ETV Bharat / state

ಭಾರೀ ಮಳೆಗೆ ಕೊಡಚಾದ್ರಿ-ಗೌರಿಕೆರೆ ಮಾರ್ಗದಲ್ಲಿ ಭೂ ಕುಸಿತ

ಸ್ಥಳೀಯ ಜೀಪ್ ಚಾಲಕರು ಹಾಗೂ ಮಾಲೀಕರ ಸಂಘದಿಂದ ಮಣ್ಣಿನ ತೆರವು ಕಾರ್ಯಾಚರಣೆ ನಡೆಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಭಾರೀ ಮಳೆಗೆ ಕೊಡಚಾದ್ರಿ-ಗೌರಿಕೆರೆ ಮಾರ್ಗದಲ್ಲಿ ಭೂ ಕುಸಿತ
author img

By

Published : Oct 27, 2019, 2:22 AM IST

ಶಿವಮೊಗ್ಗ: ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಕೊಡಚಾದ್ರಿ ಬೆಟ್ಟಕ್ಕೆ ತೆರಳುವ ಗೌರಿಕೆರೆ-ಕೊಡಚಾದ್ರಿ ಮಾರ್ಗ ಮಧ್ಯದಲ್ಲಿ ಭೂ ಕುಸಿತ ಉಂಟಾಗಿದೆ.

ಕುಸಿತದಿಂದ ಕೊಡಚಾದ್ರಿಗೆ ತೆರಳುವ ವಾಹನ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು. ನಂತರ ಸ್ಥಳೀಯ ಜೀಪ್ ಚಾಲಕರು ಹಾಗೂ ಮಾಲೀಕರ ಸಂಘದಿಂದ ಮಣ್ಣಿನ ತೆರವು ಕಾರ್ಯಾಚರಣೆ ನಡೆಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಮತ್ತೆ ಭೂಮಿ ಕುಸಿಯುವ ಆತಂಕ ಉಂಟಾಗಿದ್ದು, ಸಂಬಂಧಪಟ್ಟ ಇಲಾಖೆ ಇತ್ತ ಗಮನ ಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Intro:ಮಳೆಗೆ ಕೊಡಚಾದ್ರಿ-ಗೌರಿಕೆರೆ ಮಾರ್ಗದಲ್ಲಿ ಭೂ ಕುಸಿತ.

ಶಿವಮೊಗ್ಗ: ಕಳೆದ ನಾಲ್ಕೈದು ದಿನಗಳಿಂದ
ಸುರಿಯುತ್ತಿರುವ ಭಾರಿ ಮಳೆಗೆ ಕೊಡಚಾದ್ರಿ ಬೆಟ್ಟಕ್ಕೆ ತೆರಳುವ ಗೌರಿಕೆರೆ-ಕೊಡಚಾದ್ರಿ ಮಾರ್ಗ ಮಧ್ಯದಲ್ಲಿ ಭೂ ಕುಸಿತ ಕಂಡಿದೆ. ಕುಸಿತದಿಂದ ಕೊಡಚಾದ್ರಿಗೆ ತೆರಳುವ ವಾಹನ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು.
Body:ನಂತರ ಸ್ಥಳೀಯ ಜೀಪ್ ಚಾಲಕರು ಹಾಗೂ ಮಾಲೀಕರ ಸಂಘದಿಂದ ಮಣ್ಣಿನ ತೆರವು ಕಾರ್ಯಾಚರಣೆ ನಡೆಸಿ ಕೆಲ ಸಮಯದ ನಂತರ ಸಂಚಾರ ಪ್ರಾರಂಭವಾಗಿದೆ. ಕೊಡಚಾದ್ರಿ ಬೆಟ್ಟ ದಲ್ಲಿ ಮುಂಬರುವ ದಿನಗಳಲ್ಲಿ ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಮತ್ತೆ ಧರೆ ಕುಸಿಯುವ ಆತಂಕ ಮಾಡಿದ್ದು ಸಂಬಂದ ಪಟ್ಟ ಇಲಾಖೆ ಇತ್ತ ಗಮನ ಹರಿಸುವಂತೆ ಸ್ಥಳೀಯರ ಒತ್ತಾಯಿಸಿದ್ದಾರೆ.Conclusion:ಸದ್ಯ ದೀಪಾವಳಿ ರಜೆ ಇದ್ದು ಈ ಭಾಗಕ್ಕೆ ತೆರಳುವ ಪ್ರವಾಸಿಗರು ಎಚ್ಚರಿಕೆಯಿಂದ ಸಾಗುವುದು ಒಳಿತು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.