ETV Bharat / state

ಬಿಜೆಪಿ ವಿರುದ್ಧ ಜೆಡಿಎಸ್​ನಿಂದ ಪ್ರತಿಭಟನೆ

author img

By

Published : Jul 12, 2019, 12:40 AM IST

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಒಟ್ಟಾಗಿ ಸೇರಿ ಸರ್ಕಾರ ರಚಿಸಿದ್ದು, ಉತ್ತಮ ಆಡಳಿತ ನೀಡುತ್ತಿವೆ. ಆದರೆ ಇದನ್ನು ಸಹಿಸಲಾರದ ಬಿಜೆಪಿಯವರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ರಾಜ್ಯದ ಮೈತ್ರಿ ಸರ್ಕಾರವನ್ನು ಬೀಳಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗದ ಗಾಂಧಿ ಪ್ರತಿಮೆ ಎದಿರು ಜೆಡಿಎಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ನಿರತ ಜೆಡಿಎಸ್​ ಕಾರ್ಯಕರ್ತರು

ಶಿವಮೊಗ್ಗ: ಆಪರೇಷನ್ ಕಮಲದ ಮೂಲಕ ಬಿಜೆಪಿಯು ರಾಜ್ಯದ ಮೈತ್ರಿ ಸರ್ಕಾರವನ್ನು ಬೀಳಿಸುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿ ಜಿಲ್ಲಾ ಜಾತ್ಯಾತೀತ ಜನತಾ ದಳ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿತು.

ಸುಗಮವಾಗಿ ನಡೆಯುತ್ತಿರುವ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಿ, ಬಿಜೆಪಿ ರಾಜಕೀಯ ಲಾಬಿ ನಡೆಸುತ್ತಿದೆ. ಪ್ರಜಾಪ್ರಭುತ್ವದಲ್ಲಿ ವಿಧನಾಸಭೆಯಲ್ಲಿ ಹೆಚ್ಚು ಬಹುಮತ ಹೊಂದಿರುವ ಪಕ್ಷ ಆಡಳಿತ ನಡೆಸುತ್ತದೆ. ಅದರಂತೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಸರ್ಕಾರ ರಚಿಸಿಕೊಂಡು ಉತ್ತಮ ಸರ್ಕಾರ ನಡೆಸಿಕೊಂಡು ಹೋಗುತ್ತಿವೆ. ಇದನ್ನು ಸಹಿಸದ ಬಿಜೆಪಿಯ ಕೇಂದ್ರ ಹಾಗೂ‌ ರಾಜ್ಯದ ನಾಯಕರು ಸರ್ಕಾರವನ್ನು ಬೀಳಿಸುವ ಯತ್ನ ನಡೆಸುತ್ತಿದ್ದಾರೆ. ರಾಜ್ಯದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರುಗಳಿಗೆ ಹಣದ ಆಮಿಷ ತೋರಿ, ಶಾಸಕರುಗಳು‌ ರಾಜೀನಾಮೆ ನೀಡುವಂತೆ ಮಾಡಿ ಸರ್ಕಾರವನ್ನು ಬೀಳಿಸುವ ಯತ್ನ ಮಾಡಲಾಗುತ್ತಿದೆ. ಅಮಿತ್ ಶಾ ಅವರು ರಾಷ್ಟ್ರದಲ್ಲಿ ವಿರೋಧ ಪಕ್ಷಗಳೇ ಇಲ್ಲದಂತೆ ಮಾಡಲು ಈ‌ ರೀತಿ ಆಪರೇಷನ್ ಕಮಲ ನಡೆಸುತ್ತಿದ್ದಾರೆ ಎಂದು ಜೆ.ಡಿ.ಮಂಜುನಾಥ್ ಪ್ರತಿಭಟನಾ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದರು .

ಪ್ರತಿಭಟನಾ ನಿರತ ಜೆಡಿಎಸ್​ ಕಾರ್ಯಕರ್ತರು

ಕೇಂದ್ರ ಸರ್ಕಾರ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಕುದುರೆ ವ್ಯಾಪಾರ ನಡೆಸುತ್ತಿದೆ. ಬಿಜೆಪಿ‌ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನಾ ಧರಣಿ ನಡೆಸಲಾಯಿತು.

Intro:ಆಪರೇಷನ್ ಕಮಲದ ಮೂಲಕ ಬಿಜೆಪಿ ರಾಜ್ಯದ ಮೈತ್ರಿ ಸರ್ಕಾರವನ್ನು ಬಿಳಿಸುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿ, ಜಿಲ್ಲಾ ಜಾತ್ಯತೀತ ಜನತಾ ದಳ ಗಾಂಧಿ ಪ್ರತಿಮೆ ಧರಣಿ ನಡೆಸಿತು. ಗಾಂಧಿ ಪಾರ್ಕ್ ನಲ್ಲಿ ಇರುವ ಗಾಂಧಿ ಪ್ರತಿಮೆ ಮುಂದೆ ಜೆಡಿಎಸ್ ಧರಣಿ ನಡೆಸಿತು. ಸುಗಮವಾಗಿ ನಡೆಯುತ್ತಿರುವ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಿ, ಬಿಜೆಪಿ ರಾಜಕೀಯ ಲಾಭಿ ನಡೆಸುತ್ತಿದೆ. ಪ್ರಜಾ ಪ್ರಭುತ್ವದಲ್ಲಿ ವಿಧನಾಸಭೆಯಲ್ಲಿ ಹೆಚ್ಚು ಬಹುಮತ ಹೊಂದಿರುವ ಪಕ್ಷ ಆಡಳಿತ ನಡೆಸುತ್ತದೆ. ಅದರಂತೆ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಮಾಡಿ ಕೊಂಡು ರಾಜ್ಯದಲ್ಲಿ ಸರ್ಕಾರ ರಚಿಸಿ ಕೊಂಡು ಉತ್ತಮ ಸರ್ಕಾರ ನಡೆಸಿಕೊಂಡು ಹೋಗುತ್ತಿದೆ.

Body:ಇದನ್ನು ಸಹಿಸದ ಬಿಜೆಪಿಯ ಕೇಂದ್ರ ಹಾಗೂ‌ ರಾಜ್ಯದ ನಾಯಕರುಗಳು ಸರ್ಕಾರವನ್ನು ಬಿಳಿಸುವ ಯತ್ನ ನಡೆಸುತ್ತಿದೆ. ರಾಜ್ಯದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರುಗಳಿಗೆ ಹಣದ ಆಮೀಷ ತೋರಿ ಶಾಸಕರುಗಳು‌ ರಾಜೀನಾಮೆ ನೀಡುವಂತೆ ಮಾಡಿ ಸರ್ಕಾರವನ್ನು ಬಿಳಿಸುವ ಯತ್ನ ಮಾಡುತ್ತಿದೆ. ಅಮಿತ್ ಷಾ ರವರು ರಾಷ್ಟ್ರದಲ್ಲಿ ವಿರೋಧ ಪಕ್ಷಗಳೆ ಇಲ್ಲದಂತೆ ಮಾಡಲು ಈ‌ ರೀತಿ ಆಪರೇಷನ್ ಕಮಲ ನಡೆಸುತ್ತಿದೆ.

Conclusion:ಕೇಂದ್ರ ಸರ್ಕಾರ ಅಧಿಕಾರವನ್ನು ದುರ್ಬಳಕೆ ಮಾಡಿ ಕೊಂಡು ಕುದುರೆ ವ್ಯಾಪಾರ ನಡೆಸುತ್ತಿದ್ದಾರೆ. ಬಿಜೆಪಿ‌ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನಾ ಧರಣಿ ನಡೆಸಲಾಯಿತು. ಪ್ರತಿಭಟನೆಯಲ್ಲಿ ಜಿಲ್ಲಾ ಜೆಡಿಎಸ್ ನ ಮುಖಂಡರುಗಳು,ಯುವ ಜನತಾದಳದವರು, ರಾಜ್ಯ ಹೆಚ್.ಡಿ. ಕುಮಾರಸ್ವಾಮಿ ಮಹಿಳಾ ಅಭಿಮಾನಿ ಬಳಗ ಸೇರಿ ಕಾರ್ಯಕರ್ತರು ಹಾಜರಿದ್ದರು.

ಬೈಟ್: ಜೆ.ಡಿ.ಮಂಜುನಾಥ್. ಯುವ ಜೆಡಿಎಸ್ ಕಾರ್ಯದರ್ಶಿ. ಶಿವಮೊಗ್ಗ.

ಕಿರಣ್ ಕುಮಾರ್. ಶಿವಮೊಗ್ಗ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.