ETV Bharat / state

ಶಿವಮೊಗ್ಗದಲ್ಲಿ ಲಾಕ್​ಡೌನ್​ ಸಡಿಲಿಕೆ.... ಕಿಕ್ಕಿರಿದ ಜನಸಂದಣಿ - Lock-down relaxation at Shimoga

ಶಿವಮೊಗ್ಗ ಗ್ರೀನ್ ಜೋನ್ ನಲ್ಲಿರುವುದರಿಂದ ಲಾಕ್ ಡೌನ್ ನಿಯಮಗಳಲ್ಲಿ ಕೆಲ ಸಡಿಲಿಕೆ ಮಾಡಲಾಗಿದ್ದು, ಅಂಗಡಿಗಳು ತೆರೆದ ಕಾರಣ ಗ್ರಾಮೀಣ ಭಾಗದವರು ಹಾಗೂ ನಗರ ಭಾಗದ ಜನ ಅಂಗಡಿಗಳತ್ತ ದೌಡಾಯಿಸಿದ್ದರು.‌

ಶಿವಮೊಗ್ಗದಲ್ಲಿ ಕೇಂದ್ರದ ನಿರ್ದೇಶನದನ್ವಯ ಲಾಕ್​ಡೌನ್​ ಸಡಿಲಿಕೆ

author img

By

Published : Apr 29, 2020, 11:48 PM IST

ಶಿವಮೊಗ್ಗ: ಜಿಲ್ಲೆಯು ಗ್ರೀನ್ ಜೋನ್ ನಲ್ಲಿದೆ. ಇದರಿಂದ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರ ಲಾಕ್ ಡೌನ್ ನಿಯಮಗಳಲ್ಲಿ ಕೆಲ ಸಡಿಲಿಕೆ ಮಾಡಿದೆ. ಅದರಂತೆ ಜೀವನಾವಶ್ಯಕ ವಸ್ತುಗಳ ಜೊತೆಗೆ ಕೃಷಿ, ಕಬ್ಬಿಣ, ಎಲೆಕ್ಟ್ರಾನಿಕ್ ವಸ್ತುಗಳ ಅಂಗಡಿ ತೆರೆಯಲು ಅವಕಾಶ ಮಾಡಿ ಕೊಟ್ಟಿದೆ. ಇದರಿಂದ ಜನ ತಮಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಅಂಗಡಿಗಳ ಮುಂದೆ ನಿಂತಿದ್ದರು.

ಶಿವಮೊಗ್ಗ ಜಿಲ್ಲೆಯಲ್ಲಿ ಕೃಷಿ ಉಪಕರಣಗಳ ಅಂಗಡಿ, ನೀರಾವರಿ ಉಪಕರಣಗಳು, ಗೊಬ್ಬರ ಸೇರಿದಂತೆ ಕೃಷಿ ಸಂಬಂಧಿತ ಅಂಗಡಿಗಳು ತೆರೆಯಲಾಗಿದೆ. ಜೊತೆಗೆ ಪೈಪ್ ಅಂಗಡಿಗಳು, ಎಲೆಕ್ಟ್ರಾನಿಕ್ ಅಂಗಡಿ, ದೊಡ್ಡ ದಿನಸಿ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿ‌ ಕೊಡಲಾಗಿದೆ. ಈ‌ ಅಂಗಡಿಗಳನ್ನು‌ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೂ ತೆರೆಯಲು ಅವಕಾಶ ಮಾಡಿ ಕೊಡಲಾಗಿದೆ. ಅಂಗಡಿಗಳು ತೆರೆದ ಕಾರಣ ಗ್ರಾಮೀಣ ಭಾಗದವರು ಹಾಗೂ ನಗರ ಭಾಗದ ಜನ ಅಂಗಡಿಗಳತ್ತ ದೌಡಾಯಿಸಿದ್ದರು.‌

ಹಿಂದೆ ಶಿವಮೊಗ್ಗ ವಾಣಿಜ್ಯ ಕೇಂದ್ರ ಗಾಂಧಿ ಬಜಾರ್ ನಲ್ಲಿ ಅಂಗಡಿ ತೆರೆಯಲು ಅವಕಾಶ ನೀಡಿರಲಿಲ್ಲ. ಈಗ ದಿನಸಿ ಹೋಲ್ ಸೇಲ್ ಶಾಪ್ ತೆರೆಯಲು ಅವಕಾಶ ನೀಡಲಾಗಿದೆ.‌ ನಗರದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದ ತನಕ ಅಂಗಡಿಗಳು ತೆರೆದಿದ್ದ ಕಾರಣ ರಸ್ತೆಯಲ್ಲಿ ಜನ ಸಂದಣಿ ಹೆಚ್ಚಿತ್ತು. ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ, ಲಾಕ್ ಡೌನ್ ಮುಂದುವರೆಯುತ್ತದೆ. ಇದರಿಂದ ಜನ ಅನಾವಶ್ಯಕವಾಗಿ ರಸ್ತೆಗಿಳಿಯಬಾರದು. ಅವಶ್ಯಕತೆ ಇದ್ದವರು ಮಾತ್ರ ಬಂದು ವಸ್ತುಗಳನ್ನು ಕೊಂಡಯ್ಯಬೇಕು. ಎಲ್ಲರೂ ರಸ್ತೆಗೆ ಬರಬಾರದು ಎಂದು ತಿಳಿಸಿದ್ದಾರೆ.

ಆದರೆ, ಸಾರ್ವಜನಿಕರು ಮಾತ್ರ ಅಂಗಡಿಗಳನ್ನು ಕನಿಷ್ಠ 4 ಗಂಟೆ ತನಕ ತೆರೆದಿದ್ದರೆ ಒಳ್ಳೆಯದಿತ್ತು. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎನ್ನುತ್ತಾರೆ ಸ್ಥಳೀಯರಾದ ವಸೀಮ್ ವುಲ್ಲಾರವರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.