ETV Bharat / state

Electrocution: ಶಿವಮೊಗ್ಗದಲ್ಲಿ ವಿದ್ಯುತ್ ಪ್ರವಹಿಸಿ ಕಂಬದ ಮೇಲೆಯೇ ಲೈನ್​ಮ್ಯಾನ್ ಸಾವು

author img

By ETV Bharat Karnataka Team

Published : Sep 24, 2023, 3:23 PM IST

Updated : Nov 28, 2023, 4:47 PM IST

ವಿದ್ಯುತ್ ದುರಸ್ತಿ ವೇಳೆ ಕಂಬದ ಮೇಲೆಯೇ ಲೈನ್​ಮ್ಯಾನ್ ಮೃತಪಟ್ಟಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶಿವಮೊಗ್ಗ : ವಿದ್ಯುತ್ ಪರಿವರ್ತಕದಲ್ಲಿ ದುರಸ್ತಿ ನಡೆಸುವ ಸಂದರ್ಭದಲ್ಲಿ ವಿದ್ಯುತ್ ಹರಿದು ಲೈನ್​ಮ್ಯಾನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯಗಳಾಗಿರುವ ಘಟನೆ ಭದ್ರಾವತಿ ತಾಲೂಕು ಮಾಚೇನಹಳ್ಳಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ನಡೆದಿದೆ. ಕಿರಣ್(26) ಸಾವನ್ನಪ್ಪಿದ ಲೈನ್​ಮ್ಯಾನ್.

ಈ ಮೊದಲೇ ಮೆಸ್ಕಾಂ ದುರಸ್ತಿ ಕಾಮಗಾರಿ ಬಗ್ಗೆ ಈ ಭಾಗದಲ್ಲಿ ಪ್ರಕಟಣೆ ನೀಡಿತ್ತು. ಅದರಂತೆ ಬೆಳಗ್ಗೆ 9 ಗಂಟೆಗೆ ವಿದ್ಯುತ್ ಕಡಿತಗೊಳಿಸಲಾಗಿತ್ತು. ಈ ಮಧ್ಯೆ ಇಂಡಸ್ಟ್ರಿಯಲ್ ಏರಿಯಾದ ಮೊದಲನೇ ತಿರುವಿನ ರಸ್ತೆಯಲ್ಲಿ ಇರುವ ಹೈಟೆನ್ಶನ್​ ಕಂಬವನ್ನು ಮೆಸ್ಕಾಂ ಸಿಬ್ಬಂದಿ ಹತ್ತಿದ್ದಾರೆ. ಇದ್ದಕ್ಕಿದ್ದಂತೆ ವಿದ್ಯುತ್ ಪ್ರವಹಿಸಿ ಕಿರಣ್ ಕಂಬದಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಸುನಿಲ್ ಹಾಗೂ ಭಾಸ್ಕರ್​ ಎಂಬವರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯುತ್ ಪ್ರವಹಿಸಲು ಕಾರಣ ತಿಳಿದು ಬಂದಿಲ್ಲ : ವಿದ್ಯುತ್ ಲೈನ್​ ಚೇಂಜ್ ವೇಳೆ ಈ ದುರ್ಘಟನೆ ಸಂಭವಿಸಿತಾ? ಅಥವಾ ಜನರೇಟರ್​ಗಳ ವಿದ್ಯುತ್ ರಿವರ್ಸ್​ ಆಗಿ ಘಟನೆ ಸಂಭವಿಸಿತಾ ಎಂಬುದು ಸ್ಪಷ್ಟವಾಗಿಲ್ಲ ಎಂದು ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು, ಪೊಲೀಸ್​ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ : Electrocution: ವಿದ್ಯುತ್‌ ಕಂಬ ದುರಸ್ತಿ ವೇಳೆ ಇಬ್ಬರು ಲೈನ್‌ಮ್ಯಾನ್‌ಗಳು​ ಸಾವು

Last Updated : Nov 28, 2023, 4:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.