ETV Bharat / state

ಮಲೆನಾಡಿನಲ್ಲಿ ಮುಂದುವರಿದ ಮಳೆಯ ಆರ್ಭಟ: ಮನೆ ಕುಸಿದು ವ್ಯಕ್ತಿ ಸಾವು, ಮತ್ತೆ ಪ್ರವಾಹ ಭೀತಿ - ಪ್ರವಾಹ ಭೀತಿ

ಮಲೆನಾಡಿನಲ್ಲಿ ಮತ್ತೆ ಮಳೆಯ ಆರ್ಭಟ ಪ್ರಾರಂಭವಾಗಿದ್ದು, ಶಿವಮೊಗ್ಗ ಜಿಲ್ಲೆಯ ಪ್ರಮುಖ ನದಿಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಇನ್ನು ಭದ್ರಾವತಿ ತಾಲೂಕಿನ ಹೊಸಸಿದ್ದಾಪುರ ಗ್ರಾಮದಲ್ಲಿ ತಡರಾತ್ರಿ ಮನೆ ಕುಸಿದಿದ್ದು, ಗ್ರಾಮದ ಗುರು ಎಂಬುವವರು ಗಂಭೀರ ಗಾಯಗಳಿಂದಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮಲೆನಾಡಿನಲ್ಲಿ ಮುಂದುವರಿದ ಮಳೆಯ ಆರ್ಭಟ
author img

By

Published : Sep 8, 2019, 5:55 PM IST

ಶಿವಮೊಗ್ಗ: ಜಲಪ್ರಳಯದ ನಂತರ ಕೆಲವು ದಿನಗಳ ಕಾಲ ಬಿಡುವು ನೀಡಿದ್ದ ಮಳೆ ಮಲೆನಾಡಿನಲ್ಲಿ ಮತ್ತೆ ಆರ್ಭಟಿಸಲು ಪ್ರಾರಂಭಿಸಿದೆ. ಕಳೆದ ನಾಲ್ಕು ದಿನಗಳಿಂದ ಶಿವಮೊಗ್ಗ ಜಿಲ್ಲೆಯ ಹಲವು ಭಾಗಗಳಲ್ಲಿ ಸುರಿಯುತ್ತಿರುವ ಬಾರೀ ಮಳೆಗೆ ಹಲವೆಡೆ ಗದ್ದೆ, ತೋಟಗಳು ಜಲಾವೃತಗೊಂಡಿದ್ದು, ಜಿಲ್ಲೆಯ ಪ್ರಮುಖ ನದಿಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಮಲೆನಾಡಿನಲ್ಲಿ ಮುಂದುವರಿದ ಮಳೆಯ ಆರ್ಭಟ: ಮನೆ ಕುಸಿದು ವ್ಯಕ್ತಿ ದುರ್ಮರಣ

ಇನ್ನು, ಭದ್ರಾವತಿ ತಾಲೂಕಿನ ಹೊಸಸಿದ್ದಾಪುರ ಗ್ರಾಮದಲ್ಲಿ ತಡರಾತ್ರಿ ಮನೆ ಕುಸಿದಿದ ಪರಿಣಾಮ ಗ್ರಾಮದ ಗುರು (40) ಎಂಬುವವರು ಗಂಭೀರ ಗಾಯಗಳಿಂದಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಭದ್ರಾವತಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತೀರ್ಥಹಳ್ಳಿ ಭಾಗದಲ್ಲಿ ತುಂಗಾ ನದಿಯಲ್ಲಿ ಒಳಹರಿವು ಹೆಚ್ಚಾಗಿದ್ದು, ಗಾಜನೂರು ಜಲಾಶಯದ 13 ಗೇಟ್​ಗಳ ಮೂಲಕ 37 ಸಾವಿರ ಕ್ಯೂಸೆಕ್​​ ನೀರನ್ನು ನದಿಗೆ ಬಿಡಲಾಗುತ್ತಿದೆ. ಹಾಗೆಯೇ ಭದ್ರಾ ಜಲಾಶಯದಿಂದ 26 ಸಾವಿರ ಕ್ಯೂಸೆಕ್​​ ಹಾಗೂ ಸಾಗರ ತಾಲೂಕಿನ ಲಿಂಗನಮಕ್ಕಿ ಡ್ಯಾಂನಿಂದ ಶರಾವತಿ ನದಿಗೆ 48 ಸಾವಿರ ಕ್ಯೂಸೆಕ್​​ ನೀರನ್ನು ಬಿಡಲಾಗುತ್ತಿದೆ. ಸೊರಬ ತಾಲೂಕಿನ ದಂಡಾವತಿ ಹಾಗೂ ವರದಾ ನದಿಗಳು ಸಹ ಉಕ್ಕಿ ಹರಿಯುತ್ತಿವೆ. ಇನ್ನು ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಹೊಸನಗರ, ಭದ್ರಾವತಿ, ಸೊರಬ ಭಾಗದಲ್ಲಿ ಮಳೆ ಮುಂದುವರೆದಿದ್ದು, ಇದೇ ಸ್ಥಿತಿ ಮುಂದುವರಿದರೆ ಮತ್ತೊಮ್ಮೆ ಪ್ರವಾಹ ಎದುರಾಗಲಿದೆ.

Intro:ಶಿವಮೊಗ್ಗ,
ಫಾರ್ಮೆಟ್: ಎವಿ
ಸ್ಲಗ್: ಮಲೆನಾಡಿನಲ್ಲಿ ಮುಂದುವರಿದ ಮಳೆಯ ಆರ್ಭಟ.

ಆ್ಯಂಕರ್................
ಜಲಪ್ರಳಯದ ನಂತರ ಕೆಲವು ದಿನಗಳ ಕಾಲ ಬಿಡುವು ನೀಡಿದ್ದ ಮಳೆ ಮಲೆನಾಡಿನಲ್ಲಿ ಮತ್ತೇ ಆರ್ಭಟಿಸಲು ಪ್ರಾರಂಭಿಸಿದೆ. ಕಳೆದ ನಾಲ್ಕು ದಿನಗಳಿಂದ ಶಿವಮೊಗ್ಗ ಜಿಲ್ಲೆಯ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೇಡೆ ಗದ್ದೇ ತೋಟಗಳು ಜಲಾವೃತಗೊಂಡಿದ್ದು, ಜಿಲ್ಲೆಯ ಪ್ರಮುಖ ನದಿಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಭಾರೀ ಮಳೇಯಿಂದಾಗಿ ಭದ್ರಾವತಿ ತಾಲೂಕಿನ ಹೊಸಸಿದ್ದಾಪುರ ಗ್ರಾಮದಲ್ಲಿ ತಡರಾತ್ರಿ ಮನೆ ಕುಸಿದಿದ್ದು, ವ್ಯಕ್ತಿಯೋರ್ವರು ಮೃತಪಟ್ಟಿದ್ದಾರೆ. ಗ್ರಾಮದ ಗುರು(40) ಎಂಬುವವರು ಗಂಭೀರ ಗಾಯಗಳಿಂದಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಗುರು ಅವರ ಪತ್ನಿ ಹಾಗೂ ಇಬ್ಬರು ಮಕ್ಕಳಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಭದ್ರಾವತಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ತೀರ್ಥಹಳ್ಳಿ ಭಾಗದಲ್ಲಿ ಆಗುತ್ತಿರುವ ಭಾರೀ ಮಳೆಯೀಂದಾಗಿ ತುಂಗಾ ನದಿಯಲ್ಲಿ ಒಳಹರಿವು ಹೆಚ್ಚಾಗಿದ್ದು, ಗಾಜನೂರು ಜಲಾಶಯದ 13 ಗೇಟ್ ಗಳ ಮೂಲಕ 37 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಹಾಗೇಯೇ ಭದ್ರಾ ಜಲಾಶಯದಿಂದ 26 ಸಾವಿರ ಕ್ಯೂಸೆಕ್ಸ್ ಹಾಗೂ ಸಾಗರ ತಾಲೂಕಿನ ಲಿಂಗನಮಕ್ಕಿ ಡ್ಯಾಂ ನಿಂದ ಶರಾವತಿ ನದಿಗೆ 48 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡಲಾಗುತ್ತಿದೆ. ಸೊರಬ ತಾಲೂಕಿನ ದಂಡಾವತಿ ಹಾಗೂ ವರದಾ ನದಿಗಳು ಸಹ ಉಕ್ಕಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ. ಇನ್ನೂ ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಹೊಸನಗರ, ಭದ್ರಾವತಿ, ಸೊರಬ ಭಾಗದಲ್ಲಿ ಮಳೆ ಮುಂದುವರಿದಿದ್ದು, ಇದೇ ಸ್ಥಿತಿ ಮುಂದುವರಿದರೇ ಮತ್ತೋಮ್ಮೆ ಪ್ರವಾಹ ಎದುರಾಗಲಿದೆ.

ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.