ಶಿವಮೊಗ್ಗ : ಕೋವಿಡ್ ಎರಡನೇ ಲಾಕ್‌ಡೌನ್‌ನಿಂದ ಬಂದ್ ಆಗಿದ್ದ ಜಿಲ್ಲೆಯ ಪ್ರವಾಸಿ ತಾಣಗಳು ಇಂದಿನಿಂದ ಪ್ರವಾಸಿಗರ ಎಂಟ್ರಿಗೆ ಅವಕಾಶ ಕೊಟ್ಟಿವೆ. ಜಿಲ್ಲೆಯ ಜಗತ್ಪ್ರಸಿದ್ಧ ಜೋಗ ಜಲಪಾತ ಇಂದು ಬೆಳಗ್ಗೆಯಿಂದ ಪ್ರವಾಸಿಗರಿಗೆ ಮುಕ್ತವಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ ನೋಡಲು ಅವಕಾಶ ಸಿಗುತ್ತದೆ ಎಂಬ ಅಂಶ ತಿಳಿಯುತ್ತಲೇ ಪ್ರವಾಸಿಗರು ಇತ್ತ ಮುಖ ಮಾಡಿದ್ದಾರೆ. ಬೆಳಗ್ಗೆಯಿಂದಲೇ ತಂಡೋಪ ತಂಡವಾಗಿ ಪ್ರವಾಸಿಗರು ಆಗಮಿಸಿ ಜೋಗವನ್ನು ಕಣ್ತುಂಬಿಕೊಂಡರು.
ಲಾಕ್‌ಡೌನ್‌ನಿಂದ ಮನೆಯಲ್ಲಿಯೇ ಇದ್ದವರು ಜೋಗವನ್ನು ನೋಡಿ ಆನಂದಿಸಿದರು. ಮಳೆಗಾಲವಾದ್ದರಿಂದ ಜೋಗ ತುಂಬಿ ಹರಿಯುತ್ತಿದೆ. ಪ್ರವಾಸಿಗರ ಮನಕ್ಕೆ ಮುದ ನೀಡುತ್ತಿದೆ. ಸಾಗರ-ಜೋಗದ ಮಾರ್ಗದ ರಸ್ತೆಯಲ್ಲಿ ವಾಹನಗಳ ದಟ್ಟಣೆ ಉಂಟಾಗಿತ್ತು.
ಹುಲಿ- ಸಿಂಹಧಾಮ ಇಂದಿನಿಂದ ಓಪನ್ : ಲಾಕ್ಡೌನ್ ಸಡಿಲಿಕೆಯ ನಂತರ ಶಿವಮೊಗ್ಗ ತಾಲೂಕಿನ ತಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮ ಪ್ರವಾಸಿಗರಿಗೆ ಪ್ರವೇಶ ನೀಡಿದೆ. ಇಲ್ಲಿಗೂ ಜನ ತಮ್ಮ ಕುಟುಂಬ ಸಮೇತ ಆಗಮಿಸಿ ಪ್ರಾಣಿಗಳನ್ನು ನೋಡಿದರು.