ETV Bharat / state

ಕಾಂಗ್ರೆಸ್ 'ಸಿಡಿ' ತಯಾರು ಮಾಡುವ ಗ್ಯಾಂಗ್: ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ - ಸಿಡಿ ವಿಚಾರವಾಗಿ ರೇಣುಕಾಚಾರ್ಯ ಮಾತು

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

M. P. Renukacharya
M. P. Renukacharya
author img

By

Published : Mar 27, 2021, 11:49 PM IST

ಶಿವಮೊಗ್ಗ: ಕಾಂಗ್ರೆಸ್ ಪಕ್ಷ ಸಿಡಿ ತಯಾರು ಮಾಡುವ ಗ್ಯಾಂಗ್ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಆರೋಪಿಸಿದರು.

ಶಿವಮೊಗ್ಗದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಯುವತಿಯನ್ನು ದುರ್ಬಳಕೆ ಮಾಡಿಕೊಂಡಿದ್ದು, ಯುವತಿಯ ಕುಟುಂಬ ಇದೀಗ ಕಣ್ಣೀರಿನಲ್ಲಿ ಕೈ ತೊಳಿಯುತ್ತಿದೆ ಎಂದರು. ಕಾಂಗ್ರೆಸ್ ಪಕ್ಷ ಸಿಡಿ ತಯಾರು ಮಾಡುವ ಹಾಗೂ ಭ್ರಷ್ಟಾಚಾರದ ಗ್ಯಾಂಗ್ ಎಂದು ಹರಿಹಾಯ್ದಿದ್ದು, ಸಿಡಿ ಪ್ರಕರಣವನ್ನು ಎಸ್​​ಐಟಿ ತನಿಖೆಗೆ ನೀಡಲಾಗಿದ್ದು, ಇದರಿಂದ ಸತ್ಯಾಂಶ ಹೊರಬರಲಿದೆ ಎಂದರು.

ಸಿಡಿ ವಿಚಾರವಾಗಿ ರೇಣುಕಾಚಾರ್ಯ ಪ್ರತಿಕ್ರಿಯೆ

ರಾಜ್ಯದಲ್ಲಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡದೆ ಕಾಂಗ್ರೆಸ್ ನೀಚ ರಾಜಕಾರಣ ಮಾಡಿದ್ದು, ಕಾಂಗ್ರೆಸ್​​ನಲ್ಲಿ ಎಷ್ಟು ಜನ ಸತ್ಯಹರಿಶ್ಚಂದ್ರರಿದ್ದಾರೆ. ಈ ಪಕ್ಷದಲ್ಲಿ ಮಾಡಬಾರದನ್ನು ಯಾವುದೇ ನಾಯಕರು ಮಾಡಿಲ್ವಾ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯನವರೇ, ನೀವು ಮುಖ್ಯಮಂತ್ರಿಯಾಗಿದ್ದಾಗ ಮೇಟಿ ಪ್ರಕರಣವನ್ನು ಏನು ಮಾಡಿದ್ದೀರಿ. ನೀವು ಮೇಟಿ ಮೇಲೆ ಕ್ರಿಮಿನಲ್ ಕೇಸ್ ಹಾಕಿದ್ದೀರಾ? ಎಂದು ಪ್ರಶ್ನಿಸಿದರು. ಮುಂಬರುವ ಮೂರು ಉಪ ಚುನಾವಣೆಯಲ್ಲಿ ಜನರು ನಿಮಗೆ ಬುದ್ಧಿ ಕಲಿಸಿ ವಿರೋಧ ಪಕ್ಷದಲ್ಲೇ ಇರುವಂತೆ ಮಾಡುತ್ತಾರೆ ಎಂದರು.

ಇದನ್ನೂ ಓದಿ: ನನ್ನ ಪೋಷಕರ ಮೇಲೆ ಪ್ರಭಾವ ಬೀರಿ ಬ್ಲ್ಯಾಕ್ ಮೇಲ್: ಯುವತಿಯಿಂದ 5ನೇ ವಿಡಿಯೋ ಬಿಡುಗಡೆ

ಯತ್ನಾಳ್​ ಕಾಂಗ್ರೆಸ್​ ಪಕ್ಷದ ಏಜೆಂಟ್​!

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರೆಂದು ಹೇಳಿಕೆ ನೀಡಿರುವ ಯತ್ನಾಳ್​ ಬಗ್ಗೆ ಮಾತನಾಡಿದ ರೇಣುಕಾಚಾರ್ಯ, ಯತ್ನಾಳ್ ಕಾಂಗ್ರೆಸ್ ಪಕ್ಷದ ಏಜೆಂಟ್​ ಆಗಿ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬದಲಾಯಿಸಲು ನೀವು ಯಾರು? ರಾಜ್ಯದ ಜನ ಹಾಗೂ ಪಕ್ಷದ 117 ಶಾಸಕರು ಶಾಸಕಾಂಗ ಸಭೆಯಲ್ಲಿ ರಾಷ್ಟ್ರೀಯ ನಾಯಕರ ಅಪೇಕ್ಷೆಯಂತೆ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರನ್ನ ಆಯ್ಕೆ ಮಾಡಿದ್ದಾರೆ. ಅವರನ್ನ ಬದಲಾವಣೆ ಮಾಡಲು ನೀನು ಯಾರು? ಎಂದು ಏಕವಚನದಲ್ಲಿ ಹರಿಹಾಯ್ದರು. ಪಕ್ಷದ ರಾಷ್ಟ್ರೀಯ ನಾಯಕರು ಯತ್ನಾಳ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಡಿ ಎಂದಿದ್ದಾರೆ. ಹಾಗಾಗಿ ನಾವು ಗಂಭೀರವಾಗಿ ಪರಿಗಣಿಸಲ್ಲ, ಯತ್ನಾಳ್ ಅವರಿಗೆ ಯಡಿಯೂರಪ್ಪನವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.