ಶಿವಮೊಗ್ಗ: ಜಿಲ್ಲೆಯಲ್ಲಿ ಮೃಗಶಿರ ಮಳೆ ಜೋರಾಗಿ ಸುರಿಯುತ್ತಿದೆ. ಪ್ರತಿವರ್ಷ ಅತಿ ಹೆಚ್ಚು ಮಳೆ ಸುರಿಯುವ ಹೊಸನಗರ ತಾಲೂಕಿನಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 292 ಮಿಮೀ ಮೀಟರ್ ಮಳೆಯಾಗಿದೆ. ಪರಿಣಾಮ ಲಿಂಗನಮಕ್ಕಿ ಜಲಾಶಯಕ್ಕೆ ಇಂದು 45.413 ಕ್ಯೂಸೆಕ್ ನೀರು ಒಳ ಹರಿವು ಬಂದಿದೆ. ಶರಾವತಿ ಹಿನ್ನೀರಿನ ಪ್ರದೇಶದಲ್ಲಿ 217 ಮಿಮೀ ಮಳೆಯಾಗಿದೆ. ಜೋಗ ಜಲಪಾತದಲ್ಲಿ ಶರಾವತಿ ನದಿ ಭೋರ್ಗರೆದು ಧುಮ್ಮಿಕ್ಕಿ ಹರಿಯುತ್ತಿದೆ.
ಕಳೆದ 24 ಗಂಟೆಯಲ್ಲಿ ತಾಲೂಕುವಾರು ಮಳೆ ವರದಿ ಇಂತಿದೆ:
ಶಿವಮೊಗ್ಗ-28 ಮಿಮೀ
ಭದ್ರಾವತಿ-27.20 ಮಿಮೀ
ತೀರ್ಥಹಳ್ಳಿ-123.20 ಮಿಮೀ
ಸಾಗರ-66.20 ಮಿಮೀ
ಶಿಕಾರಿಪುರ- 35 ಮಿಮೀ
ಸೊರಬ-76.20 ಮಿಮೀ
ಹೊಸನಗರ-292.40 ಮಿಮೀ
ಜಿಲ್ಲೆಯಲ್ಲಿ ಸರಾಸರಿ 92.60 ಮಿಮೀ ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ:
ತುಂಗಾ ಜಲಾಶಯ
ಗರಿಷ್ಠ ಮಟ್ಟ- 588.24 ಮೀಟರ್
ಇಂದಿನ ನೀರಿನ ಮಟ್ಟ- 588.24 ಮೀಟರ್
ಜಲಾಶಯದ ಒಳ ಹರಿವು- 31.277 ಕ್ಯೂಸೆಕ್
ಹೊರ ಹರಿವು-31.277 ಕ್ಯೂಸೆಕ್
ಕಳೆದ ವರ್ಷ-588.24 ಮೀಟರ್
ಭದ್ರಾ ಜಲಾಶಯ:
ಗರಿಷ್ಠ ಮಟ್ಟ-186 ಅಡಿ
ಇಂದಿನ ಜಲಾಶಯದ ನೀರಿನ ಮಟ್ಟ-146.60 ಅಡಿ
ಒಳ ಹರಿವು-21.598 ಕ್ಯೂಸೆಕ್
ಹೊರ ಹರಿವು- ಇಲ್ಲ
ಕಳೆದ ವರ್ಷ- 135 ಅಡಿ
ಲಿಂಗನಮಕ್ಕಿ ಜಲಾಶಯ:
ಗರಿಷ್ಠ ಮಟ್ಟ-1819 ಅಡಿ
ಇಂದಿನ ನೀರಿನ ಮಟ್ಟ-1781.45 ಅಡಿ
ಒಳ ಹರಿವು-45.413 ಕ್ಯೂಸೆಕ್
ಹೊರ ಹರಿವು-2.017 ಕ್ಯೂಸೆಕ್ (ವಿದ್ಯುತ್ ಉತ್ಪಾದನೆಗೆ)
ಕಳೆದ ವರ್ಷ-1760.20 ಅಡಿ
ಓದಿ: ರಾಜ್ಯದಲ್ಲಿ ನಾಯಕತ್ವದ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ: ಸಿಎಂ ಯಡಿಯೂರಪ್ಪ