ಶಿವಮೊಗ್ಗ: ಮಕ್ಕಳು ಮೊಬೈಲ್, ಐಪ್ಯಾಡ್, ಲ್ಯಾಪ್‍ಟಾಪ್‍ನ ನಿರಂತರ ಬಳಕೆಯಿಂದ ಮಾನಸಿಕ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ ಅಲ್ಲದೇ ಗಂಭೀರ ಸ್ವರೂಪದ ದೃಷ್ಟಿ ದೋಷಕ್ಕೆ ಒಳಗಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಇಂತಹ ಸಾಧನಗಳಿಂದ ಮುಕ್ತರನ್ನಾಗಿಸುವ ಅಗತ್ಯವಿದೆ ಎಂದು ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಯಂತ್‍ಕುಮಾರ್ ತಿಳಿಸಿದ್ದಾರೆ.
![KN_SMG_01_jatha_KA10011](https://etvbharatimages.akamaized.net/etvbharat/prod-images/4717054_thumbnail.jpg)
ಆರೋಗ್ಯ ಇಲಾಖೆಯು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಮತ್ತು 20ನೇ ವಿಶ್ವದೃಷ್ಟಿ ದಿನಾಚರಣೆ ಅಂಗವಾಗಿ ‘ಮಾನಸಿಕ ಆರೋಗ್ಯ ಪ್ರಚಾರ ಮತ್ತು ಆತ್ಮಹತ್ಯೆ ತಡೆಗಟ್ಟುವಿಕೆ’ ಎಂಬ ಘೋಷಣೆಯಡಿ ಏರ್ಪಡಿಸಲಾಗಿದ್ದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಅತಿ ಚಿಕ್ಕ ವಯಸ್ಸಿನ ಮಕ್ಕಳು ಮೊಬೈಲ್ ಗೀಳಿಗೆ ಅಂಟಿಕೊಂಡಿದ್ದಾರೆ. ಇದರಿಂದ ಅವರನ್ನು ಮುಕ್ತಗೊಳಿಸಲು ಮೊಬೈಲ್‍ಗೆ ಪರ್ಯಾಯವಾಗಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಅಥವಾ ಅವರಿಗೆ ಮನೋರಂಜನೆ ನೀಡಬಹುದಾದ ಆಸಕ್ತಿಯ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುವಂತೆ ಪೋಷಕರು ನೋಡಿಕೊಳ್ಳುವ ಅಗತ್ಯವಿದೆ ಎಂಬ ಅಭಿಪ್ರಾಯ ತಿಳಿಸಿದರು.