ಶಿವಮೊಗ್ಗ: ನಗರದ ಮಲ್ಲೇಶ್ವರಂ ಬಡಾವಣೆಯಲ್ಲಿನ ನೂತನ ಯೋಗ ಮಂದಿರವನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದರು.
ತಮ್ಮ ನಿವಾಸದ ಬಳಿ ನೂತನವಾಗಿ ನಿರ್ಮಿಸಿರುವ ಯೋಗ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಯೋಗ ಕೇಂದ್ರ ಯೋಗ ಸೇರಿದಂತೆ ಇತರೆ ಧಾರ್ಮಿಕ ಚಟುವಟಿಕೆಗಳ ತಾಣವಾಗಲಿ ಎಂದರು.
ಯೋಗ ಮಾಡುವುದರಿಂದ ವೈದ್ಯರಿಂದ ದೂರವಿರಬಹುದು. ಯೋಗದಿಂದ ಉತ್ತಮ ಆರೋಗ್ಯ ಪಡೆಯುವುದರ ಜೊತೆಗೆ ಉತ್ತಮ ಮಾನಸಿಕ ಸಮತೋಲನ ಪಡೆಯಬಹುದು ಎಂದರು.
ಯೋಗ ಮಂದಿರದಲ್ಲಿ ಬೆಳಗ್ಗಯಿಂದ ರಾತ್ರಿಯವರೆಗೆ ಯೋಗದ ಜೊತೆ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿ ಎಂದು ಹಾರೈಸಿದರು. ಈ ವೇಳೆ ಅವರ ಪತ್ನಿ ಜಯಲಕ್ಷ್ಮಿ ಸೇರಿ ಇತರರು ಇದ್ದರು.