ETV Bharat / state

ಲಾಕ್​ ಡೌನ್​ನಲ್ಲಿ ವಿಭಿನ್ನ ಸಾಧನೆ.. ನವಣೆ ಕಾಳು ಎಣಿಸಿ ಇಂಡಿಯಾ ವರ್ಲ್ಡ್ ರೆಕಾರ್ಡ್ ಸೇರಿದ ಶಿವಮೊಗ್ಗ ವಿದ್ಯಾರ್ಥಿ! - ಇಂಡಿಯಾ ವರ್ಲ್ಡ್ ರೆಕಾರ್ಡ್ ಸೇರಿದ ಅಭಿಷೇಕ್

ಶಿವಮೊಗ್ಗದ ಗಾಂಧಿ ಬಜಾರ್​ನ ಅಶೋಕ್ ರಸ್ತೆ ನಿವಾಸಿಯಾಗಿರುವ ಅಭಿಷೇಕ್, ಲಾಕ್​ಡೌನ್​ ಸಂದರ್ಭದಲ್ಲಿ ನವಣೆ ಕಾಳುಗಳನ್ನು ಎಣಿಸಿ ಇಂಡಿಯಾ ವರ್ಲ್ಡ್ ರೆಕಾರ್ಡ್​ಗೆ ಭಾಜನರಾಗಿದ್ದಾರೆ.

Shivamogga
ಇಂಡಿಯಾ ವರ್ಲ್ಡ್ ರೆಕಾರ್ಡ್ ಸೇರಿದ ಅಭಿಷೇಕ್​
author img

By

Published : Jul 4, 2021, 11:34 AM IST

ಶಿವಮೊಗ್ಗ: ಲಾಕ್​ಡೌನ್​​ ಸಮಯದಲ್ಲಿ ಮನೆಯಲ್ಲೇ ಕುಳಿತಿದ್ದ ಯುವಕನೋರ್ವ ನವಣೆ ಕಾಳುಗಳನ್ನು ಎಣಿಸಿ ಸಾಧನೆ ಮಾಡಿದ್ದು, ಇದೀಗ ಇಂಡಿಯಾ ವರ್ಲ್ಡ್​​​ ರೆಕಾರ್ಡ್​ ಸೇರಿದ್ದಾನೆ. ಮನೆಗೆ ತಂದ ಒಂದು ಕೆಜಿ ನವಣೆಯಲ್ಲಿ ಎಷ್ಟು ಕಾಳುಗಳಿವೆ ಎಂದು ಎಣಿಸಿ ಈತ ಸಾಧನೆ ಮಾಡಿದ್ದಾನೆ.

ಶಿವಮೊಗ್ಗದ ಗಾಂಧಿ ಬಜಾರ್​ನ ಅಶೋಕ್ ರಸ್ತೆ ನಿವಾಸಿಯಾಗಿರುವ ಅಭಿಷೇಕ್, ಬ್ರಹ್ಮಾವರದ ವಿದ್ಯಾಲಕ್ಷ್ಮೀ ಗ್ರೂಪ್ ಆಫ್ ಇನ್​ಸ್ಟಿಟ್ಯೂಟ್​ನಲ್ಲಿ ಬಿಬಿಎ, ಏವಿಯೇಷನ್ ಆ್ಯಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ ತಂತ್ರಜ್ಞಾನ ವ್ಯಾಸಂಗ ಮಾಡುತ್ತಿದ್ದಾರೆ. ಕೊರೊನಾ 2ನೇ ಅಲೆಯ ಲಾಕ್​ಡೌನ್ ಆಗುತ್ತಿದ್ದಂತೆ ಮನೆಗೆ ಬಂದ ಅಭಿಷೇಕ್ ಅಲ್ಲಿಯೇ ಲಾಕ್ ಆಗಿದ್ದಾನೆ. ಈ ವೇಳೆ ಮನೆಯಲ್ಲೇ ಕುಳಿತು ಒಂದು ಕೆಜಿ ನವಣೆಯಲ್ಲಿ 4,04,882 ಕಾಳುಗಳನ್ನು ಎಣಿಸಿ, 500ಕ್ಕೆ ಒಂದರಂತೆ ಪ್ಯಾಕ್ ಮಾಡಿ, ಇಂಡಿಯಾ ವರ್ಲ್ಡ್ ರೆಕಾರ್ಡ್​ಗೆ ಭಾಜನರಾಗಿದ್ದಾರೆ.

Shivamogga
ಇಂಡಿಯಾ ವರ್ಲ್ಡ್ ರೆಕಾರ್ಡ್ ಸೇರಿದ ಅಭಿಷೇಕ್​

ಒಂದು ಕೆಜಿ ನವಣೆಯಲ್ಲಿ 4,04,882 ಕಾಳುಗಳನ್ನು ಎಣಿಸಲು 87 ಗಂಟೆ 35 ನಿಮಿಷ ತೆಗೆದುಕೊಂಡಿದ್ದು, ಇದನ್ನು ಐಡಬ್ಲ್ಯೂಆರ್ ಫೌಂಡೇಶನ್​ನವರು, ವಿಡಿಯೋ ಕಾಲ್ ಮಾಡಿ ಪರೀಕ್ಷೆ ಕೂಡ ಮಾಡಿದ್ದಾರಂತೆ. ಸಾಮಾನ್ಯವಾಗಿ, ಒಂದು ಕೆಜಿ ನವಣೆಯಲ್ಲಿ ಎಷ್ಟು ಕಾಳುಗಳು ಇರುತ್ತವೆ ಎಂಬುದು ಎಷ್ಟೋ ಜನರಿಗೆ ಗೊತ್ತಿರುವುದಿಲ್ಲ. ಅದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋದಿಲ್ಲ. ಆದರೆ, ಈ ಕೆಲಸವನ್ನು ಅಭಿಷೇಕ್ ಮಾಡಿ ತೋರಿಸಿದ್ದಾರೆ.

ಪ್ರತಿ ಪ್ಯಾಕೇಟ್​ನಲ್ಲಿ 500 ಕಾಳುಗಳನ್ನು ಬೇರ್ಪಡಿಸಿ, ಅತಿ ಸಣ್ಣದಾದ ಮತ್ತು ಹೆಚ್ಚು ತೂಕವಿಲ್ಲದ ನವಣೆ ಕಾಳುಗಳನ್ನು ಕೂಡ ಹೆಚ್ಚು ಕಡಿಮೆಯಾಗದಂತೆ ಎಣಿಸಿರುವುದು ವಿಶೇಷವಾಗಿದೆ. ಅತಿ ಕ್ಲಿಷ್ಟಕರವಾದ ಮತ್ತು ವಿಭಿನ್ನ ಪ್ರಯತ್ನದಲ್ಲಿ ಅಭಿಷೇಕ್ ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಇವರಿಗೆ ಇಂಡಿಯಾ ವರ್ಲ್ಡ್ ರೆಕಾರ್ಡ್ಸ್ ಪದಕ, ಪ್ರಶಸ್ತಿ ಪತ್ರ ಹಾಗೂ ಪ್ರಶಸ್ತಿ ಲಭಿಸಿದ್ದು, ಅಭಿಷೇಕ್ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಮುಖವಾಗಿ ಪಕ್ಷಿಗಳಿಗೆ ಮತ್ತು ಸಕ್ಕರೆ ಕಾಯಿಲೆ ಇರುವವರಿಗೆ ಈ ನವಣೆ ಕಾಳುಗಳ ಅಗತ್ಯತೆ ಹೆಚ್ಚಿದ್ದು, ಅಭಿಷೇಕ್ ಮನೆಯಲ್ಲಿಯೂ ಉಪಹಾರಕ್ಕಾಗಿ ಈ ನವಣೆ ಕಾಳುಗಳನ್ನು ಬಳಸುತ್ತಾರಂತೆ. ಸಾಧನೆಗೆ ಇದೇ ಕಾಳನ್ನು ಬಳಸಿಕೊಂಡಿದ್ದು ಅಭಿಷೇಕ್ ವಿಭಿನ್ನ ಪ್ರಯತ್ನಕ್ಕೆ ಸಾಕ್ಷಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.