ETV Bharat / state

ಸರ್ಕಾರ ಬಯಸಿದ್ರೇ ಮುಂದಿನ ತಿಂಗಳ ಒಂದು ದಿನದ ವೇತನ ನೀಡಲು ಸರ್ಕಾರಿ ನೌಕರರು ಸಿದ್ಧ.. - ಪ್ರವಾಹ ಪರಿಹಾರ

ಸರ್ಕಾರ ಬಯಸಿದರೆ ಮಾನವೀಯತೆಯ ನೆಲೆಗಟ್ಟಿನಲ್ಲಿ ಮುಂದಿನ ತಿಂಗಳು ಕೂಡ ಒಂದು ದಿನದ ವೇತನ ನೀಡಲು ಸರ್ಕಾರಿ ನೌಕರರು ಸಿದ್ಧ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಹೇಳಿದ್ದಾರೆ.

ಸರ್ಕಾರ ಬಯಸಿದರೆ, ಮುಂದಿನ ತಿಂಗಳು ಕೂಡ ಒಂದು ದಿನದ ವೇತನ ನೀಡಲು ಸರ್ಕಾರಿ ನೌಕರರು ಸಿದ್ಧ
author img

By

Published : Aug 17, 2019, 11:59 PM IST

ಶಿವಮೊಗ್ಗ: ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಷಡಕ್ಷರಿ ಅವರು, ರಾಜ್ಯ ಸರ್ಕಾರ ಬಯಸಿದರೆ, ಮುಂದಿನ ತಿಂಗಳ ಒಂದು ದಿನದ ವೇತನವನ್ನು ನೆರೆ ಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ನೀಡಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

ಸರ್ಕಾರ ಬಯಸಿದರೆ, ಮುಂದಿನ ತಿಂಗಳು ಕೂಡ ಒಂದು ದಿನದ ವೇತನ ನೀಡಲು ಸರ್ಕಾರಿ ನೌಕರರು ಸಿದ್ಧ

ನೂತನ ಪಿಂಚಣಿ ವ್ಯವಸ್ಥೆ ರದ್ದು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲು ತೀರ್ಮಾನಿಸಿದ್ದು, ಇದರಿಂದ ಸುಮಾರು 8 ಸಾವಿರ ಕೋಟಿ ರೂ. ಸರ್ಕಾರಕ್ಕೆ ಹೊರೆಯಾಗಲಿದೆ. ಹಂತ ಹಂತವಾಗಿ ಈ ಬಗ್ಗೆ ಚರ್ಚಿಸಿ ಸರ್ಕಾರದ ಜೊತೆ ಮಾತನಾಡಿ ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಮುಂದುವರೆಸಲು ಒತ್ತಾಯಿಸಲಾಗುವುದು. ಇದು ಸರ್ಕಾರಿ ನೌಕರರ ಪ್ರಸ್ತುತ ಸಮಸ್ಯೆಯಾಗಿದೆ. ಇದರ ಜೊತೆಗೆ ಶಿಕ್ಷಕರ ವರ್ಗಾವಣೆ, ಸುಮಾರು 2.4 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದು, ನೌಕರರಿಗೆ ತರಬೇತಿ ನೀಡುವುದು, ಆರೋಗ್ಯ ಹೀಗೆ ಎಲ್ಲಾ ರೀತಿಯ ಸೌಲಭ್ಯ ನೀಡುವುದು ಸೇರಿದಂತೆ ನೌಕರರ ಸರ್ವತೋಮುಖ ಅಭಿವೃದ್ದಿಯತ್ತ ಸಂಘ ವಿಕಾಸದತ್ತ ಹೆಜ್ಜೆ ಇಡಲಿದೆ ಎಂದು ಅವರು ಹೇಳಿದರು.

ಇತ್ತೀಚೆಗಷ್ಟೇ, ತಮ್ಮ ವಿರುದ್ಧ ಪಿತೂರಿ ನಡೆಸಲಾಗಿದ್ದು, ತಾವು ರಾಜ್ಯ ಸರ್ಕಾರಿ ನೌಕರರ ಚುನಾವಣೆ ಎದುರಿಸಬಾರದು. ತಾವು ಅಧ್ಯಕ್ಷರಾಗಬಾರದು ಎಂಬ ಹಿನ್ನೆಲೆಯಲ್ಲಿ, ತಮ್ಮನ್ನು ಮಾಜಿ ಶಾಸಕರೊಬ್ಬರು ವರ್ಗಾವಣೆ ಮಾಡಿಸಿದ್ದಾರೆ. ಅದನ್ನು ನಾನು ಯಾರ ಹತ್ತಿರ ಹೇಳಿಕೊಳ್ಳಲಿಲ್ಲ. ಈಗಲೂ ನಾನು ವರ್ಗಾವಣೆಯಲ್ಲಿಯೇ ಇದ್ದೇನೆ. ನನ್ನನ್ನು ತುಳಿಯುವ ಕೆಲಸವನ್ನು ಕೆಲವರು ಮಾಡಿದ್ದಾರೆ. ಈ ದ್ವೇಷವನ್ನು ನಾನು ಇಟ್ಟುಕೊಳ್ಳುವುದಿಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ರಾಜ್ಯಾಧ್ಯಕ್ಷ ಷಡಕ್ಷರಿ ಹೇಳಿದರು.

Intro:
ಸ್ಥಳ:- ಶಿವಮೊಗ್ಗ.
ಸ್ಲಗ್ :- ಸರ್ಕಾರ ಬಯಸಿದರೆ, ಮುಂದಿನ ತಿಂಗಳು ಕೂಡ ಒಂದು ದಿನದ ವೇತನ ನೀಡಲು ಸರ್ಕಾರಿ ನೌಕರರು ಸಿದ್ಧ – ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ.
ಫಾರ್ಮೆಟ್ :- ಎವಿಬಿ.

ANCHOR..........
ರಾಜ್ಯದಲ್ಲಿ ಉಂಟಾಗಿರುವ ನೆರೆ ಪರಿಹಾರಕ್ಕಾಗಿ ರಾಜ್ಯ ಸರ್ಕಾರಿ ನೌಕರರ ಸಂಘ ತನ್ನ ಒಂದು ದಿನದ ವೇತನ 200 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗಿದ್ದು, ಸರ್ಕಾರ ಬಯಸಿದರೆ, ಮಾನವೀಯತೆಯ ನೆಲೆಗಟ್ಟಿನಲ್ಲಿ, ಮುಂದಿನ ತಿಂಗಳು ಕೂಡ ಒಂದು ದಿನದ ವೇತನ ನೀಡಲು ಸರ್ಕಾರಿ ನೌಕರರು ಸಿದ್ಧರಾಗಿದ್ದಾರೆ ಎಂದು ಇತ್ತೀಚಿಗಷ್ಟೇ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಿ.ಎಸ್. ಷಡಾಕ್ಷರಿ ಹೇಳಿದ್ದಾರೆ. ಇಂದು ಮಾದ್ಯಮ ಪ್ರತಿನಿಧಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬಯಸಿದರೆ, ಮುಂದಿನ ತಿಂಗಳ ಒಂದು ದಿನದ ವೇತನವನ್ನು ನೆರೆ ಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ನೀಡಲು ನಾವು ಬದ್ಧರಾಗಿದ್ದೆವೆ ಎಂದು ಅವರು ಹೇಳಿದ್ದಾರೆ. ಇನ್ನು, ನೂತನ ಪಿಂಚಣಿ ವ್ಯವಸ್ಥೆ ರದ್ದು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲು ತೀರ್ಮಾನಿಸಿದ್ದು, ಇದು, ಸುಮಾರು 8 ಸಾವಿರ ಕೋಟಿ ರೂ.ಸರ್ಕಾರಕ್ಕೆ ಹೊರೆಯಾಗಲಿದೆ. ಹಂತ ಹಂತವಾಗಿ ಈ ಬಗ್ಗೆ ಚರ್ಚಿಸಿ ಸರ್ಕಾರದ ಜೊತೆ ಮಾತನಾಡಿ ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಮುಂದುವರೆಸಲು ಒತ್ತಾಯಿಸಲಾಗುವುದು. ಇದು ಸರ್ಕಾರಿ ನೌಕರರ ಪ್ರಸ್ತುತ ಸಮಸ್ಯೆಯಾಗಿದೆ. ಇದರ ಜೊತೆಗೆ ಶಿಕ್ಷಕರ ವರ್ಗಾವಣೆ ಸುಮಾರು 2.4 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದು, ನೌಕರರಿಗೆ ತರಬೇತಿ ನೀಡುವುದು, ಆರೋಗ್ಯ ಹೀಗೆ ಎಲ್ಲಾ ರೀತಿಯ ಸೌಲಭ್ಯ ನೀಡುವುದು ಸೇರಿದಂತೆ ನೌಕರರ ಸರ್ವತೋಮುಖ ಅಭಿವೃದ್ದಿಯತ್ತ ಸಂಘ ವಿಕಾಸ ಹೆಜ್ಜೆ ಇಡಲಿದೆ ಎಂದು ಅವರು ಹೇಳಿದ್ದಾರೆ. ಅದರಂತೆ, ಅದೇರೀತಿ, ಇತ್ತೀಚಿಗಷ್ಟೇ, ತಮ್ಮ ವಿರುದ್ಧ ಪಿತೂರಿ ನಡೆಸಲಾಗಿದ್ದು, ತಾವು ರಾಜ್ಯ ಸರ್ಕಾರಿ ನೌಕರರ ಚುನಾವಣೆ ಎದುರಿಬಾರದು. ತಾವು ಅಧ್ಯಕ್ಷರಾಗಬಾರದು ಎಂಬ ಹಿನ್ನೆಲೆಯಲ್ಲಿ, ತಮ್ಮನ್ನು ಮಾಜಿ ಶಾಸಕರೊಬ್ಬರು ವರ್ಗಾವಣೆ ಮಾಡಿಸಿದ್ದಾರೆ. ಅದನ್ನು ತಾವು ಯಾರ ಹತ್ತಿರ ಹೇಳಿಕೊಳ್ಳಲಿಲ್ಲ. ಈಗಲೂ ನಾನು ವರ್ಗಾವಣೆಯಲ್ಲಿಯೇ ಇದ್ದೇನೆ. ನನ್ನನ್ನು ತುಳಿಯುವ ಕೆಲಸವನ್ನು ಕೆಲವರು ಮಾಡಿದ್ದಾರೆ. ಈ ದ್ವೇಷವನ್ನು ನಾನು ಇಟ್ಟುಕೊಳ್ಳುವುದಿಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ರಾಜ್ಯಾಧ್ಯಕ್ಷ ಷಡಾಕ್ಷರಿ ಹೇಳಿದ್ದಾರೆ.

ಬೈಟ್ – ಸಿ.ಎಸ್. ಷಡಾಕ್ಷರಿ, ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ.

ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.