ಶಿವಮೊಗ್ಗ: ಜಿಲ್ಲೆಯ ನಗರಸಭೆ, ಪುರಸಭೆ ಹಾಗೂ ಮೂರು ಪಟ್ಟಣ ಪಂಚಾಯತ್ ಫಲಿತಾಂಶ ಹೊರ ಬಿದ್ದಿದೆ. ತವರು ಜಿಲ್ಲೆ ಶಿಕಾರಿಪುರದಲ್ಲಿ ಬಿಜೆಪಿ ಸೋಲನ್ನು ಅನುಭವಿಸಿದ್ದು, ಸಾಗರ ಹಾಗೂ ಸೊರಬದಲ್ಲಿ ಬಿಜೆಪಿ ಜಯ ಸಾಧಿಸಿದೆ. ಇನ್ನೂ ಮೂರು ಕಡೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಕಳೆದ 15 ವರ್ಷಗಳಿಂದ ಶಿಕಾರಿಪುರದಲ್ಲಿ ಬಿಜೆಪಿಯ ಆಡಳಿತ ನಡೆಸುತ್ತಿತ್ತು. ಭ್ರಷ್ಟಚಾರ, ಜನ ವಿರೋಧಿ ಆಡಳಿತದಿಂದ ಅಧಿಕಾರ ಕಳೆದುಕೊಂಡಿದೆ. ಜಿಲ್ಲೆಯಲ್ಲಿ 6 ಶಾಸಕರು, ಇಬ್ಬರು ಎಂಎಲ್ಸಿಗಳನ್ನು ಹಾಗೂ ಓರ್ವ ಸಂಸದರನ್ನೂ ಹೊಂದಿದ್ದರೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಧಿಕಾರ ಪಡೆಯುವಲ್ಲಿ ವಿಫಲವಾಗಿದೆ. ಈ ಬಾರಿ ಜನ ಸ್ಥಳೀಯವಾಗಿ ಮೈತ್ರಿಗೆ ಬೆಂಬಲ ನೀಡಿದ್ದಾರೆ.
ಲಾಟರಿ ಮೂಲಕ ವಿಜಯ ಶಾಲಿಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ :
ಶಿಕಾರಿಪುರದ ವಾರ್ಡ್ 4 ಹಾಗೂ 5ರಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಸಮ ಸಮ ಮತಗಳಿಸಿದ್ದರು. ವಾರ್ಡ್ 4 ರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ 283 ಮತ ಪಡೆದುಕೊಂಡಿತ್ತು. ಬಳಿಕ ಲಾಟರಿ ಎತ್ತಲಾಯಿತು. ಈ ವೇಳೆ ಬಿಜೆಪಿ ಅಭ್ಯರ್ಥಿ ವಿಜಯಿಯಾದರು.
ಅದೇ ರೀತಿ ವಾರ್ಡ್ 5 ರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ತಲಾ 212 ಮತಗಳನ್ನು ಪಡೆದುಕೊಂಡಿದ್ದರು. ಇಲ್ಲೂ ಸಹ ಲಾಟರಿ ಎತ್ತಲಾಯಿತು. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿಗೆ ವಿಜಯದಮಾಲೆ ಹಾಕಲಾಯಿತು. ಶಿಕಾರಿಪುರದಲ್ಲಿ ಕಾಂಗ್ರೆಸ್ ಪಟಾಕಿ ಸಿಡಿಸಿ ಸಂಭ್ರಮಿಸಿದರೆ. ಸೊರಬದಲ್ಲಿ ಬಿಜೆಪಿ ಅಭ್ಯರ್ಥಿಗಳು ಮೆರವಣಿಗೆ ನಡೆಸಿದರು.
ಸಾಗರ ನಗರಸಭೆಯಲ್ಲಿ ಮಾತ್ರ ಬಿಜೆಪಿ ಪೂರ್ಣ ಪ್ರಮಾಣದ ಅಧಿಕಾರ ಪಡೆದುಕೊಂಡಿದ್ದು, ಶಿಕಾರಿಪುರದಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿ ಸಾಗರ, ಸೊರಬ ಪಟ್ಟಣ ಪಂಚಾಯತ್‌ನಲ್ಲಿ ಅಧಿಕಾರಕ್ಕೇರುತ್ತಿದೆ. ಇನ್ನುಳಿದಂತೆ ಶಿರಾಳಕೊಪ್ಪ ಹಾಗೂ ಹೊಸನಗರದಲ್ಲಿ ಮೈತ್ರಿ ಅಧಿಕಾರವನ್ನ ಮತ್ತೆ ಬಾಚಿ ಕೊಂಡಿದೆ.
ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣ :
ಶಿರಾಳಕೊಪ್ಪ ಪಟ್ಟಣ ಪಂಚಾಯತ್ ಮತ ಎಣಿಕೆ ನಂತರ ಪಕ್ಷೇತರ ಅಭ್ಯರ್ಥಿಗಳ ನಡುವೆ ಸಣ್ಣ ಕಿರಿ ಕಿರಿ ಉಂಟಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಜನರನ್ನು ಚದುರಿಸಿದರು.
ಚುನಾವಣಾ ಫಲಿತಾಂಶದ ಸಂಪೂರ್ಣ ವಿವರ:
ಶಿಕಾರಿಪುರ ಪುರಸಭೆ-23 ವಾರ್ಡ್
ಬಿಜೆಪಿ-08
ಕಾಂಗ್ರೆಸ್-12
ಜೆಡಿಎಸ್-00
ಪಕ್ಷೇತರ-03
ಶಿರಾಳಕೊಪ್ಪ ಪಟ್ಟಣ ಪಂಚಾಯತಿ-17 ವಾರ್ಡ್
ಬಿಜೆಪಿ-02
ಕಾಂಗ್ರೆಸ್-07
ಜೆಡಿಎಸ್-03
ಪಕ್ಷೇತರ-05
ಸೊರಬ ಪಟ್ಟಣ ಪಂಚಾಯತಿ-13 ವಾರ್ಡ್ಬಿಜೆಪಿ-06
ಕಾಂಗ್ರೆಸ್-04
ಜೆಡಿಎಸ್-01
ಪಕ್ಷೇತರ-01
ಸಾಗರ ನಗರಸಭೆ-31 ವಾರ್ಡ್ಬಿಜೆಪಿ-16
ಕಾಂಗ್ರೆಸ್-09
ಜೆಡಿಎಸ್-01
ಪಕ್ಷೇತರ-05
ಹೊಸನಗರ ಪಟ್ಟಣ ಪಂಚಾಯತಿ -11 ವಾರ್ಡ್
ಬಿಜೆಪಿ-04
ಕಾಂಗ್ರೆಸ್-04
ಜೆಡಿಎಸ್-03
ಪಕ್ಷೇತರ-00