ETV Bharat / state

ದೃಷ್ಟಿ ಇಲ್ಲದಿದ್ದರೂ ವ್ಯಾಸಂಗದಲ್ಲಿ ಈತ ಬಲು ಚೂಟಿ: ಅಂಧತ್ವ ಮೆಟ್ಟಿ ನಿಂತು ಶಿವಮೊಗ್ಗ ಯುವಕನ ಸಾಧನೆ - ಶಿವಮೊಗ್ಗದಲ್ಲಿ ಕುರುಡ ವಿದ್ಯಾರ್ಥಿಯ ಸಾಧನೆ

ಅಂಧತ್ವ ಶಾಪ ಎಂದು ಭಾವಿಸುವವರಿಗೆ ಸೆಡ್ಡು ಹೊಡೆಯುವಂತೆ ಈ ಯುವಕ ಸಾರ್ಥಕತೆಯ ಬದುಕು ಕಟ್ಟಿಕೊಳ್ಳುತ್ತಿದ್ದಾನೆ. ಆಧುನಿಕ ಯುಗದಲ್ಲಿ ಕೊರತೆಗಳ ನೆಪಹೇಳಿ ಕೊರಗುವವರಿಗೆ ಈ ಯುವಕ ನಿಜಕ್ಕೂ ಮಾದರಿ. ಹುಟ್ಟಿನಿಂದಲೇ ಬೆಳಕನ್ನೇ ನೋಡದ ಈ ಯುವಕನ ಬಹುಮುಖ ಪ್ರತಿಭೆಯ ಕುರಿತಾಗಿದೆ ಈ ಸ್ಟೋರಿ..

good eductaion Performance of  blind student in Shimoga
ದೃಷ್ಠಿ ಇಲ್ಲದಿದ್ದರೂ ವ್ಯಾಸಂಗದಲ್ಲಿ ಈತ ಬಲು ಚೂಟಿ
author img

By

Published : Mar 25, 2021, 10:49 PM IST

ಶಿವಮೊಗ್ಗ: ಹುಟ್ಟಿನಿಂದಲೇ ಬೆಳಕಿನ ಕಿರಣಗಳನ್ನು ನೋಡದ ಈ ವ್ಯಕ್ತಿಯ ಹೆಸರು ರಜತ್ ದೀಕ್ಷಿತ್. ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿ ವಾಸಮಾಡ್ತಿರೋ ಇವರ ಶೈಕ್ಷಣಿಕ ಸಾಧನೆ ಅನುಕರಣೀಯ. ಕುವೆಂಪು ವಿವಿಯ ಅಂತಿಮ ವರ್ಷದ ಇಂಗ್ಲಿಷ್ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ್ಯಾಂಕ್ ಪಡೆದಿರುವ ರಜತ್​, ಎಸ್​ಎಸ್​ಎಲ್​ಸಿಯಲ್ಲಿ ಶೇಕಡಾ 96 ರಷ್ಟು ಸಾಧನೆ ಮಾಡಿದ್ದಾರೆ.​ ದ್ವಿತೀಯ ಪಿಯುಸಿಯಲ್ಲಿ ಶೇ 95 ಅಂಕ ಗಳಿಸಿದ್ದು, ಪದವಿಯಲ್ಲಿಯೂ ಎರಡನೇ ರ್ಯಾಂಕ್​ ಪಡೆದಿದ್ದಾರೆ.

ದೃಷ್ಠಿ ಇಲ್ಲದಿದ್ದರೂ ವ್ಯಾಸಂಗದಲ್ಲಿ ಈತ ಬಲು ಚೂಟಿ

ರಜತ್​ಗೆ ಆರಂಭದಿಂದಲೂ ಕುಟುಂಬದ ಬೆಂಬಲ ಸಿಕ್ಕಿದೆ. ತಾಯಿ ಶೀಲಾ ಅವರೇ ರಜತ್​ನ ಸ್ನಾತಕೋತ್ತರ ಮತ್ತು ಪದವಿ ಪರೀಕ್ಷೆಗಳನ್ನು ಬರೆದಿದ್ದಾರೆ. ಹಾಗಂತ ಓದಿನಲ್ಲಿ ಮಾತ್ರವಲ್ಲ. ಕರ್ನಾಟಕ ಸಂಗೀತದಲ್ಲಿ ಸೀನಿಯರ್ ಪರೀಕ್ಷೆಯಲ್ಲೂ ಪಾಸಾಗಿದ್ದು, ಬ್ರೈಲ್​ ಮೂಲಕ ಪುಸ್ತಕ ಓದುವ ಅಭ್ಯಾಸವನ್ನೂ ಕೂಡಾ ರೂಢಿಸಿಕೊಂಡಿದ್ದಾರೆ.

ಬಹುಮುಖ ಪ್ರತಿಭೆಯಾಗಿರುವ ರಜತ್​ ದೀಕ್ಷಿತ್ ಈಗ ನೆಟ್​ ಪರೀಕ್ಷೆಯನ್ನು ತೆಗೆದುಕೊಂಡಿದ್ದು, ಮುಂದೆ ಪ್ರೊಫೆಸರ್ ಆಗುವ ಆಸೆ ಹೊಂದಿದ್ದಾರೆ. ಐಎಎಸ್ ಆಗುವ ಬಯಕೆಯೂ ಇದ್ದು ಇಂಗ್ಲಿಷ್ ಸಾಹಿತ್ಯದಲ್ಲಿ ಪಿಹೆಚ್​ಡಿ ಮಾಡುವ ಕನಸೂ ಇವರಿಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.