ETV Bharat / state

ಕುಮಾರ ಬಂಗಾರಪ್ಪನವರಿಗೆ ಟಿಕೆಟ್​​ ನೀಡಬೇಡಿ ಎಂದು ಕಾರ್ಯಕರ್ತನಿಂದ ಪ್ರಧಾನಿ‌ ಮೋದಿಗೆ ಪತ್ರ - madhu bangarappa

ಸೊರಬ ಶಾಸಕ ಕುಮಾರ ಬಂಗಾರಪ್ಪ ಆರ್​ಎಸ್​ಎಸ್ ಹಾಗೂ ನಿಷ್ಟಾವಂತ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ. ಕ್ಷೇತ್ರದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿಗೆ ಬರೆದ ಪತ್ರ ವೈರಲ್​ ಆಗಿದೆ.

letter-to-prime-minister-modi-not-to-issue-ticket-to-kumar-bangarappa
ಕುಮಾರ ಬಂಗಾರಪ್ಪನವರಿಗೆ ಟಿಕೆಟ್​​ ನೀಡಬೇಡಿ ಎಂದು ಕಾರ್ಯಕರ್ತನಿಂದ ಪ್ರಧಾನಿ‌ ಮೋದಿಗೆ ಪತ್ರ
author img

By

Published : Apr 5, 2023, 3:41 PM IST

Updated : Apr 5, 2023, 3:53 PM IST

ಕುಮಾರ ಬಂಗಾರಪ್ಪನವರಿಗೆ ಟಿಕೆಟ್​​ ನೀಡಬೇಡಿ ಎಂದು ಕಾರ್ಯಕರ್ತನಿಂದ ಪ್ರಧಾನಿ‌ ಮೋದಿಗೆ ಪತ್ರ

ಶಿವಮೊಗ್ಗ: ಸೊರಬದ ಹಾಲಿ‌ ಶಾಸಕ ಕುಮಾರ ಬಂಗಾರಪ್ಪನವರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್​​ ‌ನೀಡಬಾರದು‌ ಎಂದು ಸೊರಬದ ಬಿಜೆಪಿ ಪಕ್ಷದ ಕಾರ್ಯಕರ್ತ ಪ್ರಧಾನಮಂತ್ರಿ ನರೇಂದ್ರ‌‌ ಮೋದಿ ಅವರಿಗೆ ಬರೆದಿದ್ದಾರೆ. ಸೊರಬ‌ ತಾಲೂಕು ದ್ವಾರಹಳ್ಳಿಯ‌ ನಿವಾಸಿ, ಬಿಜೆಪಿಯ ಕಾರ್ಯಕರ್ತ ಯುವರಾಜ ವೀರಪ್ಪ ಎಂಬುವವರು ಬರೆದಿದ್ದಾರೆ.

''ನಾನು ಬಿಜೆಪಿಗೆ 19 ವರ್ಷಗಳಿಂದ ಕಾರ್ಯಕರ್ತನಾಗಿದ್ದೇನೆ. ಈ ಬಾರಿ ಹಾಲಿ ಶಾಸಕ ಕುಮಾರ ಬಂಗಾರಪ್ಪನವರಿಗೆ ನೀಡದೆ, ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್​ ನೀಡಬೇಕು. ಶಾಸಕರಾದ ಕುಮಾರ ಬಂಗಾರಪ್ಪನವರು ಆರ್​ಎಸ್​ಎಸ್ ಹಾಗೂ ನಿಷ್ಟಾವಂತ ಕಾರ್ಯಕರ್ತರನ್ನು ಕಡೆಗಣನೆ ಮಾಡುತ್ತಿದ್ದಾರೆ‌. ಕ್ಷೇತ್ರದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇದರಿಂದ ಅವರಿಗೆ ಟಿಕೆಟ್​ ನೀಡಬಾರದು, ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್​​ ನೀಡಬೇಕು’’ ಎಂದು ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ.

ಕಾರ್ಯಕರ್ತನಿಂದ ಪ್ರಧಾನಿ‌ ಮೋದಿಗೆ ಪತ್ರ
ಕಾರ್ಯಕರ್ತನಿಂದ ಪ್ರಧಾನಿ‌ ಮೋದಿಗೆ ಪತ್ರ

ಶಾಸಕ ಕುಮಾರ ಬಂಗಾರಪ್ಪ ಪ್ರತಿಕ್ರಿಯೆ: ಟಿಕೆಟ್​ ಕುರಿತು ಕೋರ್ ಕಮಿಟಿಯಲ್ಲಿ ತೀರ್ಮಾನವಾಗುತ್ತದೆ. ನಮೋ ವೇದಿಕೆಯು ಈಗಲ್ಲ ಹಿಂದಿನಿಂದಲೂ ಇದೆ. ಹಿಂದೆ ಹಾಲಪ್ಪನವರು ಶಾಸಕರಾಗಿದ್ದಾಗ ಸಹ ನಮೋ ವೇದಿಕೆ ಇತ್ತು. ಇದೇ ರೀತಿ ಹಿಂದಿನ ಶಾಸಕರನ್ನು ವಿರೋಧ ಮಾಡುತ್ತಿತ್ತು. ನಮೋ ವೇದಿಕೆ ವಿರೋಧ ಮಾಡಲೆಂದೇ ಇರುವ ವೇದಿಕೆಯಾಗಿದೆ. ಎಲ್ಲಾರನ್ನು ನಿಭಾಯಿಸಿಕೊಂಡು ಹೋಗುವ ಕೆಲಸವನ್ನು ಬಿಜೆಪಿ ಪಕ್ಷ ಮಾಡುತ್ತಿದೆ ಎಂದರು.

ಕೇವಲ ಬಿಜೆಪಿಯವರನ್ನು ಅಷ್ಟೇ ಅಲ್ಲದೆ ವಿರೋಧ ಪಕ್ಷದವರನ್ನು ಸಹ ನಾವು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇವೆ. ಚುನಾವಣಾ ಹಬ್ಬದಲ್ಲಿ ಎಲ್ಲಾರನ್ನು ನಿಭಾಯಿಸಿಕೊಂಡು ಹೋಗಬೇಕಿದೆ. ಅವರೆಲ್ಲಾ ವ್ಯಕ್ತಿಗತವಾಗಿ ಚೆನ್ನಾಗಿಯೇ ಇದ್ದಾರೆ. ಸಭೆ ಸಮಾರಂಭಗಳಿಗೆ ಹೋದಾಗ ಮಾತನಾಡಿಸುತ್ತೆವೆ ಎಂದರು.‌ ಕ್ಷೇತ್ರದಲ್ಲಿ ಅಭಿವೃದ್ದಿ ಆಗಿಲ್ಲ ಅಂತ ಕೇಳಲು ದಾಖಲೆ ಬೇಕು. ಸಾಕಷ್ಟು ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಾಗಿದೆ. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಸಿಎಂ ಬೊಮ್ಮಾಯಿ ಪರ ನಾನು ನಿಲ್ಲುತ್ತೇನೆ, ಆದರೆ ಪಕ್ಷ ಸೇರಲ್ಲ: ಸುದೀಪ್ ಸ್ಪಷ್ಟನೆ

ಚುನಾವಣೆ ಮುಗಿದ ಮೇಲೆ ಮಧು ಕ್ಷೇತ್ರದ ಕಡೆ ಬರಲ್ಲ: ಕುಮಾರ ಬಂಗಾರಪ್ಪ.. ಕಾಂಗ್ರೆಸ್ ಇರೋದೆ ಆರೋಪ‌ ಮಾಡಲು, ಮಧು ಬಂಗಾರಪ್ಪನವರು ಕೋವಿಡ್ ಸಮಯದಲ್ಲಿ ಬರಲಿಲ್ಲ. ಚುನಾವಣೆ ಸಮಯದಲ್ಲಿ ಮಾತ್ರ ಬರುತ್ತಾರೆ. ಚುನಾವಣೆ ಮುಗಿದ‌ ಮೇಲೆ ಕ್ಷೇತ್ರದ ಕಡೆಯೇ ಬರಲ್ಲ. ಇದು ಶೇ.101ರಷ್ಟು ಸತ್ಯ ಎಂದು ಸಹೋದರರ ಮಧು ಬಂಗಾರಪ್ಪ ವಿರುದ್ಧ ಕುಮಾರ ಬಂಗಾರಪ್ಪ ಕಿಡಿಕಾರಿದರು.

ಅರಣ್ಯ ಇಲಾಖೆ ತೆರವು ಕಾರ್ಯಾಚರಣೆ ಕುರಿತು ಪ್ರತಿಕ್ರಿಯಿಸಿಸ ಅವರು, ನನ್ನ ಮೇಲೆ ಆರೋಪ ಮಾಡುವುದು ಹುಂಬತನದ ಪರಮಾವಧಿ, ಭೂಮಿ ಉಳುಮೆ ಮಾಡುವವರು ನಮ್ಮನ್ನು ಬಿಟ್ಟು ಕೋರ್ಟ್​ಗೆ ಹೋಗಿದ್ದರು. ಇದರಿಂದ ಈಗ ಕೋರ್ಟ್ ತೀರ್ಪಿನ ಮೇಲೆ ತೆರವು ಮಾಡಲಾಗಿದೆ. ಇದರಲ್ಲಿ ನಮ್ಮ ಪಾತ್ರವೇನು ಇಲ್ಲ. ಕೋರ್ಟ್ ತೀರ್ಪು ನಾನು ಮಾಡಿದ್ದಲ್ಲ. ನಾನು ನ್ಯಾಯಾಧೀಶರ ಕೈ ಹಿಡಿದು ತೀರ್ಪು ಬರೆಸಲು ಆಗುವುದಿಲ್ಲ. ಭೂಮಿ ಬೇಕಾದವರು ಸುಪ್ರೀಂ ಕೋರ್ಟ್​ಗೆ ಹೋಗಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ: ಈಶ್ವರಪ್ಪ ವಿರುದ್ಧ ಆಯನೂರು ಮಂಜುನಾಥ್​ ಟೀಕಾಪ್ರಹಾರ

Last Updated : Apr 5, 2023, 3:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.