ಶಿವಮೊಗ್ಗ: ನಗರದ ಕುವೆಂಪು ರಂಗಮಂದಿರದಲ್ಲಿ ಮಾದಿಗ ಸಮಾಜದ ಇತಿಹಾಸ, ಕಲೆ, ಸಂಸ್ಕೃತಿ ಬಗ್ಗೆ ಮಾಹಿತಿ ನೀಡುವ ಮಾದಿಗ ದಂಡೋರಾ ಆ್ಯಪ್ ಹಾಗೂ ಮಾದಾರ ಚನ್ನಯ್ಯ ಜಯಂತಿಯನ್ನು ಮಾದಿಗ ದಂಡೋರ ಜಿಲ್ಲಾ ಸಮಿತಿ ವತಿಯಿಂದ ಆಚರಿಸಲಾಯಿತು.
ಮಾದಿಗ ದಂಡೋರಾ ಆ್ಯಪ್‌ನ ಮಾಜಿ ಕೇಂದ್ರ ಸಚಿವ ಕೆ ಹೆಚ್ ಮುನಿಯಪ್ಪ ಉದ್ಘಾಟಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾದಾರ ಚೆನ್ನಯ್ಯ ಸ್ವಾಮಿಗಳು, ಕೋಡಿಹಳ್ಳಿ ಗುರುಪೀಠದ ಮಾರ್ಕಾಂಡೇಯ ಮುನಿ ಸ್ವಾಮಿಗಳು, ಹಿರಿಯೂರು ಗುರುಪೀಠದ ಷಡಕ್ಷರಿ ಮುನಿಸ್ವಾಮಿಗಳು, ಜಿಲ್ಲಾ ಪಂಚಾಯತ್ ಸದಸ್ಯ ಕೆ. ಇ ಕಾಂತೇಶ್ ಹಾಗೂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.