ETV Bharat / state

ಶಿವಮೊಗ್ಗಕ್ಕೆ ಈಶ್ವರಪ್ಪ ಕೊಡುಗೆ ಏನು ಎಂಬುದನ್ನು ತಿಳಿಸಬೇಕು: ಕೆ ಬಿ ಪ್ರಸನ್ನ ಕುಮಾರ್ - ಶಿವಮೊಗ್ಗ ನಗರಕ್ಕೆ ಈಶ್ವರಪ್ಪ ಕೊಡುಗೆ ಕುರಿತು ಕೆ ಬಿ ಪ್ರಸನ್ನ ಕುಮಾರ್ ಹೇಳಿಕೆ

ಕೆ ಎಸ್​ ಈಶ್ವರಪ್ಪ ಅವರು ಅವರು ರಾಜಕೀಯ ಜೀವನದಲ್ಲಿ ಮಾಡಿರುವ ಸಾಧನೆ ಏನಂದ್ರೆ ಬಿ.ಹೆಚ್ ರೋಡಿನ ಇಕ್ಕೆಲಗಳಲ್ಲಿ ಕಣ್ಣಿಗೆ ಕಾಣುವಂತೆ ಮಾಡಿರುವ ಆಸ್ತಿ. ಧರ್ಮದ ಹೆಸರಿನಲ್ಲಿ ರಾಜಕೀಯ ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಶಾಸಕ ಕೆ. ಬಿ. ಪ್ರಸನ್ನಕುಮಾರ್ ವಾಗ್ದಾಳಿ ನಡೆಸಿದರು.

ಮಾಜಿ ಶಾಸಕ ಕೆ. ಬಿ. ಪ್ರಸನ್ನಕುಮಾರ್
ಮಾಜಿ ಶಾಸಕ ಕೆ. ಬಿ. ಪ್ರಸನ್ನಕುಮಾರ್
author img

By

Published : Jun 1, 2022, 8:32 PM IST

ಶಿವಮೊಗ್ಗ: ಸ್ಮಾರ್ಟ್ ಸಿಟಿ ಯೋಜನೆ ಭ್ರಷ್ಟಾಚಾರಕ್ಕೆ ಬುನಾದಿ ಹಾಕಿದ್ದು, ಇದರ ರೂವಾರಿ ಎನಿಸಿಕೊಂಡಿರುವ ಶಾಸಕ, ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಅವರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಉಪಮುಖ್ಯಮಂತ್ರಿ, ಸಚಿವ, ಪರಿಷತ್ ಸದಸ್ಯರಾಗಿದ್ದ ಅವರು ನಗರಕ್ಕೆ ಕೊಟ್ಟಿರುವ ಕೊಡುಗೆಯಾದರೂ ಏನು? ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಶಾಸಕ ಕೆ. ಬಿ. ಪ್ರಸನ್ನಕುಮಾರ್ ಪ್ರಶ್ನಿಸಿದರು.

ಮಾಜಿ ಶಾಸಕ ಕೆ. ಬಿ ಪ್ರಸನ್ನಕುಮಾರ್ ಮಾತನಾಡಿದರು

ನಗರದಲ್ಲಿ ಬುಧವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆ ತುಂಬಾ ಆಶಯದೊಂದಿಗೆ ಜಾರಿಯಾಗಿತ್ತು. ಇದು ಜಾರಿಯಾಗುವಾಗ ನಾವು ಇಡೀ ಶಿವಮೊಗ್ಗ ನಗರದ ಎಲ್ಲಾ ವಾರ್ಡ್‌ಗಳಲ್ಲಿ ನಾಗರಿಕ ಸಮಿತಿಗಳನ್ನು ರಚಿಸಿ ಸಮಿತಿಗಳು ಕೊಟ್ಟ ಸಲಹೆಗಳನ್ನು ಪಡೆದು ಸ್ಮಾರ್ಟ್ ಸಿಟಿ ಯೋಜನೆ ಬರಮಾಡಿಕೊಂಡಿದ್ದೆವು. ಆದರೆ, ನಮ್ಮ ಆಶಯಗಳಿಗೆ ಇಂದು ಧಕ್ಕೆಯಾಗಿದ್ದು, ಸ್ಮಾರ್ಟ್ ಸಿಟಿ ಯೋಜನೆಯೇ ದಿಕ್ಕು ತಪ್ಪುತ್ತಿದೆ. ಭ್ರಷ್ಟಾಚಾರಕ್ಕೆ ನಾಂದಿಯಾಗಿದೆ. ಕಾಮಗಾರಿಗಳೆಲ್ಲ ಅವೈಜ್ಞಾನಿಕವಾಗಿವೆ. ಶಾಸಕರು ಜವಾಬ್ದಾರಿ ಮರೆತಿದ್ದಾರೆ. ಕಾಲ ಇನ್ನೂ ಮಿಂಚಿಲ್ಲ. ಅವರು ಮಾಡಿದ ತಪ್ಪುಗಳನ್ನು ಇನ್ನಾದರೂ ತಿದ್ದಿಕೊಳ್ಳಲಿ ಎಂದು ಹೇಳಿದರು.

ಬಿ. ಹೆಚ್ ರೋಡಿನ ಇಕ್ಕೆಲಗಳಲ್ಲಿ ಆಸ್ತಿ ಮಾಡಿದ್ದೇ ಈಶ್ವರಪ್ಪ ಅವರ ಸಾಧನೆ.. ತಮ್ಮ ರಾಜಕೀಯ ಜೀವನದಲ್ಲಿ ಇವರು ಮಾಡಿರುವ ಸಾಧನೆ ಏನಂದ್ರೆ ಬಿ.ಹೆಚ್ ರೋಡಿನ ಇಕ್ಕೆಲಗಳಲ್ಲಿ ಕಣ್ಣಿಗೆ ಕಾಣುವಂತೆ ಮಾಡಿರುವ ಆಸ್ತಿ. ಧರ್ಮದ ಹೆಸರಿನಲ್ಲಿ ರಾಜಕೀಯ. ಇವರು ಶಿವಮೊಗ್ಗ ನಗರವನ್ನು ಕುಖ್ಯಾತಿಗೊಳಿಸುವ ಮೂಲಕ ರಾಜ್ಯದಲ್ಲಿ ನಗರವನ್ನು ಅತೀ ಸೂಕ್ಷ್ಮ ಪ್ರದೇಶದ ಪಟ್ಟಿಯಲ್ಲಿ ಸೇರಿಸಿರುವುದೇ ಈಶ್ವರಪ್ಪರ ಸಾಧನೆಯಾಗಿದೆ ಎಂದು ಟೀಕಿಸಿದರು.

ಈಗ ಶಿವಮೊಗ್ಗ ನಗರದಲ್ಲಿ ಬಿಜೆಪಿಯಿಂದ ಮುಂದೆ ಈಶ್ವರಪ್ಪನರಿಗೆ ಟಿಕೆಟ್ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಅಪವಾದಗಳಿಂದ ಈಶ್ವರಪ್ಪ ಹೊರಬರಬೇಕು ಅಂದ್ರೆ ಇರುವ ಆರು ತಿಂಗಳಲ್ಲಾದ್ರೂ ಕಳಂಕದಿಂದ ಹೊರಬರಲಿ. ಮುಂದೆ ಇವರು ಶಾಸಕರಾಗುವ ಅವಕಾಶದಿಂದ ವಂಚಿತರಾದ್ರೆ, ಕಳಂಕಗಳು ಅವರೊಂದಿಗೆ ಹಾಗೆಯೇ ಉಳಿಯಲಿವೆ ಎಂದು ಪ್ರಸನ್ನ ಕುಮಾರ್ ವಾಗ್ದಾಳಿ ನಡೆಸಿದರು.

ಮುಂದಿನ ಚುನಾವಣೆಯಲ್ಲಿ ಈಶ್ವರಪ್ಪನವರೇ ಮುಖ್ಯಮಂತ್ರಿಯಾಗಲಿ. ನಾನು ಶುಭ ಹಾರೈಸುತ್ತೇನೆ. ಆದರೆ ಆಂಜನೇಯ ಸ್ವಾಮಿ ದೇವಸ್ಥಾನ ಪ್ರಸಾದ ಭವನ ಕೆಡವಿದ್ದು, ವರ್ಷಕ್ಕೊಂದು ಹೆಣ ಉರುಳಿಸಿದ್ದು, ಆಚಾರ್ಯತ್ರಯರ ಭವನ ಉದ್ಘಾಟಿಸದೇ ಇರುವಂತಹ ಅಪಖ್ಯಾತಿಗಳಿಂದ ಅವರು ಮುಕ್ತರಾಗಿ ಹೊರಬರಲಿ ಎಂದರು.

ಓದಿ: ಮಳಲಿ ಮಸೀದಿ ವಿವಾದ: ವಿಹೆಚ್​ಪಿ ಅರ್ಜಿ ವಜಾಕ್ಕೆ ಸಲ್ಲಿಸಿದ ಅರ್ಜಿ ವಿಚಾರಣೆ ಜೂ. 6 ಕ್ಕೆ ಮುಂದೂಡಿಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.