ETV Bharat / state

ಶಿವಮೊಗ್ಗದಲ್ಲಿ ಅವಧಿಗೂ ಮೊದಲೇ ಕಾಣಿಸಿಕೊಂಡ ಮಂಗನ ಕಾಯಿಲೆ! - ಮಂಗನ ಕಾಯಿಲೆ

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಅವಧಿಗೂ ಮುನ್ನವೇ ಕ್ಯಾಸನೂರು ಫಾರೆಸ್ಟ್ ಡಿಸೀಸ್ ಅಂದರೆ ಮಂಗನ ಕಾಯಿಲೆ ಕಾಣಿಸಿ ಕೊಂಡಿದೆ.

ಅವಧಿಗು ಮೊದಲೇ ಕಾಣಿಸಿಕೊಂಡ ಮಂಗನ ಕಾಯಿಲೆ
author img

By

Published : Sep 28, 2019, 12:02 AM IST

Updated : Sep 28, 2019, 7:00 AM IST

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕು ಮಂಡಗದ್ದೆಯ ತೋಟದಗದ್ದೆಯಲ್ಲಿ ಒಬ್ಬ ವ್ಯಕ್ತಿಗೆ ಮಂಗನ ಕಾಯಿಲೆ ಲಕ್ಷಣಗಳು ಕಾಣಿಸಿಕೊಂಡಿವೆ. ಕಳೆದ ವರ್ಷ ನವೆಂಬರ್​ನಲ್ಲಿ ಕಾಣಿಸಿ ಕೊಂಡಿದ್ದ ಈ ಕಾಯಿಲೆ ಈ ವರ್ಷ ಸೆಪ್ಟೆಂಬರ್​ನಲ್ಲಿಯೇ ಕಾಣಿಸಿ ಕೊಂಡಿದೆ. ಇದರಿಂದ ಜಿಲ್ಲೆಯ ಕಾಡಂಚಿನ ಗ್ರಾಮದ ಜನ ಆತಂಕಕ್ಕೆ ಒಳಗಾಗಿದ್ದಾರೆ.

ಅವಧಿಗು ಮೊದಲೇ ಕಾಣಿಸಿಕೊಂಡ ಮಂಗನ ಕಾಯಿಲೆ

ಆರೋಗ್ಯ ಇಲಾಖೆಯು ಕೆಎಫ್​ಡಿ ತಡೆಗೆ ಲಸಿಕೆ ಹಾಗೂ ಡಿಎಂಪಿ ತೈಲ ನೀಡುತ್ತಿದೆ. ಎಲ್ಲೆಲ್ಲಿ ರೋಗ ಕಾಣಿಸಿಕೊಳ್ಳಬಹುದು ಎಂದು ನಿರ್ಧರಿಸಿ ಅಲ್ಲಿ ಈಗ ಲಸಿಕಾ ಅಭಿಯಾನವನ್ನು ಪ್ರಾರಂಭಿಸಿದೆ. ಈ ಹಿಂದೆ ಚುಚ್ಚುಮದ್ದು ಪಡೆಯಲು ಹಿಂದೇಟು ಹಾಕುತಿದ್ದ ಗ್ರಾಮಸ್ಥರು ಈಗ ಅವರೇ ಅಭಿಯಾನದಲ್ಲಿ ಬಂದು ಚುಚ್ಚು ಮದ್ದು ಹಾಕಿಸಿ ಕೊಳ್ಳುತ್ತಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ದೇವಂಗಿ ಹೋಬಳಿಯ ಮಲ್ಮನೆ ಸುತ್ತಮುತ್ತಲ ಜನರಿಗೆ ಲಸಿಕೆ ಹಾಕಲಾಗುತ್ತಿದೆ. ಜೊತೆಗೆ ಡಿಎಂಪಿ ಆಯಿಲ್ ಸಹ ವಿತರಣೆ ಮಾಡಲಾಗುತ್ತಿದೆ.

ಜಾನುವಾರುಗಳನ್ನು ಮೇಯಿಸಲು, ದರಗು ಸೇರಿದಂತೆ ತೋಟಗಳಿಗೆ ಹೋಗಲೇ ಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಈ ಭಾಗದ ಜನ ಇದ್ದಾರೆ. ಕಾಡಿನ ಮಂಗ ಸತ್ತ ನಂತರ ಉಣುಗುಗಳು ಬೇರೆ ಬೇರೆ ಕಡೆ ಹರಡುತ್ತವೆ. ಈ ವೇಳೆ, ಕಾಡಿಗೆ ಹೋದಾಗ, ಜಾನುವಾರುಗಳಿಗೆ ಸಹ ಉಣುಗು ಹತ್ತುತ್ತವೆ. ಜಾನುವಾರುಗಳೂಂದಿಗೆ ಜನ ಸತತ ಸಂಪರ್ಕದಲ್ಲಿ ಇರುತ್ತಾರೆ. ಇದರಿಂದ ಮನುಷ್ಯರಿಗೆ ಉಣುಗು(ಉಣ್ಣೆ) ಕಚ್ಚಿದರೆ ಕೆಎಫ್​ಡಿ ರೋಗ ಬರುತ್ತದೆ. ಇದರಿಂದ ಕಾಡಿಗೆ ಹೋಗುವವರು ಡಿಎಂಪಿ ತೈಲವನ್ನು ಮೈಗೆ ಸವರಿಕೊಳ್ಳುವುದರಿಂದ ಉಣುಗು ಮೈಗೆ ಹತ್ತುವುದಿಲ್ಲ ಹಾಗೂ ಕಚ್ಚಲು ಆಗುವುದಿಲ್ಲ.

Intro:ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಅವಧಿಗೂ ಮುನ್ನಾವೇ ಕ್ಯಾಸನೂರು ಫಾರೆಸ್ಟ್ ಡಿಸಿಸ್ ಅಥವಾ ಮಂಗನ ಕಾಯಿಲೆ ಕಾಣಿಸಿ ಕೊಂಡಿದೆ. ತೀರ್ಥಹಳ್ಳಿ ತಾಲೂಕು ಮಂಡಗದ್ದೆಯ ತೋಟದಗದ್ದೆಯಲ್ಲಿ ಓರ್ವರಲ್ಲಿ ಕೆಎಫ್ ಡಿ ಕಾಣಿಸಿ ಕೊಂಡಿದೆ. ಕೆಎಫ್ ಡಿ ಯು ಬೇಸಿಗೆಯಲ್ಲಿ ಕಾಣಿಸಿ ಕೊಳ್ಳುತ್ತದೆ. ಕಳೆದ ವರ್ಷ ನವೆಂಬರ್ ನಲ್ಲಿ ಕಾಣಿಸಿ ಕೊಂಡಿತ್ತು. ಈ ವರ್ಷ ಸೆಪ್ಟೆಂಬರ್ ನಲ್ಲಿಯೇ ಕಾಣಿಸಿ ಕೊಂಡಿದೆ. ಇದರಿಂದ ಜಿಲ್ಲೆಯ ಕಾಡಂಚಿನ ಗ್ರಾಮದವರು ಆತಂಕಕ್ಕೆ ಒಳಗಾಗಿದ್ದರು. ಇದರಿಂದ ಆರೋಗ್ಯ ಇಲಾಖೆಯು ಕೆಎಫ್ ಡಿ ತಡೆಗೆ ಲಸಿಕೆ ಹಾಗೂ ಡಿಎಂಪಿ ತೈಲ ನೀಡುತ್ತಿದೆ. ಎಲ್ಲೆಲ್ಲಿ ರೋಗ ಕಾಣಿಸಿಕೊಳ್ಳಬಹುದು ಎಂದು ನಿರ್ಧರಿಸಿ ಅಲ್ಲಿ ಈಗ ಲಸಿಕಾ ಅಭಿಯಾನವನ್ನು ಪ್ರಾರಂಭಿಸಿದೆ. ಹಿಂದೆಲ್ಲಾ ಚುಚ್ಚುಮದ್ದು ಪಡೆಯಲು ಹಿಂದೇಟು ಹಾಕುತ್ತಿದ್ದ ಗ್ರಾಮಸ್ಥರು ಈಗ ಅವರೆ ಅಭಿಯಾನದಲ್ಲಿ ಬಂದು ಚುಚ್ಚು ಮದ್ದು ಹಾಕಿಸಿ ಕೊಳ್ಳುತ್ತಿದ್ದಾರೆ.

Body:ತೀರ್ಥಹಳ್ಳಿ ತಾಲೂಕಿನ ದೇವಂಗಿ ಹೋಬಳಿಯ ಮಲ್ಮನೆ ಸುತ್ತಮುತ್ತ ಲಸಿಕೆಯನ್ನು ಹಾಕಲಾಗುತ್ತಿದೆ. ಜೊತೆಗೆ ಡಿಎಂಪಿ ಆಯಿಲ್ ಅನ್ನು ಸಹ ವಿತರಣೆ ಮಾಡಲಾಗುತ್ತಿದೆ. ಈ ಭಾಗದ ಜನ ಅರಣ್ಯ ಪ್ರದೇಶದೊಂದಿಗೆ ನಿಕಟ ಸಂಪರ್ಕ ಹೊಂದಿರುತ್ತಾರೆ. ಅವರು ಪ್ರತಿನಿತ್ಯ ಅರಣ್ಯಕ್ಕೆ ಹೋಗಬೇಕಾಗುತ್ತದೆ. ತಮ್ಮ ಜಾನುವಾರುಗಳನ್ನು ಮೇಯಿಸಲು, ದರಗು ಸೇರಿದಂತೆ ತೋಟಗಳಿಗೆ ಹೋಗಲೇ ಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಈ ಭಾಗದ ಜನ ಇದ್ದಾರೆ. ಕಾಡಿನ ಮಂಗ ಸತ್ತ ನಂತ್ರ ಉಣುಗುಗಳು ಬೇರೆ ಬೇರೆ ಕಡೆ ಹರಡುತ್ತವೆ. ಈ ವೇಳೆ ಕಾಡಿಗೆ ಹೋದಾಗ, ಜಾನುವಾರುಗಳಿಗೆ ಸಹ ಉಣುಗು ಹತ್ತುತ್ತವೆ. ಜಾನುವಾರುಗಳೂಂದಿಗೆ ಜನ ಸತತ ಸಂಪರ್ಕದಲ್ಲಿ ಇರುತ್ತಾರೆ. ಇದರಿಂದ ಮನುಷ್ಯರಿಗೆ ಉಣುಗು(ಉಣ್ಣೆ) ಕಚ್ಚಿದರೆ ಅವರಿಗೆ ಕೆಎಫ್ ಡಿ ರೋಗ ಬರುತ್ತದೆ. ಇದರಿಂದ ಕಾಡಿಗೆ ಹೋಗುವವರು ಡಿಎಂಪಿ ತೈಲವನ್ನು ಮೈಗೆ ಸವರಿಕೊಳ್ಳುವುದರಿಂದ ಉಣುಗು ಮೈಗೆ ಹತ್ತುವುದಿಲ್ಲ ಹಾಗೂ ಕಚ್ಚಲು ಆಗುವುದಿಲ್ಲ.

Conclusion:ಕೆಎಫ್ ಡಿ ಚುಚ್ಚು ಮದ್ದು ಹಾಕಿಸಿ ಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದರು. ರೋಗ ಉಲ್ಬಣ ಗೊಂಡಾಗ ಗಾಬರಿಯಿಂದ ಇಂಜೆಕ್ಷನ್ ಹಾಕಿಸಿ ಕೊಳ್ಳುತ್ತಿದ್ದರು.ಈಗ ಆರೋಗ್ಯ ಇಲಾಖೆಯು ಮುಂಜಾಗೃತ ಕ್ರಮವಾಗಿ ಈಗಿನಿಂದಲೇ ಚುಚ್ಚುಮದ್ದು ಹಾಕುತ್ತಿದೆ.‌ಹಿಂದೆ ಇಂಜೆಕ್ಷನ್ ಹಾಕಿಸಿ ಕೊಂಡಾಗ ಕೆಲವರಿಗೆ ಜ್ವರ ಕಾಣಿಸಿ ಕೊಳ್ಳುತ್ತಿತ್ತು. ಈಗ ಲಸಿಕೆಯಲ್ಲಿ ಸುಧಾರಣೆ ತರಲಾಗಿದೆ. ಅಲ್ಲದೆ ಕೇರಳ ಮಾದರಿಯಲ್ಲಿ ಲಸಿಕೆ ನೀಡಲಾಗುತ್ತಿದೆ. ಕೇರಳದಲ್ಲಿ ಇನ್ಸ್ ಲಿನ್ ಸಿರೆಂಜ್ ಮೂಲಕ ಹೆಚ್ಚು ನೋವಾಗದಂತೆ ನೀಡಲಾಗುತ್ತದೆ.ಅದರಂತೆ ಈಗ ಜಿಲ್ಲೆಯಲ್ಲಿ ಲಸಿಕೆ ನೀಡಲಾಗುತ್ತಿದೆ. ಇದರಿಂ ಜನ ಹೆಚ್ಚಾಗಿ ಲಸಿಕೆ ಹಾಕಿಸಿ ಕೊಳ್ಳುತ್ತಿದ್ದಾರೆ. ಈಗಾಗಲೇ ಆರೋಗ್ಯ ಇಲಾಖೆಯಲ್ಲಿ ಲಕ್ಷಕ್ಕೂ‌ಅಧಿಕವಾಗಿ ಇಂಜೆಕ್ಷನ್ ದಾಸ್ತಾನು ಇದೆ. ಅವಶ್ಯಕತೆಗೆ ತಕ್ಕಂತೆ ಸರ್ಕಾರ ಲಸಿಕೆ ಸರಬರಾಜು ಮಾಡುತ್ತಿದೆ. ಒಂದು ಲಸಿಕೆ ಹಾಕಿಸಿದ ಸರಿಯಾಗಿ 30 ದಿನಕ್ಕೆ ಎರಡನೇ ಲಸಿಕೆ ಹಾಕಿಸಿ ಕೊಳ್ಳಬೇಕು.ಇದರಿಂದ ಎರಡನೇ ಲಸಿಕೆ ಕೆಲ್ಸ ಪ್ರಾರಂಭವಾಗುತ್ತದೆ. ನಂತ್ರ ನೀಡುವ ಲಸಿಕೆಗಳು ಡೋಸ್ ಗಳ ರೀತಿ ಕೆಲ್ಸ ಮಾಡುತ್ತದೆ. ಅದರಂತೆ ಮುಂದಿನ 90 ದಿನಕ್ಕೆ ಮೂರನೇ ಲಸಿಕೆ ಹಾಕಿಸಿ ಕೊಳ್ಳಬೇಕು. ಇದರಿಂದ ಲಸಿಕೆ ಹಾಕಿಸಿ ಕೊಂಡ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ನಂತ್ರ ವರ್ಷಕ್ಕೊಂದು ಲಸಿಕೆ ನೀಡಲಾಗುತ್ತದೆ. ಒಟ್ಟು ಒಬ್ಬ ವ್ಯಕ್ತಿಗೆ ಐದು ಲಸಿಕೆ ಹಾಕಿದಾಗ ಆತನಿಗೆ ರೋಗ ಹರಡುವುದಿಲ್ಲ ಎನ್ನಲಾಗುತ್ತದೆ. ಈಗ ಆಶಾ ಕಾರ್ಯಕರ್ತೆಯರು, ಪೊಸ್ಟರ್ ಹಾಕಿದ್ರೆ ಸಾಕು ಜನ ಬಂದು ಲಸಿಕೆ ಹಾಕಿಸಿ ಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಸರ್ವೆಕ್ಷಾಧಿಕಾರಿ ಡಾ.ಶಂಕರಪ್ಪನವರು, ಹಿಂದೆಲ್ಲಾ ಲಸಿಕೆ ಹಾಕಿಸಿ ಕೊಳ್ಳಲು ಹೆದರಿಕೆ ಆಗುತ್ತಿತ್ತು. ಈಗ ಆ ಭಯವಿಲ್ಲ ಎನ್ನುತ್ತಾರೆ ಗ್ರಾಮಸ್ಥರು....

ಬೈಟ್: ಡಾ.ಶಂಕರಪ್ಪ. ಜಿಲ್ಲಾ ಸರ್ವೆಕ್ಷಾಧಿಕಾರಿ.ಶಿವಮೊಗ್ಗ.

ಬೈಟ್: ಬೇತನ .ಗ್ರಾಮಸ್ಥೆ.

ಬೈಟ್: ನಾಗಭೂಷಣ್. ಲಸಿಕೆ ಹಾಕಿಸಿ ಕೊಂಡವರು.

ಕಿರಣ್ ಕುಮಾರ್. ಶಿವಮೊಗ್ಗ.
Last Updated : Sep 28, 2019, 7:00 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.