ETV Bharat / state

ಮಾನಸಧಾರ ಕೇಂದ್ರದಲ್ಲಿ 19 ಜನರಿಗೆ ಕೊರೊನಾ: ಕಂಟೈನ್ಮೆಂಟ್​ ಝೋನ್ ಎಂದು ಘೋಷಣೆ - Corona

ಕೊರೊನಾ ಅಬ್ಬರ ಕಡಿಮೆ ಆಯಿತು ಎನ್ನುವಾಗಲೇ ಶಿವಮೊಗ್ಗದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಮಾನಸಧಾರ ಟ್ರಸ್ಟ್​ನ ಮಾನಸಿಕ ಅಸ್ವಸ್ಥರ ಪುನಃಶ್ಚೇತನ ಕೇಂದ್ರದಲ್ಲಿ 19 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

manasadhara-health-center
ಮಾನಸಧಾರ ಆರೋಗ್ಯ ಕೇಂದ್ರದಲ್ಲಿ 19 ಜನರಿಗೆ ಕೊರೊನಾ
author img

By

Published : Feb 24, 2021, 9:36 PM IST

ಶಿವಮೊಗ್ಗ: ನಗರದ ಮಾನಸಧಾರ ಟ್ರಸ್ಟ್​ನ ಮಾನಸಿಕ ಅಸ್ವಸ್ಥರ ಪುನಃಶ್ಚೇತನ ಕೇಂದ್ರದಲ್ಲಿ 19 ಮಂದಿಗೆ ಕೊರೊನಾ ತಗುಲಿದ ಹಿನ್ನೆಲೆ ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ.

ಮಾನಸಧಾರ ಆರೋಗ್ಯ ಕೇಂದ್ರದಲ್ಲಿ 19 ಜನರಿಗೆ ಕೊರೊನಾ

ರಾಜ್ಯದ ವಿವಿಧೆಡೆಯಿಂದ ಕೇಂದ್ರಕ್ಕೆ ಬಂದವರಿಂದ ಕೊರೊನಾ ಹರಡಿದೆ ಎನ್ನಲಾಗುತ್ತಿದೆ. ಪಾಲಿಕೆ‌ ಅಂಟಿಸಿದ್ದ ಕೊರೊನಾ ಸ್ಟಿಕ್ಕರ್​ಅನ್ನು ಇಲ್ಲಿನ ಸಿಬ್ಬಂದಿ ಕಿತ್ತು‌ ಒಳಗೆ ಅಂಟಿಸಿಕೊಂಡಿದ್ದರು. ಇದರಿಂದ ಕೇಂದ್ರ ಕಂಟೈನ್ಮೆಂಟ್​ ಝೋನ್ ಆಗಿದೆ ಎಂದು ಯಾರಿಗೂ ತಿಳಿಯದಂತಾಗಿತ್ತು.

ನಂತರ ಸಿಬ್ಬಂದಿ ಪುನಃ ಸ್ಟಿಕ್ಕರ್‌ ಅಂಟಿಸಿದ್ದಾರೆ. ಪಾಲಿಕೆಯವರು ಈ ಕೇಂದ್ರವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಹಾವಳಿ ಪ್ರಾರಂಭವಾಗುವ ಲಕ್ಷಣಗಳು ಕಾಣಸಿಗುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.