ETV Bharat / state

ಈಶ್ವರಪ್ಪ ಹೇಳಿಕೆ ಚರ್ಚೆಗೆ ಪರಿಷತ್​​​​​​​ನಲ್ಲಿ ಪ್ರತಿಪಕ್ಷ ಒತ್ತಾಯ: ಕಲಾಪ ಹತ್ತು ನಿಮಿಷ ಮುಂದೂಡಿಕೆ - ಸಚಿವ ಈಶ್ವರಪ್ಪ ಹೇಳಿಕೆ ಜಂಟಿ ಅಧಿವೇಶನದಲ್ಲಿ ಚರ್ಚೆ

ವಿಧಾನಸಭೆ ಅಧಿವೇಶನದಲ್ಲಿ ಇಂದು ವಿರೋಧ ಪಕ್ಷದ ನಾಯಕರು, ಸಚಿವ ಈಶ್ವರಪ್ಪನವರ ವಿರುದ್ಧ ನಿಲುವಳಿ ಸೂಚನೆ ಮಂಡನೆಗೆ ಒತ್ತಾಯಿಸಿದರು. ಈ ವೇಳೆ ಗದ್ದಲ ಸೃಷ್ಟಿಯಾಗಿದ್ದು ಕಲಾಪವನ್ನು ಹತ್ತು ನಿಮಿಷ ಮುಂದೂಡಿಕೆ ಮಾಡಲಾಗಿತ್ತು.

Minister Eshwarappa statement was discussed in Session
ವಿಧಾನಸಭೆ ಅಧಿವೇಶನದಲ್ಲಿ ಸಚಿವ ಈಶ್ವರಪ್ಪ ಹೇಳಿಕೆ ಚರ್ಚೆ
author img

By

Published : Feb 16, 2022, 12:17 PM IST

Updated : Feb 16, 2022, 12:46 PM IST

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪನವರ ವಿರುದ್ಧ ನಿಲುವಳಿ ಸೂಚನೆ ಮಂಡನೆಗೆ ಪ್ರತಿಪಕ್ಷ ನಾಯಕರು ವಿಧಾನಪರಿಷತ್​ನಲ್ಲಿ ಒತ್ತಾಯಿಸಿ, ಒತ್ತಡ ಹೇರಿದ ಪ್ರಸಂಗ ನಡೆಯಿತು.

ಪ್ರಶ್ನೋತ್ತರ ಅವಧಿ ನಂತರ ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡುವುದಾಗಿ ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದರು. ಆದರೆ ಅದಕ್ಕೆ ಪ್ರತಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡುತ್ತೇನೆ. ಚರ್ಚೆಗೆ ಪ್ರಶ್ನೋತ್ತರ ಅವಧಿ ನಂತರ ಅವಕಾಶ ನೀಡುತ್ತೇನೆ ಎಂದರು.

ವಿಷಯ ಓದಿ ಬಿಡುತ್ತೇವೆ. ಅವಕಾಶ ನೀಡಿ ಎಂದು ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಒತ್ತಾಯಿಸಿದರು. ಸಾಧ್ಯವಿಲ್ಲ ಎಂದಾಗ ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಪೀಠದಿಂದ ಎದ್ದು ನಿಂತು ಸಭಾಪತಿಗಳು ಈ ಮನೆಗೆ ವಿಶೇಷ ಗೌರವ ಇದೆ. ಪ್ರಶ್ನೋತ್ತರ ಅವಧಿ ನಂತರ ಅವಕಾಶ ಕೊಡುತ್ತೇವೆ. ಅಲ್ಲಿಯವರೆಗೂ ಸಹಕರಿಸಿ ಎಂದು ಮನವಿ ಮಾಡಿದರು.

ಆಗ ಪ್ರತಿಪಕ್ಷ ಸದಸ್ಯರು ನಾವು ನಿಮಗೆ ಗೌರವಿಸುತ್ತೇವೆ. ಆದರೆ ರಾಷ್ಟ್ರದ್ರೋಹದ ಕಾರ್ಯ ಆಗಿದೆ. ಅದರ ವಿರುದ್ಧ ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು. ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಕ್ಸಮರ ಆರಂಭವಾದಾಗ ಸಭಾಪತಿಗಳು ಕಲಾಪವನ್ನು ಹತ್ತು ನಿಮಿಷ ಮುಂದೂಡಿದರು.

ಆಡಳಿತ, ಪ್ರತಿಪಕ್ಷ ಸದಸ್ಯರ ಸಭೆ:

ಕಲಾಪ ಮುಂದೂಡಿದ ಸಭಾಪತಿಗಳು ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ಸಭೆ ಕರೆದಿದ್ದು, ಪರಿಸ್ಥಿತಿ ತಿಳಿಗೊಳಿಸಿ ಸುಗಮ ಕಲಾಪ ನಡೆಸಲು ಅವಕಾಶ ಮಾಡಿಕೊಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ವಿವಾದಿತ ಹೇಳಿಕೆ: ಸಚಿವ ಕೆ.ಎಸ್.ಈಶ್ವರಪ್ಪನವರು ದೆಹಲಿಯ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ಹೇಳಿಕೆಯನ್ನು ಖಂಡಿಸಿ ನಿಲುವಳಿ ಸೂಚನೆ ಮಂಡಿಸಲು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ನಿನ್ನೆ ತೀರ್ಮಾನಿಸಲಾಗಿತ್ತು. ಅದೇ ನಿಟ್ಟಿನಲ್ಲಿ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಕಲಾಪ ಆರಂಭವಾಗುತ್ತಿದ್ದಂತೆ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡುವಂತೆ ಒತ್ತಾಯ ಮಾಡಿದ್ದರು.

ಇದನ್ನೂ ಓದಿ: ಕವಿಶ್ರೇಷ್ಠ ಕಣವಿ ಅಗಲಿಕೆಗೆ ಸಿಎಂ ಬೊಮ್ಮಾಯಿ, ಗಣ್ಯರ ಸಂತಾಪ

Last Updated : Feb 16, 2022, 12:46 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.