ETV Bharat / state

ಮಲೆನಾಡಿನಲ್ಲಿ ವರುಣ ಆರ್ಭಟಕ್ಕೆ ಜನ ತತ್ತರ : ಶಿವಮೊಗ್ಗ ಜಿಲ್ಲೆಯ ಸಂಪೂರ್ಣ ವರದಿ

author img

By

Published : Jul 23, 2021, 5:34 PM IST

ಎಡಬಿಡದೆ ಮಳೆ ಸುರಿಯುತ್ತಿರುವುದರಿಂದ ಶಿವಮೊಗ್ಗ ನಗರದ ಟಿಪ್ಪು ನಗರದಲ್ಲಿ ಮನೆಯೊಂದು ಕುಸಿದು ಬಿದ್ದಿದೆ. ಅದೇ ರೀತಿ ಸಾಗರದಲ್ಲೂ ಸಹ ಮನೆ ಕುಸಿದು ಬಿದ್ದಿದೆ. ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಾಂತ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ..

Full rain report of Shimoga district
ಶಿವಮೊಗ್ಗ ಜಿಲ್ಲೆಯ ಸಂಪೂರ್ಣ ವರದಿ

ಶಿವಮೊಗ್ಗ : ಮಲೆನಾಡಿನ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇದರಿಂದ ಈ ಭಾಗದ ಜನರಲ್ಲಿ ಪ್ರವಾಹ ಭೀತಿ ಎದುರಾಗಿದೆ. ಅಲ್ಲದೆ ಕೆಲವು ಕಡೆಗಳಲ್ಲಿ ನದಿಗಳೆಲ್ಲ ತುಂಬಿ ಹೋಗಿದ್ದು, ರೈಲು ಸೇರಿದಂತೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಮಳೆಯಿಂದ ರೈಲು ಸಂಚಾರಕ್ಕೆ ತಡೆ : ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಸಾಗರ ತಾಲೂಕಿನ ಕಾನ್ಲೆ ಗ್ರಾಮದ ಬಳಿ ರೈಲು ಹಳಿಯ ಮೇಲೆ ನೀರುನಿಂತ ಕಾರಣ ರೈಲು ಸಂಚಾರವನ್ನು ಸಾಗರ ಪಟ್ಟಣಕ್ಕೆ ಕೊನೆ‌ ಮಾಡಲಾಗಿದೆ.

ಇನ್ನು, ತಾಳಗುಪ್ಪಕ್ಕೆ ಹೋಗಬೇಕಿದ್ದ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಬೇರೆ ವ್ಯವಸ್ಥೆ ಮಾಡಿತ್ತು. ಸಾಗರ ತಾಲೂಕಿನದ್ಯಾಂತ ವಿಪರೀತ ಮಳೆ ಸುರಿಯುತ್ತಿದೆ. ಇದರಿಂದ ಅನೇಕ ಜನವಸತಿ ಪ್ರದೇಶಗಳು, ಗದ್ದೆ, ತೋಟಗಳಿಗೆ ನೀರು‌ ನುಗ್ಗಿದೆ. ಇನ್ನೂ ಅನೇಕ ಗ್ರಾಮಗಳ ರಸ್ತೆ ಸಂಚಾರ ಬಂದ್ ಆಗಿದೆ.

ಮಳೆಯಿಂದ ರೈಲ್ವೆ ಹಳಿ ಮೇಲೆ ನೀರು ನಿಂತು ಸಂಚಾರ ಬಂದ್​​

ಪ್ರವಾಹದ ಆತಂಕದಲ್ಲಿ ಮಲೆನಾಡಿಗರು : ಕಳೆದೆರಡು ದಿನಗಳಿಂದ ಮಳೆ ಆರ್ಭಟ ಜೋರಾಗಿದೆ. ತುಂಗಾ ನದಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಆರಂಭವಾಗಿದೆ. ನಿನ್ನೆಯಿಂದ ಕೊಪ್ಪ, ಶೃಂಗೇರಿ, ತೀರ್ಥಹಳ್ಳಿ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ನದಿ ತೀರದ ಜನರಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಮಳೆಗೆ ಶಿವಮೊಗ್ಗ ನಗರ ತತ್ತರ

ಸಾಗರದಲ್ಲಿ ವರದಾ ನದಿ ಅಬ್ಬರ : ಶಾಸಕ ಹಾಲಪ್ಪ ಭೇಟಿ, ಪರಿಶೀಲನೆ

ಸಾಗರ ಪಟ್ಟಣದಲ್ಲಿ ಕಳೆದ ನಾಲ್ಕು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿರುವುದರಿಂದ ವರದಾ ನದಿ ಸೇರಿದಂತೆ ಹಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದ ಪಟ್ಟಣದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಪಟ್ಟಣದ ಶ್ರೀರಾಮಪುರ ಬಡಾವಣೆ, ವಿನೋಬನಗರ ಹಾಗೂ ಶ್ರೀರಾಮಪುರ ಬಡಾವಣೆಯ ಆಂಜನೇಯ ದೇವಾಲಯಕ್ಕೆ ನೀರು ನುಗ್ಗಿದೆ.

ಶಾಸಕರ ರೌಂಡ್ಸ್ :

ಶಾಸಕ ಹಾಲಪ್ಪ ಬೆಳ್ಳಂಬೆಳಗ್ಗೆ ನೀರು ನುಗ್ಗಿ ಅನಾಹುತಗಳಾದ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ನಗರಸಭೆಯ ಅಧಿಕಾರಿಗಳು ಸೇರಿದಂತೆ ಎಸಿರವರ ಜೊತೆ ಪಟ್ಟಣದ ರೌಂಡ್ಸ್​ ಹಾಕಿದ್ದಾರೆ. ತಗ್ಗು ಪ್ರದೇಶದ ಜನರಿಗಾಗಿ ನಗರಸಭೆ ಪಕ್ಕದ ಮೈದಾನದಲ್ಲಿ ಗಂಜಿ ಕೇಂದ್ರವನ್ನು ತೆರೆಯಲಾಗಿದೆ. ನಗರಸಭೆ ವತಿಯಿಂದ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ.

ಸಾಗರದಲ್ಲಿ ಹಾನಿಗೊಳಗಾದ ಪ್ರದೇಶಕ್ಕೆ ಶಾಸಕ ಹಾಲಪ್ಪ ಭೇಟಿ

ಲಿಂಗನಮಕ್ಕಿಗೆ 2 ಲಕ್ಷಕ್ಕೂ ಅಧಿಕ ಕ್ಯೂಸೆಕ್‌ ನೀರು : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಮಳೆ ಹೆಚ್ಚಾಗಿರುವುದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಇಂದು 2 ಲಕ್ಷದ 42 ಸಾವಿರ ಕ್ಯೂಸೆಕ್ ನೀರು ಒಳ ಹರಿವು ಬಂದಿದೆ. ಶರಾವತಿ ಹಿನ್ನೀರಿನ ಪ್ರದೇಶದಲ್ಲಿ 1,577 ಮೀ.ಮೀಟರ್ ಮಳೆಯಾಗಿದೆ.

ಇದರಿಂದ ಜಲಾಶಯದ ನೀರಿನ ಮಟ್ಟ 1,800 ಅಡಿಗೆ ತಲುಪಿದೆ. ಇಂದು ಜಲಾಶಯಕ್ಕೆ 2 .55 ಅಡಿ‌‌ ನೀರು ಬಂದಿದೆ. ಹೊಸನಗರ ಭಾಗದಲ್ಲಿ ಹೆಚ್ಚು‌ ಮಳೆಯಾಗುತ್ತಿರುವುದರಿಂದ ಜೋಗ ಜಲಪಾತದಲ್ಲಿ ಶರಾವತಿ ನದಿ ಬೋರ್ಗರೆದು ಧುಮ್ಮುಕ್ಕಿ ಹರಿಯುತ್ತಿದೆ.

ಕಳೆದ‌ 24 ಗಂಟೆಯಲ್ಲಿ ಮಳೆ ಬಂದ ತಾಲೂಕುವಾರು ವರದಿ ಇಂತಿದೆ:

ಶಿವಮೊಗ್ಗ-256.20 ಮಿ.ಮೀ.

ಭದ್ರಾವತಿ-277.40 ಮಿ.ಮೀ.

ತೀರ್ಥಹಳ್ಳಿ-839 ಮಿ.ಮೀ.

ಸಾಗರ-659 ಮಿ.ಮೀ.

ಶಿಕಾರಿಪುರ- 294 ಮಿ.ಮೀ.

ಸೊರಬ- 387.80 ಮಿ.ಮೀ.

ಹೊಸನಗರ-1577.20 ಮಿ.ಮೀ.

ಜಿಲ್ಲೆಯಲ್ಲಿ ಸರಾಸರಿ 613.17 ಮಿ.ಮಿ ಮಳೆಯಾಗಿದೆ.

ಜಲಾಶಯಗಳ ನೀರಿನ ಮಟ್ಟ:

ತುಂಗಾ ಜಲಾಶಯ-

ಗರಿಷ್ಟ ಮಟ್ಟ- 588.24 ಮೀಟರ್.

ಇಂದಿನ ನೀರಿನ ಮಟ್ಟ- 588.24 ಮೀಟರ್

ಜಲಾಶಯದ ಒಳ ಹರಿವು- 60 ಸಾವಿರ ಕ್ಯೂಸೆಕ್.

ಹೊರ ಹರಿವು-60 ಸಾವಿರ ಕ್ಯೂಸೆಕ್.

ಕಳೆದ ವರ್ಷ-588.24 ಮೀಟರ್.

ಭದ್ರಾ ಜಲಾಶಯ:

ಗರಿಷ್ಟ ಮಟ್ಟ-186 ಅಡಿ.

ಇಂದಿನ ಜಲಾಶಯದ ನೀರಿನ ಮಟ್ಟ-171.1ಅಡಿ.

ಒಳ ಹರಿವು-39.286 ಕ್ಯೂಸೆಕ್.

ಹೊರ ಹರಿವು- 478

ಕಳೆದ ವರ್ಷ- 153.7 ಅಡಿ.

ಲಿಂಗನಮಕ್ಕಿ ಜಲಾಶಯ:

ಗರಿಷ್ಟ ಮಟ್ಟ-1819 ಅಡಿ.

ಇಂದಿನ ನೀರಿನ ಮಟ್ಟ-1800 ಅಡಿ.

ಒಳ ಹರಿವು-2.42.000 ಕ್ಯೂಸೆಕ್.

ಹೊರ ಹರಿವು-2.905 ಕ್ಯೂಸೆಕ್

ಕಳೆದ ವರ್ಷ-1770.90 ಅಡಿ

ಮಳೆಗೆ ಶಿವಮೊಗ್ಗ ಹಾಗೂ ಸಾಗರದಲ್ಲಿ ಮನೆ ಕುಸಿತ

ಎಡಬಿಡದೆ ಮಳೆ ಸುರಿಯುತ್ತಿರುವುದರಿಂದ ಶಿವಮೊಗ್ಗ ನಗರದ ಟಿಪ್ಪು ನಗರದಲ್ಲಿ ಮನೆಯೊಂದು ಕುಸಿದು ಬಿದ್ದಿದೆ. ಅದೇ ರೀತಿ ಸಾಗರದಲ್ಲೂ ಸಹ ಮನೆ ಕುಸಿದು ಬಿದ್ದಿದೆ. ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಾಂತ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ.

ಪ್ರವಾಹ ಭೀತಿ : ಮುನ್ನೆಚ್ಚರಿಕೆ ಕ್ರಮಕ್ಕೆ ಯಮುನಾ ರಂಗೇಗೌಡ ಒತ್ತಾಯ

ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಪಾಲಿಕೆ ವಿರೋಧ ಪಕ್ಷದ ‌ನಾಯಕಿ ಯಮುನಾ ರಂಗೇಗೌಡ ಭೇಟಿ

ತುಂಗಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮಹಾನಗರ ಪಾಲಿಕೆ ಶೀಘ್ರವೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ ಆಗ್ರಹಿಸಿದ್ದಾರೆ.

ನಗರದ ಟಿಪ್ಪು ನಗರದ ಜಹರ್ ಉನ್ನಿಸಾ ಎಂಬುವರ ಮನೆ ಬಿದ್ದಿದ್ದು, ಸ್ಥಳಕ್ಕೆ ಮಹಾನಗರ ಪಾಲಿಕೆ ವಿರೋಧ ಪಕ್ಷದ ‌ನಾಯಕಿ ಯಮುನಾ ರಂಗೇಗೌಡ ಹಾಗೂ ಪಾಲಿಕೆ ಸದಸ್ಯೆ ಮೆಹರ್ ಷರಿಫ್ ಮನೆ ಬಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.