್ರಧಾನಿ, ಅಮಿತ್ ಶಾ, ನಡ್ಡಾರಿಗೆ ನೆನಪಿನ ಕಾಣಿಕೆ ನೀಡಲು ಬ್ಯಾಗ್ ತೆಗೆದುಕೊಂಡು ಹೋಗಿದ್ರು. ಅದನ್ನು ನೀವು ನಿಮ್ಮ ಕೆಟ್ಟ ಕಣ್ಣಿನಿಂದ ನೋಡಬೇಡಿ. ನೀವು ಕೇಂದ್ರದ ಮಂತ್ರಿಗಳನ್ನು ಭೇಟಿ ಮಾಡಿ, ಸನ್ಮಾನ ಮಾಡಬೇಕಿತ್ತು. ಅದನ್ನು ಬಿಟ್ಟು ಈ ರೀತಿ ಮಾತಾಡುವುದು ಸರಿಯಲ್ಲ ಎಂದರು.
ಆಮಿಷ ತೋರಲು ಹೋಗಿಲ್ಲ
ನರೇಂದ್ರ ಮೋದಿ ಕೀಳುಮಟ್ಟದ ರಾಜಕಾರಣಿಯಲ್ಲ. ಯಡಿಯೂರಪ್ಪನವರು ಮೋದಿಯವರಿಗೆ ಆಸೆ ಆಮಿಷ ತೋರಲು ಹೋಗಿರಲಿಲ್ಲ.
ಕ್ಷಮೆಯಾಚಿಸಿ
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ನೀವು ಕೀಳು ಮಟ್ಟದ ರಾಜಕೀಯ ಮಾಡಬೇಡಿ, ಜನತೆ ನಿಮ್ಮನ್ನು ಕ್ಷಮಿಸಲ್ಲ. ನೀವು ಈ ರಾಜ್ಯದ ಜನತೆ ಬಳಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ರು.
ಇದನ್ನೂ ಓದಿ:ಕಟೀಲ್ ಅವರದ್ದು ಎನ್ನಲಾದ ಆಡಿಯೋದ ಬಗ್ಗೆ ಈಶ್ವರಪ್ಪ ಏನಂದ್ರು?