ETV Bharat / state

ಸಹ್ಯಾದ್ರಿ ಕಾಲೇಜು ಹಳೇ ವಿದ್ಯಾರ್ಥಿಗಳ ಕ್ಯಾಂಪಸ್ ಉಳಿಸಿ ಅಭಿಯಾನಕ್ಕೆ ನಿರ್ದೇಶಕ ಕವಿರಾಜ್ ಬೆಂಬಲ

ಖೇಲೋ ಇಂಡಿಯಾ ಯೋಜನೆಯಡಿ ನಗರದ ಸಹ್ಯಾದ್ರಿ ಕಾಲೇಜಿನ ಆವರಣವನ್ನು ಪರಭಾರೆ ಮಾಡುತ್ತಿರುವುದನ್ನು ವಿರೋಧಿಸಿ ಕಾಲೇಜಿನ ಹಳೆ ವಿದ್ಯಾರ್ಥಿಗಳು ಮಾಡುತ್ತಿರುವ ಅಭಿಯಾನಕ್ಕೆ ಸಾಹಿತಿ, ಚಲನಚಿತ್ರ ನಿರ್ದೇಶಕ ಕವಿರಾಜ್ ಬೆಂಬಲ ಸೂಚಿಸಿದ್ದಾರೆ.

author img

By

Published : May 4, 2021, 8:04 PM IST

Updated : May 4, 2021, 9:18 PM IST

Shimogga
Shimogga

ಶಿವಮೊಗ್ಗ: ಖೇಲೋ ಇಂಡಿಯಾ ಯೋಜನೆಯಡಿ ನಗರದ ಸಹ್ಯಾದ್ರಿ ಕಾಲೇಜಿನ ಆವರಣವನ್ನು ಪರಭಾರೆ ಮಾಡುತ್ತಿರುವುದನ್ನು ವಿರೋಧಿಸಿ ಕಾಲೇಜಿನ ಹಳೆ ವಿದ್ಯಾರ್ಥಿಗಳು ಮಾಡುತ್ತಿರುವ ಕ್ಯಾಂಪಸ್ ಉಳಿಸಿ ಅಭಿಯಾನಕ್ಕೆ ಸಾಹಿತಿ, ಚಲನಚಿತ್ರ ನಿರ್ದೇಶಕ ಕವಿರಾಜ್ ಬೆಂಬಲ ಸೂಚಿಸಿದ್ದಾರೆ.

ಖೇಲೋ ಇಂಡಿಯಾ ಯೋಜನೆಯಡಿ ನಗರದ ಇತಿಹಾಸವುಳ್ಳ ಸಹ್ಯಾದ್ರಿ ಕಾಲೇಜಿನ ಆವರಣದ 18.4 ಎಕರೆ ಜಾಗವನ್ನು ಜಿಲ್ಲಾಡಳಿತಕ್ಕೆ ಹಾಗೂ ಖೇಲೋ ಇಂಡಿಯಾ ತರಬೇತಿ ಕೇಂದ್ರಕ್ಕೆ ಪರಭಾರೆ ಮಾಡುತ್ತಿರುವುದನ್ನು ವಿರೋಧಿಸಿ, ಕಾಲೇಜಿನ ಹಳೆ ವಿದ್ಯಾರ್ಥಿಗಳು ಸಹ್ಯಾದ್ರಿ ಕ್ಯಾಂಪಸ್ ಉಳಿಸಿ ಎಂಬ ಹ್ಯಾಸ್ ಟ್ಯಾಗ್ ಮೂಲಕ ಅಭಿಯಾನ ಪ್ರಾರಂಭಿಸಿದ್ದಾರೆ‌. ಇದೇ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಸಾಹಿತಿಯಾಗಿರುವ ಕವಿರಾಜ್ ಅಭಿಯಾನಕ್ಕೆ ಬೆಂಬಲ ಸೂಚಿಸಿ ವಿಡಿಯೋ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸಹ್ಯಾದ್ರಿ ಕಾಲೇಜು ಹಳೇ ವಿದ್ಯಾರ್ಥಿಗಳ ಕ್ಯಾಂಪಸ್ ಉಳಿಸಿ ಅಭಿಯಾನಕ್ಕೆ ನಿರ್ದೇಶಕ ಕವಿರಾಜ್ ಬೆಂಬಲ

ಖೇಲೋ ಇಂಡಿಯಾಗೆ ಸಹ್ಯಾದ್ರಿ ಕ್ಯಾಂಪಸ್ ಜಾಗವನ್ನು ಬಿಟ್ಟುಕೊಡುತ್ತಿರುವುದು ಬೇಸರ ಎನಿಸಿದೆ. ಶಿಕ್ಷಣಕ್ಕೆ ಪೂರಕವಾದ ಚಟುವಟಿಕೆಗೆ ಹೊರತುಪಡಿಸಿ ಬೇರೆಯಾವ ಕಾರಣಕ್ಕೂ ಕ್ಯಾಂಪಸ್ ಅನ್ನು ಬಳಸಿಕೊಳ್ಳಬಾರದು. ಮಲೆನಾಡಿನ ಅಶ್ಮಿತೆ, ಜ್ಞಾನ ಕೇಂದ್ರ ಸಹ್ಯಾದ್ರಿ ಕಾಲೇಜು. ಹಾಗಾಗಿ ಈ ಕಾಲೇಜ್ ಅನ್ನು ಉಳಿಸಬೇಕೆ ಹೊರತು ವಿರೂಪಗೊಳಿಸುವುದಲ್ಲ. ಇದಕ್ಕೆ ನಮ್ಮ ವಿರೋಧವಿದೆ ಎಂದು ಸಹ್ಯಾದ್ರಿ ಕ್ಯಾಂಪಸ್ ಉಳಿಸಿ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.

Last Updated : May 4, 2021, 9:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.