ETV Bharat / state

ಈಶ್ವರಪ್ಪ ಅಪರಾಧ ಮಾಡ್ದೇ ಇದ್ರೂ ಆರೋಪ ಬಂದಿದೆ : ಸಂತೋಷ್​ನದ್ದು ಡೆತ್​ನೋಟ್ ಇಲ್ಲ, ವಾಟ್ಸ್‌ಆ್ಯಪ್​ ಸಂದೇಶದ ತನಿಖೆ.. ಆರಗ - KS Eshwarappa not committing any crime

ಈ ಪ್ರಕರಣದಲ್ಲಿ ಎಲ್ಲ ಆಯಮಗಳಲ್ಲೂ ತನಿಖೆ ನಡೆಯುತ್ತಿದೆ. ಉಡುಪಿ ಎಸ್ಪಿ ನೇತೃತ್ವದಲ್ಲಿ ತನಿಖಾ ತಂಡ ರಚನೆಯಾಗಿದೆ. ಸದ್ಯದಲ್ಲೇ ವಿವರವಾದ ವರದಿ ಬರಲಿದೆ. ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರವೂ ಕೂಡ ಪೊಲೀಸ್ ತನಿಖೆಯಿಂದ ಹೊರ ಬರಲಿದೆ. ಉಳಿದವರಿಗೆ ಹುಲ್ಲುಕಡ್ಡಿ ಆಧಾರ ಎಂಬುವ ಹಾಗೆ ಕಾಂಗ್ರೆಸ್​ನವರು ಮಾಡುತ್ತಿದ್ದಾರೆ..

ಸಂತೋಷ್​ನದ್ದು ಡೆತ್​ನೋಟ್ ಇಲ್ಲ, ವಾಟ್ಸಪ್​ ಸಂದೇಶದ ತನಿಖೆ ಎಂದ  ಗೃಹ ಸಚಿವ ಆರಗ ಜ್ಞಾನೇಂದ್ರ

author img

By

Published : Apr 15, 2022, 1:45 PM IST

ಶಿವಮೊಗ್ಗ : ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಏನೂ ಅಪರಾಧ ಮಾಡದೇ ಇದ್ದರೂ, ಅವರ ಮೇಲೆ ಆರೋಪ ಬಂದಿದೆ. ಆದರೂ, ಅವರು ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕೆಂಬ ಉದ್ದೇಶದಿಂದ ರಾಜೀನಾಮೆ ನೀಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪ ರಾಜೀನಾಮೆ ನೀಡುತ್ತೇನೆಂದು ನನಗೂ ತಿಳಿಸಿದ್ದಾರೆ. ಸಚಿವ ಸ್ಥಾನದಲ್ಲಿದ್ದರೆ, ತನಿಖೆಗೆ ತೊಂದರೆಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಯಾವುದೇ ಒತ್ತಡವಿಲ್ಲ ಎಂದು ರಾಜೀನಾಮೆ ನೀಡುತ್ತಿದ್ದಾರೆ. ಒಂದು ವೇಳೆ ಯಾವುದೇ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡುತ್ತಿದ್ದರೆ, ಅದನ್ನು ಅವರೇ ಹೇಳಬೇಕೆಂದರು.

ಕಾಂಗ್ರೆಸ್ ವಿರೋಧ ಪಕ್ಷವಾಗಿ ಏನು ಮಾತನಾಡುತ್ತಾರೋ ಅದು ಮುಖ್ಯವಲ್ಲ. ಈಗಾಗಲೇ ಸಂತೋಷ್ ಪ್ರಕರಣದ ಬಗ್ಗೆ ಪೊಲೀಸರು ಪಾರದರ್ಶಕವಾಗಿ ತನಿಖೆ ನಡೆಸಿದ್ದಾರೆ. ತನಿಖೆಯಲ್ಲಿ ಏನು ಬರುತ್ತೋ ನೋಡೋಣ. ಸಂತೋಷ್​ನದ್ದು ಯಾವುದೇ ಡೆತ್ ನೋಟ್ ಇಲ್ಲ. ಅವರು ವಾಟ್ಸ್‌ಆ್ಯಪ್​ನಲ್ಲಿ ಟೈಪ್ ಮಾಡಿ ಕಳಿಸಿದ್ದಾರಷ್ಟೇ.. ಅವರೇ ಟೈಪ್ ಮಾಡಿದ್ದಾರೋ ಅಥವಾ ಬೇರೆಯವರು ಟೈಪ್ ಮಾಡಿದ್ದಾರೋ ತಿಳಿಯಬೇಕಿದೆ. ಅದರ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

ಸಂತೋಷ್​ನದ್ದು ಡೆತ್​ನೋಟ್ ಇಲ್ಲ, ವಾಟ್ಸ್ಆ್ಯಪ್​ ಸಂದೇಶದ ತನಿಖೆ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿರುವುದು..

ಈ ಪ್ರಕರಣದಲ್ಲಿ ಎಲ್ಲ ಆಯಮಗಳಲ್ಲೂ ತನಿಖೆ ನಡೆಯುತ್ತಿದೆ. ಉಡುಪಿ ಎಸ್ಪಿ ನೇತೃತ್ವದಲ್ಲಿ ತನಿಖಾ ತಂಡ ರಚನೆಯಾಗಿದೆ. ಸದ್ಯದಲ್ಲೇ ವಿವರವಾದ ವರದಿ ಬರಲಿದೆ. ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರವೂ ಕೂಡ ಪೊಲೀಸ್ ತನಿಖೆಯಿಂದ ಹೊರ ಬರಲಿದೆ. ಉಳಿದವರಿಗೆ ಹುಲ್ಲುಕಡ್ಡಿ ಆಧಾರ ಎಂಬುವ ಹಾಗೆ ಕಾಂಗ್ರೆಸ್​ನವರು ಮಾಡುತ್ತಿದ್ದಾರೆ.

ಕಾಂಗ್ರೆಸ್​​ ರಾಜಕಾರಣ ಮಾಡುತ್ತಿರುವುದು ಜನರಿಗೆ ತಿಳಿಯುತ್ತದೆ. ಮಹಾನಾಯಕ ಯಾರು ಎಂಬುದರ ಬಗ್ಗೆ ನನಗೇನು ಗೊತ್ತಿಲ್ಲ. ಆದರೆ, ಕಮೀಷನ್​ ವ್ಯವಹಾರದ ಬಗ್ಗೆ ಸಾಬೀತು ಮಾಡಬೇಕು. ಈ ಪ್ರಕರಣದಿಂದ ಬಿಜೆಪಿಗೆ ಯಾವುದೇ ಹಿನ್ನಡೆಯಾಗಲ್ಲ ಎಂದು ಗೃಹ ಸಚಿವರು ಹೇಳಿದರು.

ಇದನ್ನೂ ಓದಿ: ಸಿಬಿಐ ತನಿಖೆಯಾದ್ರೂ ಕೆ ಜೆ ಜಾರ್ಜ್ ಬಂಧಿಸಿರಲಿಲ್ಲ: ಈಶ್ವರಪ್ಪ ಬಂಧನ ಬಗ್ಗೆ ತನಿಖಾಧಿಕಾರಿಗಳ ತೀರ್ಮಾನವೆಂದ ಸಿಎಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.