ETV Bharat / state

ಸರ್ಕಾರಿ ಶಾಲೆಗಳು ಮೂಲಸೌಕರ್ಯಗಳಿಲ್ಲದೆ ಮುಚ್ಚುವ ಸ್ಥಿತಿ ತಲುಪಿವೆ: ಕೆ.ಎಸ್.ಈಶ್ವರಪ್ಪ - undefined

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನ ಬಳಕೆ ಮಾಡಿಕೊಂಡು ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡುವ ಯೋಜನೆ ಇದೆ. ಆದರೆ ಸರ್ಕಾರದ ಅನುದಾನದಲ್ಲಿ ಶಾಲೆಗಳ ದುರಸ್ತಿ ಅಸಾಧ್ಯವಾಗಿದೆ. ನಗರದಲ್ಲಿರುವ ಬಹುತೇಕ ಸರ್ಕಾರಿ ಶಾಲೆಗಳು ಮೂಲ ಸೌಕರ್ಯಗಳಿಲ್ಲದೆ ಮುಚ್ಚುವ ಸ್ಥಿತಿ ತಲುಪಿದ್ದು, ಇದೇ ರೀತಿ ಮುಂದುವರೆದರೆ ಶಾಲೆಗಳನ್ನು ಮುಚ್ಚಬೇಕಾಗುತ್ತದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಅವರು ಬೇಸರ ವ್ಯಕ್ತಪಡಿಸಿದರು.

ಶಾಸಕ ಕೆ.ಎಸ್.ಈಶ್ವರಪ್ಪ
author img

By

Published : Jun 21, 2019, 11:03 PM IST

ಶಿವಮೊಗ್ಗ: ನಗರದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳಿಲ್ಲ. ಇನ್ನು ಕೆಲವು ಶಾಲೆಗಳಂತೂ ಮುರಿದು ಬೀಳುವ ಸ್ಥಿತಿಯಲ್ಲಿವೆ. ಇಂತಹ ಶಾಲೆಗಳಲ್ಲಿ ಮಕ್ಕಳ ಕಲಿಕೆ ಮುಂದುವರೆದರೆ ಸರ್ಕಾರಿ ಶಾಲೆಗಳಿಗೆ ಒಬ್ಬ ವಿದ್ಯಾರ್ಥಿಯೂ ಸೇರದೆ ಮುಚ್ಚಬೇಕಾದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಆತಂಕ ವ್ಯಕ್ತಪಡಿಸಿದರು.

ಶಾಸಕ ಕೆ.ಎಸ್.ಈಶ್ವರಪ್ಪ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನ ಬಳಕೆ ಮಾಡಿಕೊಂಡು ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡುವ ಯೋಜನೆ ಇದೆ. ಆದರೆ ಸರ್ಕಾರದ ಅನುದಾನದಲ್ಲಿ ಶಾಲೆಗಳ ದುರಸ್ತಿ ಅಸಾಧ್ಯವಾಗಿದೆ. ಈಗಾಗಲೇ ನಗರದ ಸರ್ಕಾರಿ ಶಾಲೆಗಳಲ್ಲಿನ ಕುಂದುಕೊರತೆ, ಸಮಸ್ಯೆಗಳು, ನಿರೀಕ್ಷೆಗಳು, ಶೌಚಾಲಯ, ಕುಡಿಯುವ ನೀರು, ಕಟ್ಟಡ ದುರಸ್ತಿ, ಶಾಲಾ ಕಾಂಪೌಂಡ್, ಸುಣ್ಣಬಣ್ಣ ಮುಂತಾದವುಗಳ ಕುರಿತು ಆಯಾ ಶಾಲೆಗಳ ಮುಖ್ಯಸ್ಥರು ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರುಗಳಿಂದ ಪ್ರಸ್ತಾವನೆಯನ್ನು ತರಿಸಿಕೊಳ್ಳಲಾಗಿದೆ. ಅದರ ಖರ್ಚು, ವೆಚ್ಚದ ಕುರಿತು ಪ್ರಸ್ತಾವನೆ ತಯಾರಿಸಲಾಗಿದ್ದು, ಅಂದಾಜು ಪಟ್ಟಿಯಂತೆ ಆದ್ಯತೆಯನುಸಾರ ದಾನಿಗಳಿಂದ ಸಿಗುವ ಅನುದಾನದಿಂದ ದುರಸ್ತಿ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಪಾಲಿಕೆಯಿಂದ 2 ಕೋಟಿ ರೂ ಅನುದಾನ:

ನಗರದ ಶಾಲೆಗಳ ಅಭಿವೃದ್ಧಿಗಾಗಿ ಮಹಾನಗರಪಾಲಿಕೆ ವತಿಯಿಂದ 2 ಕೋಟಿ ರೂಗಳ ಅನುದಾನ ನೀಡಲು ಉದ್ದೇಶಿಸಲಾಗಿದೆ. ಅಲ್ಲದೆ ಶಾಲೆಗಳ ಶೌಚಾಲಯಗಳ ದುರಸ್ತಿಗಾಗಿ ಪ್ರತ್ಯೇಕ ಯೋಜನೆಯಡಿಯಲ್ಲಿ ಕ್ರಿಯಾ ಯೋಜನೆ ರೂಪಿಸಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ನಗರದಲ್ಲಿ ಅಭಿವೃದ್ಧಿಗಾಗಿ ಗುರುತಿಸಲಾಗಿರುವ 85 ಸರ್ಕಾರಿ ಶಾಲೆಗಳಿಗೆ ಬೇಕಾದ ಪೀಠೋಪಕರಣವನ್ನು ಒದಗಿಸಿ ಕೊಡಲು ರಾಷ್ಟ್ರೀಯ ಶಿಕ್ಷಣ ಸಮಿತಿಯ ಮುಖ್ಯಸ್ಥರು ಸಭೆಯಲ್ಲಿ ಒಪ್ಪಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ್, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್, ಉಪಮೇಯರ್ ಎನ್.ಎನ್.ಚನ್ನಬಸಪ್ಪ, ಡಿಡಿಪಿಐ ಸುಮಂಗಳ ಪಿ.ಕುಚಿನಾಡ, ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ವರಪ್ಪ ಮತ್ತಿತರರು ಹಾಜರಿದ್ದರು.

Intro:ಶಿವಮೊಗ್ಗ,
ನಗರದ ಬಹುತೇಕ ಶಾಲೆಗಳಲ್ಲಿ ಮೂಲ ಸೌಕರ್ಯ ವೇ ಇಲ್ಲ, ಕೆಲವು ಶಾಲೆಗಳಂತೂ ಮುರಿದು ಬೀಳುವ ಸ್ಥಿತಿಯಲ್ಲಿವೆ. ಇಂತಹ ಶಾಲೆಯಲ್ಲಿಯೇ ಮಕ್ಕಳು ಶಿಕ್ಷಣ ಕಲಿಯಬೇಕಾದ ಸ್ಥಿತಿ ಇದೆ. ಇದು ಹೀಗೆ  ಮುಂದುವರೆದರೆ ಸರಕಾರಿ ಶಾಲೆಗಳಿಗೆ ಒಬ್ಬ ವಿದ್ಯಾರ್ಥಿಗಳು ಸೇರದ ಮುಚ್ಚಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. 
ಇದಕ್ಕೆ  ಅವಕಾಶ ನೀಡಿದೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅನುದಾನ ಬಳಕೆ ಮಾಡಕೊಂಡು ಸರಕಾರಿ ಶಾಲೆಗಳ ಅಭಿವೃದ್ಧಿ ಮಾಡುವ ಯೋಜನೆ ಇದೆ. ಆದರೆ, ಸರಕಾರದ ಅನುದಾನದಲ್ಲಿ ಶಾಲೆಗಳ ದುರಸ್ಥಿ ಅಸಾಧ್ಯವಾಗಿದೆ. ಹೀಗಾಗಿ ನಗರದ ಸ್ಥಳೀಯ ಸಂಸ್ಥೆಗಳ ಸಹಕಾರವೂ ಬೇಕು ಎಂದು ಜಿಲ್ಲಾಕಾರಿ ಕಚೇರಿಯಲ್ಲಿ ನಗರದ ಉದ್ಯಮಿಗಳು ಹಾಗೂ ಸಂಘ-ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ  ಹೇಳಿದರು.
ಈಗಾಗಲೇ ನಗರದ ಸರಕಾರಿ ಶಾಲೆಗಳಲ್ಲಿನ ಕುಂದುಕೊರತೆ,  ಸಮಸ್ಯೆಗಳು, ನಿರೀಕ್ಷೆಗಳು, ಶೌಚಾಲಯ, ಕುಡಿಯುವ ನೀರು, ಕಟ್ಟಡ ದುರಸ್ತಿ, ಶಾಲಾ ಕಾಂಪೌಂಡ್, ಸುಣ್ಣಬಣ್ಣ ಮುಂತಾದವುಗಳ ಕುರಿತು ಆಯಾ ಶಾಲೆಗಳ ಮುಖ್ಯಸ್ಥರು ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರುಗಳಿಂದ ಪ್ರಸ್ತಾವನೆಯನ್ನು ತರಿಸಿಕೊಳ್ಳಲಾಗಿದೆ. ಅದರ ಖರ್ಚು, ವೆಚ್ಚದ ಕುರಿತು ಪ್ರಸ್ತಾವನೆ ತಯಾರಿಸಲಾಗಿದ್ದು, ಅಂದಾಜುಪಟ್ಟಿಯಂತೆ ಆದ್ಯತೆಯನುಸಾರ ದಾನಿಗಳಿಂದ ಸಿಗುವ ಅನುದಾನದಿಂದ ದುರಸ್ತಿ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಪಾಲಿಕೆಯಿಂದ ೨ ಕೋಟಿ:
ನಗರದ ಶಾಲೆಗಳ ಅಭಿವೃದ್ಧಿ ಗಾಗಿ ಮಹಾನಗರಪಾಲಿಕೆ ವತಿಯಿಂದ ೨ಕೋಟಿ ರೂ.ಗಳ ಅನುದಾನ ನೀಡಲು ಉದ್ದೇಶಿಸಲಾಗಿದೆ. ಅಲ್ಲದೇ ಶಾಲೆಗಳ ಶೌಚಾಲಯಗಳ ದುರಸ್ತಿಗಾಗಿ ಪ್ರತ್ಯೇಕ ಯೋಜನೆಯಡಿಯಲ್ಲಿ ಕ್ರಿಯಾಯೋಜನೆ ರೂಪಿಸಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ.  
ನಗರದಲ್ಲಿ ಅಭಿವೃದ್ಧಿಗಾಗಿ ಗುರುತಿಸಲಾಗಿರುವ ೮೫  ಸರಕಾರಿ ಶಾಲೆಗಳಿಗೆ ಬೇಕಾದ ಪೀಠೊಪಕರಣವನ್ನು  ಒದಗಿಸಿಕೊಡಲು ರಾಷ್ಟ್ರೀಯ ಶಿಕ್ಷಣ ಸಮಿತಿಯ ಮುಖ್ಯಸ್ಥರು ಸಭೆಯಲ್ಲಿ ಒಪ್ಪಿಗೆ ಸೂಚಿಸಿದರು.  ಈ ಉದ್ದೇಶಿತ ಕಾರ್ಯಕ್ಕೆ ನಮ್ಮಿಂದ ೨೦ಲಕ್ಷ ರೂ.ಗಳ ಸಹಾಯಧನ ನೀಡುತ್ತೇವೆ. ಇದಕ್ಕೆ ಸಹಕಾರಿಯಾಗಿ ಸಮಾನನಿಯನ್ನು ಒದಗಿಸಿದಲ್ಲಿ ಸುಮಾರು ೪೦ಲಕ್ಷ ರೂ.ಗಳ ಅಂದಾಜು ವೆಚ್ಚದಲ್ಲಿ ಶಾಲಾ ಕಟ್ಟಡಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ನಗರದ ರೌಂಡ್‌ಟೇಬಲ್ ಸಂಸ್ಥೆಯ ಮುಖ್ಯಸ್ಥರು ತಿಳಿಸಿದರು.

Body:ಸಭೆಯಲ್ಲಿ ಜಿಲ್ಲಾಕಾರಿ ಕೆ.ಎ.ದಯಾನಂದ್, ಅಪರ ಜಿಲ್ಲಾಕಾರಿ ಜಿ.ಅನುರಾಧ. ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್, ಉಪಮೇಯರ್ ಎನ್.ಎನ್.ಚನ್ನಬಸಪ್ಪ, ಡಿಡಿಪಿಐ ಸುಮಂಗಳ ಪಿ.ಕುಚಿನಾಡ, ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಕ್ಷೇತ್ರಶಿಕ್ಷಣಾಕಾರಿ ಲೋಕೇಶ್ವರಪ್ಪ ಮತ್ತಿತರರು ಹಾಜರಿದ್ದರು.
ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:ಭೀಮಾನಾಯ್ಕ ಎಸ್ ಶಿವಮೊಗ್ಗ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.