ETV Bharat / state

ಮೈತ್ರಿ ಪಕ್ಷಗಳ ಕಚ್ಚಾಟದಿಂದಲೇ ಸರ್ಕಾರ ಬೀಳುತ್ತದೆ: ಬಿಎಸ್​ವೈ ಭವಿಷ್ಯ - ಯಡಿಯೂರಪ್ಪ

ರಾಘವೇಂದ್ರ ಗೆಲುವು ಅಸಾಧ್ಯ ಎಂದು ಅಪಪ್ರಚಾರ ನಡೆಸಲಾಗುತ್ತಿತ್ತು. ಆದರೆ ನಮಗೆ ಬೈಂದೂರು ಕ್ಷೇತ್ರದಲ್ಲೇ 70 ಸಾವಿರಕ್ಕೂ ಹೆಚ್ಚು ಮತಗಳಿಂದ ಲೀಡ್ ಬಂದಿದೆ. ಈಶ್ವರಪ್ಪ ಅವರ ಪ್ರಯತ್ನದಿಂದ ಶಿವಮೊಗ್ಗದಲ್ಲೂ 47 ಸಾವಿರ ವೋಟ್ ಲೀಡ್ ಬಂದಿದೆ ಎಂದು ಬಿಎಸ್​ವೈ ವಿವರಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ
author img

By

Published : Jun 1, 2019, 12:16 PM IST

ಶಿವಮೊಗ್ಗ: ಮೈತ್ರಿ ಪಕ್ಷಗಳ ಕಚ್ಚಾಟದಿಂದಲೇ ಸರ್ಕಾರ ಬಿದ್ದು ಹೋಗುತ್ತದೆ. ಸ್ವಲ್ಪ ದಿನ ನಾವು ಶಾಂತವಾಗಿರುತ್ತೇವೆ. ನಾವು ಮಧ್ಯ ಪ್ರವೇಶಿಸುವುದಿಲ್ಲ, ಬದಲಿಗೆ ಕಾದು ನೋಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಿಳಿಸಿದರು.

ನಗರದಲ್ಲಿ ಮಾತನಾಡಿದ ಅವರು, ರಾಜ್ಯದಿಂದ ಬಿಜೆಪಿಯ 25 ಸಂಸದರು ಆಯ್ಕೆಯಾಗಿದ್ದಾರೆ. ನಾವು ಬೆಂಬಲ ನೀಡಿದ ಸುಮಲತಾ ಸಹ ಗೆದ್ದಿರುವುದು ಇತಿಹಾಸದಲ್ಲಿ ದಾಖಲೆ ಸೃಷ್ಟಿಸಿದೆ. ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಸೀಮಿತವಾಗಿದ್ದ ಏಳೂ ಕ್ಷೇತ್ರಗಳಲ್ಲಿ ನಾವು ಗೆದ್ದಿರುವುದು ಮತ್ತೊಂದು ವಿಶೇಷ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ

ಸ್ವಲ್ಪ ಪ್ರಯತ್ನ ಮಾಡಿದ್ದರೆ ಹಾಸನವನ್ನೂ ಗೆಲ್ಲಬಹುದಿತ್ತು ಎಂದ ಅವರು, ರಾಘವೇಂದ್ರ ಗೆಲುವು ಅಸಾಧ್ಯ ಎಂದು ಅಪಪ್ರಚಾರ ನಡೆಸಲಾಗುತ್ತಿತ್ತು. ಆದರೆ ನಮಗೆ ಬೈಂದೂರು ಕ್ಷೇತ್ರದಲ್ಲೇ 70 ಸಾವಿರ ಮತಕ್ಕೂ ಹೆಚ್ಚು ಲೀಡ್ ಬಂದಿದೆ. ಈಶ್ವರಪ್ಪ ಅವರ ಪ್ರಯತ್ನದಿಂದ ಶಿವಮೊಗ್ಗದಲ್ಲೂ 47 ಸಾವಿರ ವೋಟ್ ಲೀಡ್ ಬಂದಿದೆ ಎಂದು ವಿವರಿಸಿದರು.

ದೇಶದ ಎಲ್ಲ ರೈತರಿಗೆ 6 ಸಾವಿರ ರೂಪಾಯಿ ನೀಡುವ ಐತಿಹಾಸಿಕ ತೀರ್ಮಾನವನ್ನು ಪ್ರಧಾನಿ ತೆಗೆದುಕೊಂಡಿದ್ದಾರೆ. ನರೇಂದ್ರ ಮೋದಿ ಅವರನ್ನು ನಾನು ಅಭಿನಂದಿಸುತ್ತೇನೆ ಎಂದರು.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಾವು ಇನ್ನಷ್ಟು ಸ್ಥಾನ ಗೆಲ್ಲಬೇಕಿತ್ತು. ರಾಜ್ಯದಲ್ಲಿ ಭೀಕರ ಬರಗಾಲವಿದೆ. ಕುಡಿಯುವ ನೀರಿಗೆ ಹಾಹಾಕಾರವಿದೆ. ಆದರೆ ಯಾವುದೇ ಮಂತ್ರಿಗಳು, ಸಿಎಂ, ಅಧಿಕಾರಿಗಳು ಪ್ರವಾಸ ಮಾಡುತ್ತಿಲ್ಲ. ಇದೇ 5 ರಂದು ಬರಗಾಲದ‌ ಬಗ್ಗೆ ಶಾಸಕರು ಹಾಗೂ ಸಂಸದರ ಜೊತೆ ಚರ್ಚಿಸಿ ಮುಂದಿನ ಹೋರಾಟ ರೂಪಿಸುತ್ತೇವೆ ಎಂದು ತಿಳಿಸಿದರು.

Intro:*ಶಿವಮೊಗ್ಗ ಬ್ರೇಕಿಂಗ್:*
ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆ.

ರಾಜ್ಯದಿಂದ ಬಿಜೆಪಿಯ 25 ಸಂಸದರು ಆಯ್ಕೆಯಾಗಿದ್ದಾರೆ.

ನಾವು ಬೆಂಬಲ ನೀಡಿದ ಸುಮಲತಾ ಗೆದ್ದಿರುವುದು ಇತಿಹಾಸದಲ್ಲಿ ದಾಖಲೆ.

ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಸೀಮಿತವಾಗಿದ್ದ ಏಳೂ ಕ್ಷೇತ್ರಗಳಲ್ಲಿ ನಾವು ಗೆದ್ದಿರುವುದು ವಿಶೇಷ.

ಸ್ವಲ್ಪ ಪ್ರಯತ್ನ ಮಾಡಿದ್ದರೆ ಹಾಸನವನ್ನೂ ಗೆಲ್ಲಬಹುದಿತ್ತು.

ರಾಜ್ಯದ ನಾಲ್ವರಿಗೆ ಕೇಂದ್ರದಲ್ಲಿ ಸಚಿವ ಸಂಪುಟದಲ್ಲಿ ಅವಕಾಶ ಸಿಕ್ಕಿದೆ.

ರಾಘವೇಂದ್ರ ಗೆಲುವು ಅಸಾಧ್ಯ ಎಂದು ಅಪಪ್ರಚಾರ ನಡೆಸಲಾಗುತ್ತಿತ್ತು.

ಆದರೆ ನಮಗೆ ಬೈಂದೂರು ಕ್ಷೇತ್ರದಲ್ಲೇ 70 ಸಾವಿರ ಮತಕ್ಕೂ ಹೆಚ್ಚು ಲೀಡ್ ಬಂದಿದೆ.

ಈಶ್ವರಪ್ಪ ಅವರ ಪ್ರಯತ್ನದಿಂದ ಶಿವಮೊಗ್ಗದಲ್ಲೂ 47 ಸಾವಿರ ಓಟ್ ಲೀಡ್ ಬಂದಿದೆ.

ದೇಶದ ಎಲ್ಲ ರೈತರಿಗೆ 6 ಸಾವಿರ ರೂಪಾಯಿ ನೀಡುವ ಐತಿಹಾಸಿಕ ತೀರ್ಮಾನವನ್ನು ಪ್ರಧಾನಿ ತೆಗೆದುಕೊಂಡಿದ್ದಾರೆ.

ನರೇಂದ್ರ ಮೋದಿ ಅವರನ್ನು ನಾನು ಅಭಿನಂದಿಸುತ್ತೇನೆ.

*ರಾಜ್ಯದ ರಾಜಕಾರಣದ ಬಗ್ಗೆ ಸ್ವಲ್ಪ ದಿನ ನಾವು ಶಾಂತವಾಗಿರುತ್ತೇವೆ.*

*ಮೈತ್ರಿ ಸರ್ಕಾರ ಅವರ ಕಚ್ಚಾಟದಿಂದಲೇ ಬಿದ್ದು ಹೋಗುತ್ತದೆ.*

*ಅವರೇ ಬಡಿದಾಡಿಕೊಳ್ಳುತ್ತಿದ್ದಾರೆ. ಅದನ್ನು ನಾವು ನೋಡುತ್ತಿದ್ದೇವೆ.*

*ಅವರೇ ಬಡಿದಾಡಿಕೊಂಡು ಸರ್ಕಾರ ಬೀಳುತ್ತದೆ.*

*ಹೀಗಾಗಿ ನಾವು ಮಧ್ಯ ಪ್ರವೇಶಿಸುವುದಿಲ್ಲ.‌ ಬದಲಿಗೆ ಕಾದು ನೋಡುತ್ತೇವೆ.*

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಾವು ಇನ್ನಷ್ಟು ಸ್ಥಾನ ಗೆಲ್ಲಬೇಕಿತ್ತು.

ರಾಜ್ಯದಲ್ಲಿ ಭೀಕರ ಬರಗಾಲವಿದೆ. ಕುಡಿಯುವ ನೀರಿಗೆ ಹಾಹಾಕಾರವಿದೆ.

ಆದರೆ ಯಾವುದೇ ಮಂತ್ರಿಗಳು, ಸಿಎಂ, ಅಧಿಕಾರಿಗಳು ಪ್ರವಾಸ ಮಾಡುತ್ತಿಲ್ಲ.

5 ನೇ ತಾರೀಖು ಬರಗಾಲದ‌ ಬಗ್ಗೆ ಶಾಸಕರು ಹಾಗೂ ಸಂಸದರ ಜೊತೆ ಚರ್ಚಿಸಿ ಮುಂದಿನ ಹೋರಾಟ ರೂಪಿಸುತ್ತೇವೆ.
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.