ETV Bharat / state

ಕುವೆಂಪು ವಿವಿಯ ವೆಬ್​ಸೈಟ್ ಹ್ಯಾಕ್: ಸಿಇಎನ್ ಠಾಣೆಯಲ್ಲಿ ದೂರು ದಾಖಲು - ವಿವಿಯ ಟೆಕ್ನಿಕಲ್ ಟೀಂ

Kuvempu University website hack: ಸದ್ಯ ವೆಬ್​ಸೈಟ್​ ಸೇವೆ ನಿಲ್ಲಿಸಿರುವ ವಿವಿಯ ಟೆಕ್ನಿಕಲ್​​​ ಟೀಂ, ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

Kuvempu University website hacked by Palestine supporters
ಪ್ಯಾಲೆಸ್ಟೈನ್ ಬೆಂಬಲಿಗರಿಂದ ಕುವೆಂಪು ವಿವಿಯ ವೆಬ್​ಸೈಟ್ ಹ್ಯಾಕ್
author img

By ETV Bharat Karnataka Team

Published : Dec 21, 2023, 1:10 PM IST

ಶಿವಮೊಗ್ಗ: ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಕುವೆಂಪು ವಿಶ್ವವಿದ್ಯಾಲಯದ ಅಧಿಕೃತ ವೆಬ್​ಸೈಟ್ ಹ್ಯಾಕ್ ಮಾಡಲಾಗಿದೆ. ಪ್ಯಾಲಿಸ್ಟೈನ್ ಬೆಂಬಲಿಗರು ಎಂದು ಹೇಳಿಕೊಂಡು ಹ್ಯಾಕ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ವೆಬ್​​ಸೈಟ್ ಅನ್ನು ನಿನ್ನೆ ರಾತ್ರಿ ಕಲೀಮಲ್ಯಾಂಗ್ ಬ್ಲ್ಯಾಕ್ ಹ್ಯಾಟ್ ಟೀಂ ಹ್ಯಾಕ್ ಮಾಡಿದೆ. ಸೇವ್ ಪ್ಯಾಲೆಸ್ಟೈನ್- ಇಸ್ರೇಲ್ ಡಾಗ್ ಎಂದು ವೆಬ್​ಸೈಟ್​ನಲ್ಲಿ ಉಲ್ಲೇಖ ಮಾಡಲಾಗಿದೆ. ವೆಬ್​ಸೈಟ್ ಹ್ಯಾಕ್ ಮಾಡಿರುವ ಕುರಿತು ವಿವಿಯ ಒಂದು ಟೀಂ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ವಿಶ್ವವಿದ್ಯಾಲಯದ ಅಧಿಕೃತ ವೆಬ್​ಸೈಟ್ ಹ್ಯಾಕ್ ಆಗಿರುವುದರಿಂದ ವಿವಿಯ ಟೆಕ್ನಿಕಲ್ ಟೀಂ ವೆಬ್​ಸೈಟ್ ಸೇವೆಯನ್ನು ಸ್ಥಗಿತಗೊಳಿಸಿದೆ. ಇತ್ತೀಚೆಗಷ್ಟೆ ವಿವಿಯ ವಿವಿಧ ಕೋರ್ಸ್​ಗಳ ದಾಖಲಾತಿ ಪ್ರಕ್ರಿಯೆ ಇದೇ ವೆಬ್​ಸೈಟ್ ಮೂಲಕ ನಡೆದಿತ್ತು. ಇದು ಕುವೆಂಪು ವಿವಿಯ ಓಪನ್ ಬ್ಲಾಕ್ ಆಗಿದೆ. ಈ ಕುರಿತು ಈ ಟಿವಿ ಭಾರತ್ ಕುವೆಂಪು ವಿವಿಯ ಕುಲಪತಿಯನ್ನು ದೂರವಾಣಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದ್ದು, ಅವರು ಕರೆಗೆ ಸಿಕ್ಕಿಲ್ಲ

ಇದನ್ನೂ ಓದಿ: ನಟಿ ತಾರಾ ಫೇಸ್ ಬುಕ್​ ಖಾತೆ ಹ್ಯಾಕ್: ಸೈಬರ್​ ಠಾಣೆಯಲ್ಲಿ ಎಫ್​ಐಆರ್​ ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.