ETV Bharat / state

ಹತ್ತನೇ ತರಗತಿಯಲ್ಲಿ ಫೇಲ್ ಆದಾಗ ಅಮ್ಮ ಕಪಾಳಕ್ಕೆ ಬಾರಿಸಿದ್ದರು: ಕೆ.ಎಸ್​.ಈಶ್ವರಪ್ಪ

author img

By

Published : Sep 18, 2019, 4:07 AM IST

ನಾನು ಎಸ್​ಎಸ್​ಎಲ್​ಸಿ ಫೇಲ್ ಆದಾಗ ನನ್ನ ಅಮ್ಮ ನನಗೆ ಕಪಾಳಕ್ಕೆ ಹೊಡೆದಿದ್ದರು. ಅಮ್ಮನ ಬುದ್ಧಿವಾದದಿಂದ ಮತ್ತೆ ಶಾಲೆಗೆ ತೆರಳಿದ್ದೆ. ಆ ಘಟನೆ ನನ್ನ ಬದುಕಿನಲ್ಲಿ ಸಾಕಷ್ಟು ಪರಿಣಾಮ ಬೀರಿದೆ ಎಂದು ಸಚಿವ ಈಶ್ವರಪ್ಪ ಹಳೆದ ದಿನಗಳನ್ನು ಮೆಲುಕು ಹಾಕಿದ್ದಾರೆ.

ಸಭೆ ಮುಗಿಸಿ ಹೊರಬಂದ ಸಚಿವ ಈಶ್ವರಪ್ಪರನ್ನು ತಡೆದ ವಿದ್ಯಾರ್ಥಿಗಳು

ಶಿವಮೊಗ್ಗ: ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ಮುಗಿಸಿ ಹೊರಬಂದ ಸಚಿವ ಈಶ್ವರಪ್ಪನವರಿಗೆ ಹಾಸ್ಟೆಲ್ ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಬಗೆಹರಿಸುವಂತೆ ಕೇಳಿದಾಗ ಸಚಿವ ಕೆ.ಎಸ್. ಈಶ್ವರಪ್ಪ ತಮ್ಮ ಬಾಲ್ಯವನ್ನು ನೆನಪಿಸಿಕೊಂಡರು.

ಜಿಲ್ಲಾ ಪಂಚಾಯತ್ ನ ಸಭಾಂಗಣದಲ್ಲಿ ಸಭೆ ಮುಗಿಸಿ ಹೊರಬಂದ ಸಚಿವರಿಗೆ ಎದುರಾದ ಹಾಸ್ಟೆಲ್​ ವಿದ್ಯಾರ್ಥಿಗಳು, ಹಾಸ್ಟೆಲ್ ಸ್ಥಳಾಂತರ ಬಗ್ಗೆ ವಿವರಣೆ ಕೇಳಿದ್ದಾರೆ.

ಪ್ರಸ್ತುತ ಇದ್ದ ಹಾಸ್ಟೆಲ್ ಕಟ್ಟಡ ಶಿಥಿಲಗೊಂಡಿದ್ದು, ಈ ಕಾರಣದಿಂದ ಅಧಿಕಾರಿಗಳು ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು ಎಲ್ಲ ವಿದ್ಯಾರ್ಥಿಗಳು ಸಹಕರಿಸುವಂತೆ ಸಚಿವ ಕೆ.ಎಸ್​.ಈಶ್ವರಪ್ಪ ಕೇಳಿಕೊಂಡಿದ್ದಾರೆ.

ಪೋಷಕರು ನಂಬಿಕೆ ಇರಿಸಿ ಹಾಸ್ಟೆಲ್​ನಲ್ಲಿ ಬಿಟ್ಟಿದ್ದು ಹೀಗಾಗಿ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ಇದೆ. ಕೆಲ ದಿನಗಳವರೆಗೆ ವಿದ್ಯಾರ್ಥಿಗಳು ಹೊಂದಿಕೊಳ್ಳುವಂತೆ ಹೇಳಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವ ಭರವಸೆಯನ್ನು ಈಶ್ವರಪ್ಪ ನೀಡಿದ್ದಾರೆ.

Intro:ಶಿವಮೊಗ್ಗ,
ಫಾರ್ಮೆಟ್: ಎವಿಬಿ.
ಸ್ಲಗ್: ನಮ್ಮಮ್ಮ ನನಗೂ ಕಪಾಳಕ್ಕೆ ಹೊಡೆದಿದ್ದರು ಎಂದ ಸಚಿವ ಕೆ.ಎಸ್.ಈಶ್ವರಪ್ಪ
ಆ್ಯಂಕರ್...................
ನಾನು ಎಸ್ಎಸ್ಎಲ್ಸಿ ಫೇಲ್ ಆದಾಗ ನನ್ನ ಅಮ್ಮ ನನಗೆ ಕಪಾಳಕ್ಕೆ ಹೊಡೆದಿದ್ದರು ಎಂದು ಸಚಿವ ಕೆ.ಎಸ್ .ಈಶ್ವರಪ್ಪ ಹಾಸ್ಟೆಲ್ ಸಮಸ್ಯೆ ಕುರಿತು ಮನವಿ ನೀಡಲು ಬಂದ ವಿದ್ಯಾರ್ಥಿಗಳಿಗೆ ಬುದ್ದಿಮಾತು ಹೇಳಿದ್ದಾರೆ. ಜಿಲ್ಲಾ ಪಂಚಾಯತ್ ನ ಸಭಾಂಗಣದಲ್ಲಿ ಸಭೆ ಮುಗಿಸಿ ಹೊರಬಂದ ಸಚಿವ ಈಶ್ವರಪ್ಪ ನವರಿಗೆ ಹಾಸ್ಟೆಲ್ ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಬಗೆಹರಿಸಿ ಕೊಡುವಂತೆ ಹಿಂದೆಯೇ ಪ್ರತಿಭಟನೆ ಮಾಡಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಈಶ್ವರಪ್ಪ, ಪ್ರಸ್ತುತ ನೀವುಗಳು ಇದ್ದ ಹಾಸ್ಟೆಲ್ ಕಟ್ಟಡ ಶಿಥಿಲಗೊಂಡಿದೆ. ಅದಕ್ಕಾಗಿ ಅಧಿಕಾರಿಗಳು ಹೊಸಕಟ್ಟಡಕ್ಕೆ ಕಳುಹಿಸಿದ್ದಾರೆ. ಇದೇ ಕಟ್ಟಡದಲ್ಲಿ ನೀವು ಇದ್ದರೇ ಯಾವುದಾದರೂ ಅವಘಡ ಸಂಭವಿಸಿದರೇ ಯಾರು ಜವಾಬ್ದಾರಿ. ಆಗ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಈ ಹಿಂದೆ ನಾನು ಎಸ್ಎಸ್ಎಲ್ಸಿ ಫೇಲ್ ಅದಾಗ ನನಗೂ ನಮ್ಮಮ್ಮ ಕಪಾಳಕ್ಕೆ ಹೊಡೆದು ಬುದ್ದಿವಾದ ಹೇಳಿ ಶಾಲೆಗೆ ಕಳುಹಿಸಿದ್ದರು. ಆ ಕಾರಣದಿಂದಲೇ ನಾನೂ ಇಂದು ಈ ಸ್ಥಾನದಲ್ಲಿದ್ದೇನೆ. ನಿಮ್ಮ ಬಗ್ಗೆ ನಿಮ್ಮ ಪೋಷಕರು ಅತೀವ ನಂಬಿಕೆ ಹೊಂದಿ ಹಾಸ್ಟೆಲ್ ನಲ್ಲಿ ಬಿಟ್ಟಿದ್ದಾರೆ. ಜೊತೆಗೆ ಅಧಿಕಾರಿಗಳು ಸಹ ನಿಮ್ಮ ಮೇಲಿನ‌ ಕಾಳಜಿಗೆ ನಿರ್ಧಾರ ಕೈಗೊಂಡಿದ್ದಾರೆ. ಕೆಲದಿನಗಳ ಮಟ್ಟಿಗೆ ನೀವು ಅದೇ ಹಾಸ್ಟೇಲ್ ನಲ್ಲಿಯೇ ಇರಿ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುದಾಗಿ ಸಚಿವರು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.

ಬೈಟ್ : ಕೆ.ಎಸ್. ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.